ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಗೀತಾ ಮಹಾದೇವಪ್ರಸಾದ್ ವಿರುದ್ಧ ಭ್ರಷ್ಟಾಚಾರದ ದೂರು

By Yashaswini
|
Google Oneindia Kannada News

ಚಾಮರಾಜನಗರ, ಜುಲೈ 4 : ಶಾಸಕಿ ಗೀತಾ ಮಹದೇವ್ ಪ್ರಸಾದ್ ಮೇಲೆ ಪ್ರಕರಣ ಒಂದರ ತೂಗುಗತ್ತಿ ನಿಂತಿದೆ. ರೂಫ್ ಟಾಪ್ ಸೋಲಾರ್ ಘಟಕ ಅಳವಡಿಕೆ ಯೋಜನೆಯಲ್ಲಿ ಬೇನಾಮಿ ಕಂಪನಿ ಮೂಲಕ ಟೆಂಡರ್ ಪಡೆದಿದ್ದಾರೆ ಎಂದು ಗುಂಡ್ಲುಪೇಟೆ ಕ್ಷೇತ್ರದ ಕಾಂಗ್ರೆಸ್ ಶಾಸಕಿ ಗೀತಾ ಮಹದೇವಪ್ರಸಾದ್ ವಿರುದ್ಧ ಅಕ್ರಮದ ಆರೋಪ ಕೇಳಿಬಂದಿದ್ದು, ಆದಾಯ ತೆರಿಗೆ ಇಲಾಖೆಯಲ್ಲಿ ದೂರು ದಾಖಲಾಗಿದೆ.

ರಾಜ್ಯದಲ್ಲಿ ನಿರ್ಮಾಣಗೊಳ್ಳಲಿರುವ 193 ಗೋದಾಮು ನಿಗಮದ ಕಟ್ಟಡಗಳಲ್ಲಿ ರೂಫ್ ಟಾಪ್ ಸೋಲಾರ್ ಘಟಕಗಳಲ್ಲಿ 18 ಲಕ್ಷ ರೂ. ಪಾವತಿಸಿ 2.500 ಕೋಟಿ ರೂ. ಮೊತ್ತದ ಟೆಂಡರ್ ಪಡೆದಿರುವ ಆರೋಪ ಎದುರಾಗಿದ್ದು, ರಾಜ್ಯ ಗೋದಾಮು ನಿಗಮದಲ್ಲಿ ರೂಫ್ ಟಾಪ್ ಸೋಲಾರ್ ಉತ್ಪಾದನಾ ಘಟಕ ಅಳವಡಿಕೆಯಲ್ಲಿ ಟೆಂಡರ್ ಪ್ರಕ್ರಿಯೆಯಲ್ಲಿ ಕೇವಲ ಶಾಸಕಿ ಗೀತಾ ಮಹದೇವಪ್ರಸಾದ್ ಅವರ ನಿಯಂತ್ರಣದಲ್ಲಿರುವ ಕಂಪನಿ ಮಾತ್ರ ಭಾಗವಹಿಸಿತ್ತು ಎನ್ನಲಾಗುತ್ತಿದೆ.

ಮೈಸೂರು: ರೆಡ್ ಹ್ಯಾಂಡ್ ಆಗಿ ಎಸಿಬಿ ಬಲೆಗೆ ಬಿದ್ದ ಅಧಿಕಾರಿಮೈಸೂರು: ರೆಡ್ ಹ್ಯಾಂಡ್ ಆಗಿ ಎಸಿಬಿ ಬಲೆಗೆ ಬಿದ್ದ ಅಧಿಕಾರಿ

IT department files complaint on Gundlupet MLA Geeta Mahadevaprasad

ಬೆಂಗಳೂರಿನ ಎಸ್.ಟಿ. ಮೂರ್ತಿ ಎಂಬವರು 100 ಮೆಗಾವ್ಯಾಟ್ ಉತ್ಪಾದನಾ ಸಾಮರ್ಥ್ಯದ ಉತ್ಪಾದನಾ ಘಟಕಗಳ ಟೆಂಡರ್ 25 ವರ್ಷಗಳ ಅವಧಿಗೆ ಪಡೆಯಲಾಗಿದೆ ಎಂದು ತನಿಖೆಗೆ ಕೋರಿ ಆದಾಯ ತೆರಿಗೆ ಇಲಾಖೆಯಲ್ಲಿ ದೂರು ದಾಖಲಿಸಿದ್ದಾರೆ ಎಂದು ಬಲ್ಲಮೂಲಗಳಿಂದ ತಿಳಿದುಬಂದಿದೆ.

English summary
The Income Tax department has filed a complaint on Gundlupet Congress MLA Geeta Mahadev Prasad in connection with irregularities in the roof top solar unit implementation scheme by a benami company.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X