ಪುನೀತ್ ಸ್ಪೂರ್ತಿ: ಮೈಸೂರಲ್ಲಿ ಹೆಚ್ಚಾಯಿತು ನೇತ್ರದಾನಿಗಳ ಸಂಖ್ಯೆ
ಮೈಸೂರು,ಜುಲೈ 28: ಕನ್ನಡ ಖ್ಯಾತ ನಟ ಪುನೀತ್ ರಾಜ್ ಕುಮಾರ್ ನಿಧನದ ಬಳಿಕ ಮೈಸೂರಿನಲ್ಲಿ ನೇತ್ರದಾನಿಗಳ ಸಂಖ್ಯೆ ಹೆಚ್ಚಾಗಿದೆ. ಆ ಮೂಲಕ ಹಲವರು ದೃಷ್ಟಿಚೇತನರ ಬದುಕಿನಲ್ಲಿ ಬೆಳಕು ಮೂಡಿಸುತ್ತಿದ್ದಾರೆ.
ಜಿಲ್ಲೆಯ ಮಾಹಿತಿ ಪ್ರಕಾರ ಕಳೆದ ಏಳು ತಿಂಗಳಲ್ಲಿ 3,200 ಕ್ಕೂ ಹೆಚ್ಚು ಮಂದಿ ಕಣ್ಣಿನ ದಾನ ಮಾಡಲಿಚ್ಚಿಸಿ ಒಪ್ಪಿಗೆ ಪತ್ರ ನೀಡಿದ್ದಾರೆ. ಎಂಟು ತಿಂಗಳಲ್ಲಿ 88 ಮಂದಿ ಮೃತಪಟ್ಟವರ ನೇತ್ರಗಳನ್ನು ಅವರ ಕುಟುಂಬದವರು ದಾನ ಮಾಡಿ ನೂರಾರು ಮಂದಿಗೆ ಬೆಳಕಾಗಿದ್ದಾರೆ. ನಗರದ ಕೆ.ಆರ್.ಆಸ್ಪತ್ರೆಯಲ್ಲಿ ಮರಣ ಹೊಂದಿದವರ ಕಣ್ಣು (ಅಯ್ ಬಾಲ್)ದಾನ ಮಾಡುವ ಪ್ರಮಾಣ ಹೆಚ್ಚಾಗಿದೆ.
ಅಗತ್ಯ ಇರುವವರಿಗೆ ಅಳವಡಿಕೆ
2021ರ ಅಕ್ಟೋಬರ್‌ನಲ್ಲಿ ಮೃತಪಟ್ಟ 14, ಡಿಸೆಂಬರ್‌ನಲ್ಲಿ 16, 2022ರ ಜನವರಿಯಲ್ಲಿ 12, ಫೆಬ್ರವರಿಯಲ್ಲಿ 10, ಮಾರ್ಚ್‌ನಲ್ಲಿ 16, ಏಪ್ರಿಲ್‌ನಲ್ಲಿ 6, ಮೇ ತಿಂಗಳಲ್ಲಿ 6 ಹಾಗೂ ಜೂನ್‌ನಲ್ಲಿ 8 ಮಂದಿಯ ನೇತ್ರಗಳನ್ನು ಸಂಗ್ರಹಿಸಲಾಗಿದೆ. ಅವುಗಳನ್ನು ಆಸ್ಪತ್ರೆಯಲ್ಲಿ ತಪಾಸಣೆ ಮಾಡಿಸಿಕೊಂಡು ಕಣ್ಣಿನ ದೃಷ್ಟಿ ಸಂಪೂರ್ಣ ನಷ್ಟವಾಗಿದೆ ಎಂದು ಕಂಡುಬಂದ ಮೊದಲು ನೋಂದಾಯಿಸಿಕೊಂಡಿರುವ ಫಲಾನುಭವಿಗಳಿಗೆ ಜೋಡಣೆ ಮಾಡಲಾಗಿದೆ. ಉಳಿದವು, ಅಗತ್ಯವಿರುವ ಸರಕಾರಿ ಆಸತ್ರೆಗಳಿಗೆ ಕಳುಹಿಸಿ ಅಲ್ಲಿ ಅಗತ್ಯವಿರುವವರಿಗೆ ಅಳವಡಿಸಲಾಗುತ್ತಿದೆ.

