ಕೊಡಗಿನಲ್ಲಿ ಧಾರಾಕಾರ ಮಳೆ: ಕೆಆರ್ ಎಸ್ ಒಳ ಹರಿವು ಹೆಚ್ಚಳ

ಕೊಡಗಿನಲ್ಲಿ ಭಾರೀ ಮಳೆಯಾಗುತ್ತಿರುವುದರಿಂದ ಕೆಆರ್ ಎಸ್ ಡ್ಯಾಂನ ಒಳಹರಿವಿನಲ್ಲಿ ಗಣನೀಯ ಹೆಚ್ಚಳ. ಕಳೆದೊಂದು ವಾರದಲ್ಲಿ ಅಣೆಕಟ್ಟಿಗೆ 20 ಸಾವಿರ ಕ್ಯುಸೆಕ್ಸ್ ನೀರು ಹರಿವು ಬಂದಿದೆ ಎಂದು ಹೇಳಿದ ಮೂಲಗಳು.

ಬೆಂಗಳೂರು, ಜುಲೈ 22: ಮಂಡ್ಯ ಜಿಲ್ಲೆಯ ಕೃಷ್ಣರಾಜ ಸಾಗರ ಅಣೆಕಟ್ಟು (ಕೆಆರ್ ಎಸ್ ಡ್ಯಾಂ) ಇನ್ನೂ ಭರ್ತಿಯಾಗಿಲ್ಲ ಎಂಬ ಕೊರಗು ಕಾಡುತ್ತಿದ್ದ ಅನೇಕರಿಗೆ ಈಗ ಖುಷಿಪಡುವ ಸಂದರ್ಭ ಬಂದಿದೆ. ಹಾಗೆಂದ ಮಾತ್ರಕ್ಕೇ ಅಣೆಕಟ್ಟು ತುಂಬಿದೆ ಎಂದರ್ಥವಲ್ಲ. ಕೊಡಗಿನಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಅಣೆಕಟ್ಟಿನ ಒಳ ಹರಿವು ಹೆಚ್ಚಾಗಿದೆ. ಇದು ಮೈಸೂರು ಪ್ರಾಂತ್ಯದ ರೈತ ಸಮುದಾಯಕ್ಕೆ ಸಮಾಧಾನ ತಂದಿದೆ.

ಕಳೆದೊಂದು ವಾರದಿಂದ ಒಳಹರಿವು ಹೆಚ್ಚಾಗಿದ್ದು, ಈವರೆಗೆ ಕೆಆರ್ ಎಸ್ ಗೆ 20 ಸಾವಿರ ಕ್ಯುಸೆಕ್ಸ್ ನೀರು ಬಂದಿದೆ. ಜಲಾಶಯದ ಗರಿಷ್ಠ ಮಟ್ಟ 124.80 ಅಡಿಗಳಾಗಿದ್ದು, ಸದ್ಯದ ಮಟ್ಟ 83 ಅಡಿ ಇದೆ. ಅಣೆಕಟ್ಟಿನಿಂದ ಮೂರು ಸಾವಿರ ಮೂರು ಸಾವಿರ ಕ್ಯುಸೆಕ್ಸ್ ನೀರನ್ನು ಹೊರಬಿಡಲಾಗುತ್ತಿದೆ.

Inflow of KRS Dam increases due to heavy rain in Coorg

ಅತ್ತ, ಕಬಿನಿ ಜಲಾಶಯಕ್ಕೂ ನೀರಿನ ಒಳ ಹರಿವು ಹೆಚ್ಚಾಗಿದ್ದು, ಶನಿವಾರದಂತೆ ಅಣೆಕಟ್ಟಿನಲ್ಲಿನ ನೀರಿನ ಮಟ್ಟ 2.275 ಕ್ಯೂಸೆಕ್ಸ್ ಇದೆ. ಜಲಾಶಯದ ಗರಿಷ್ಠ ಮಟ್ಟ 2,284 ಅಡಿ ಆಗಿದ್ದು, ಡ್ಯಾಮ್ ನಿಂದ ಪ್ರತಿನಿತ್ಯ ಒಂದು ಸಾವಿರ ಕ್ಯುಸೆಕ್ಸ್ ನೀರು ಹರಿಯಬಿಡಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.

ರೈತರ ಆಕ್ರೋಶ: ಕೆಆರ್ ಎಸ್ ಜಲಾಶಯದಿಂದ ದಿನವೊಂದಕ್ಕೆ ಮೂರು ಸಾವಿರ ಕ್ಯೂಸೆಕ್ಸ್ ನೀರನ್ನು ಹೊರಬಿಡುತ್ತಿರುವುದು ಕರ್ನಾಟಕ ವ್ಯಾಪ್ತಿಯ ಕಾವೇರಿ ಕಣಿವೆಯ ರೈತರಲ್ಲಿ ಆಕ್ರೋಶ ತಂದಿದೆ. ಅಣೆಕಟ್ಟು ತುಂಬುವುದಕ್ಕೂ ಮುನ್ನವೇ ಈ ರೀತಿ ತಮಿಳುನಾಡಿಗೆ ನೀರು ಬಿಡುವುದರಿಂದ ಕರ್ನಾಟಕದ ರೈತರಿಗೆ ತೊಂದರೆಯಾಗುತ್ತದೆ ಎಂದು ಅವರು ಬೀದಿಗಿಳಿದು ಪ್ರತಿಭಟನೆ ನಡೆಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+