• search
  • Live TV
ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಅರ್ಜುನ ಸಾರಥ್ಯದಲ್ಲಿ ಆರಂಭವಾಗಿದೆ ಜಂಬೂಸವಾರಿ ತಾಲೀಮು

By ಮೈಸೂರು ಪ್ರತಿನಿಧಿ
|

ಮೈಸೂರು, ಆಗಸ್ಟ್ 28: ನಾಡಹಬ್ಬ ವಿಶ್ವವಿಖ್ಯಾತ ದಸರಾಗೆ ಸಿದ್ಧತೆ ಭರ್ಜರಿಯಾಗಿ ನಡೆಯುತ್ತಿದೆ. ಅರಮನೆ ಪ್ರವೇಶಿಸಿರುವ ಜಂಬೂಸವಾರಿ ಗಜಪಡೆ ಇಂದಿನಿಂದ ತಾಲೀಮನ್ನೂ ಆರಂಭಿಸಿದೆ.

ನಿನ್ನೆಯಷ್ಟೇ ಗಜಪಡೆಯ ತೂಕ ಪರಿಶೀಲನೆ ನಡೆದಿದೆ. ಇಂದು ಬೆಳ್ಳಗ್ಗೆಯಿಂದ ಅವುಗಳಿಗೆ ತಾಲೀಮು ಆರಂಭಗೊಂಡಿದೆ. ಬೆಳ್ಳಂಬೆಳಗ್ಗೆ ಕ್ಯಾಪ್ಟನ್ ಅರ್ಜುನ ನೇತೃತ್ವದಲ್ಲಿ ಗಜಪಡೆ ತಾಲೀಮು ಆರಂಭಿಸಿದೆ.

ದಸರಾ ಆನೆಗಳಿಗೆ ಬರೋಬ್ಬರಿ 98 ಲಕ್ಷದ ವಿಮೆ !

ಅರ್ಜುನನ ನೇತೃತ್ವದಲ್ಲಿ ಅಭಿಮನ್ಯು, ಧನಂಜಯ, ಈಶ್ವರ, ವಿಜಯಾ, ವರಲಕ್ಷ್ಮಿ ಸೇರಿ ಎಲ್ಲ ಆರು ಆನೆಗಳು ತಾಲೀಮಿನಲ್ಲಿ ಪಾಲ್ಗೊಂಡಿವೆ. ಮೈಸೂರು ಅರಮನೆಯಿಂದ ಗಜಪಡೆ ತಾಲೀಮು ಆರಂಭಿಸಿದ್ದು, ಆಲ್ಬರ್ಟ್ ವಿಕ್ಟರ್ ರಸ್ತೆ, ನ್ಯೂ ಸಯ್ಯಾಜಿರಾವ್ ರಸ್ತೆಗಳಲ್ಲಿ ಸಾಗಿ ಬಳಿಕ ಅರಮನೆ ಸೇರಲಿದೆ.

ಅರಮನೆಗೆ ಬಂದಾಯ್ತು ಗಜಪಡೆ; ಇಲ್ಲಿದೆ ನೋಡಿ ದಸರಾ ಆನೆಗಳ ಬಯೋಡಾಟಾ

ಸೋಮವಾರ ಮೈಸೂರು ಅರಮನೆಗೆ ಮೊದಲ ತಂಡದ ಆರು ಆನೆಗಳು ಬಂದಿದ್ದವು. ಜಿಲ್ಲಾಡಳಿತ ಸಾಂಪ್ರದಾಯಿಕವಾಗಿ ಆನೆಗಳನ್ನು ಬರ ಮಾಡಿಕೊಂಡಿದ್ದು, ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ನೇತೃತ್ವದಲ್ಲಿ ಗಜಪಡೆಗೆ ಪೂಜೆ ನಡೆದಿತ್ತು.

English summary
The preparation for the world-famous Dasara is started in Mysuru. The Jambusavari Gajapade which entered the palace has begun training.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X