ದಾನ ಮಾಡುವ ಕ್ರಮ?
ಮೊದಲೇ ಕಣ್ಣಿನ ದಾನ ಮಾಡಲು ನೋಂದಣಿ ಮಾಡಿದ್ದವರು ಮೃತಪಟ್ಟಲ್ಲಿ 8 ಗಂಟೆಯೊಳಗಾಗಿ ಕಣ್ಣುಗಳನ್ನು ಸಂಗ್ರಹಿಸಲಾಗುತ್ತದೆ. ಕ್ಯಾನ್ಸರ್‌ನಂತಹ ಕಾಯಿಲೆ ಹಾಗೂ ಯಾವುದೇ ಇನ್ನಿತರ ಸೋಂಕು ಇದ್ದವರನ್ನು ಹೊರತುಪಡಿಸಿ ಉಳಿದಂತೆ ಎಲ್ಲ ವಯಸ್ಸಿನ ನೋಂದಾಯಿತ ಮೃತ ಪಟ್ಟವರ ದೇಹದಿಂದ ಕಣ್ಣುಗಳನ್ನು ಸಂಗ್ರಹಿಸಲಾಗುವುದು. ಕಣ್ಣುಗಳ ದಾನ ಮಾಡಲು ಬಯಸುವ ಕುಟುಂಬದವರು ಕೆ.ಆರ್.ಆಸ್ಪತ್ರೆ ನೇತ್ರ ಭಂಡಾರದ ನೇತ್ರಾಧಿಕಾರಿ ಡಾ.ಚಂದ್ರಕಲಾ ಅವರನ್ನು ಸಂಪರ್ಕಿಸಬಹುದು. ಮೊ: 831045 9334, 9448392947, 9449406787.
"ಎಂಟು ತಿಂಗಳ ಹಿಂದೆ ನಡೆದ ಪುನೀತ್ ರಾಜ್‌ಕುಮಾರ್ (2021ರ ಅಕ್ಟೋಬರ್) ಅವರ ಕಣ್ಣು ದಾನದಿಂದ ನಾಲ್ಕು ಮಂದಿಗೆ ದೃಷ್ಟಿ ಬಂದಿತ್ತು. ಈ ಸೇವಾ ಕಾರ್ಯ ನಿಜಕ್ಕೂ ಸಾರ್ವಜನಿಕರ ಕಣ್ಣು ತೆರೆಸಿದೆ. ಇತ್ತೀಚೆಗೆ ಮೃತಪಟ್ಟವರ ಕಡೆಯವರು ಕಣ್ಣುದಾನ ಮಾಡಲು ಹೆಚ್ಚಾಗಿ ಮುಂದೆ ಬರುತ್ತಿದ್ದಾರೆ. ಹೀಗಾಗಿ ಕಳೆದ 8 ತಿಂಗಳಲ್ಲಿ ಹೆಚ್ಚುವರಿಯಾಗಿ ನೂರಾರು ಮಂದಿಗೆ ದೃಷ್ಟಿ ನೀಡಲು ಸಾಧ್ಯವಾಗಿದೆ"ಎಂದು ಕೆ.ಆರ್.ಆಸ್ಪತ್ರೆ ಕಣ್ಣಿನ ವಿಭಾಗದ ಮುಖ್ಯಸ್ಥ ಡಾ.ಕೆ.ಸತೀಶ್ ತಿಳಿಸಿದ್ದಾರೆ.

ನಟ ಪುನೀತ್ ರಾಜ್‌ಕುಮಾರ್ ರಿಂದ ಸಾಕಷ್ಟು ಮಂದಿ ಅವರ ಅಭಿಮಾನಿಗಳು, ಸಾರ್ವಜನಿಕರು ಸ್ಫೂರ್ತಿಗೊಂಡಿದ್ದಾರೆ. ಕುಟುಂಬದಲ್ಲಿ ಯಾರಾದರೂ ಮರಣ ಹೊಂದಿದರೆ ಅವರ ಅಂಗಾಂಗಗಳು ಬೇರೆಯವರಿಗೆ ಅನುಕೂಲವಾಗುವುದಾರೆ ಬಳಸಿಕೊಳ್ಳಲಿ ಎಂಬ ಅರಿವು ಮೂಡಿದೆ. ಹೀಗಾಗಿ ಅಂಗಾಂಗ ದಾನ ಮಾಡುವ ಪ್ರಕ್ರಿಯೆ ಹೆಚ್ಚಾಗಿದೆ.
-
April 2 Horoscope: ಆರೋಗ್ಯ ಮತ್ತು ಆರ್ಥಿಕ ಸ್ಥಿತಿಯ ಸಂಪೂರ್ಣ ಮಾಹಿತಿ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Cricket: ವಿಶ್ವದಾಖಲೆ ಬರೆದ ಕಿವೀಸ್ ವನಿತೆಯರು: ಭಾರತದ ದಾಖಲೆ ಅಳಿಸಿ ಹಾಕಿದ ನ್ಯೂಜಿಲೆಂಡ್ ಅಬ್ಬರ -
Karnataka Weather: ರಾಜ್ಯದಲ್ಲಿಂದು ಭಾರಿ ಮಳೆ ಮುನ್ಸೂಚನೆ; ಬೆಂಗಳೂರು ಹವಾಮಾನ ಹೇಗಿದೆ? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಮಾರುಕಟ್ಟೆಯಲ್ಲಿ ಇಂದಿನ ನಿಖರ ಚಿನ್ನ, ಬೆಳ್ಳಿ ಬೆಲೆ ಎಷ್ಟು? ಇಲ್ಲಿದೆ ದರ ಪಟ್ಟಿ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
SSLC ಸಮಾಜ ವಿಜ್ಞಾನ ಪರೀಕ್ಷೆ ವಿಶ್ಲೇಷಣೆ: ಪ್ರಶ್ನೆಪತ್ರಿಕೆ ಹೇಗಿತ್ತು? ವಿದ್ಯಾರ್ಥಿಗಳ ಪ್ರತಿಕ್ರಿಯೆ ಏನು? -
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
ಬೇಸಿಗೆ ರಜೆ -ವಾರಾಂತ್ಯದ ರಶ್: ಹುಬ್ಬಳ್ಳಿ-ರಾಮೇಶ್ವರಂ ಮತ್ತು ಬೆಂಗಳೂರು-ಕಣ್ಣೂರು ವಿಶೇಷ ರೈಲು ಸಂಚಾರ -
ಉಬರ್ ಕ್ಯಾಬ್ ಬುಕ್ ಮಾಡಿದಷ್ಟೇ ಸುಲಭವಾಗಿ ತೆಂಗಿನಕಾಯಿ ಕೀಳುವವರನ್ನು ಕರೆಯಿರಿ: ಆನಂದ್ ಮಹೀಂದ್ರಾ ಹಂಚಿಕೊಂಡ Video Viral -
SSLC ಪರೀಕ್ಷೆ-1ರಲ್ಲಿ ಅಂಕ ಕಡಿಮೆಯಾಗಿದೆಯೇ? ಚಿಂತೆ ಬಿಡಿ, ಮೇ 18ರಿಂದ ನಡೆಯುವ ಪರೀಕ್ಷೆ-2ಕ್ಕೆ ಸಜ್ಜಾಗಿ












Click it and Unblock the Notifications