ಮೈಸೂರಿನಲ್ಲಿ ಗನ್ ಫೈರ್: ಜಯ ಕರ್ನಾಟಕ ಜಿಲ್ಲಾಧ್ಯಕ್ಷ ಪೊಲೀಸರ ವಶಕ್ಕೆ
ಮೈಸೂರು, ಜುಲೈ 14: ನಗರದ ಹೊರವಲಯದ ವಿಜಯನಗರ ನಾಲ್ಕನೇ ಹಂತದಲ್ಲಿ ಬಂದೂಕು ಫೈರಿಂಗ್ ನಡೆದಿದ್ದು, ಯಾವುದೇ ಜೀವ ಹಾನಿಯಾಗಿಲ್ಲ.
ಕ್ಷುಲ್ಲಕ ಕಾರಣಕ್ಕೆ ಜಯಕರ್ನಾಟಕ ಸಂಘಟನೆಯ ಮೈಸೂರು ಜಿಲ್ಲಾ ಅಧ್ಯಕ್ಷ ಸತೀಶ್ ಗೌಡ ಎಂಬುವರು ನಾಲ್ಕು ಸುತ್ತು ಗುಂಡು ಹಾರಿಸಿದ್ದಾನೆ. ಈ ಕುರಿತು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
ಮಹಿಳೆಯನ್ನು ಒತ್ತೆಯಾಳು ಮಾಡಿಕೊಂಡು ಮದುವೆಗೆ ಉ.ಪ್ರ. ಭೂಪ ಒತ್ತಾಯ
ಟ್ರಾವಲ್ಸ್ ಕಾರು ಚಾಲಕನೋರ್ವನಿಗೆ ಹೆದರಿಸುವ ಉದ್ದೇಶದಿಂದ ಸತೀಶ್ ಗೌಡ ನಾಲ್ಕು ಸುತ್ತು ಗುಂಡು ಹಾರಿಸಿದ್ದು ಚಾಲಕನ ಜೀವನಕ್ಕೆ ಯಾವುದೇ ಅಪಾಯ ಆಗಿಲ್ಲ.
ತಡರಾತ್ರಿ ಸತೀಶ್ ಗೌಡ ಅವರನ್ನು ಪಿಕಪ್ ಮಾಡಲು ಕಾರು ತೆಗೆದುಕೊಂಡು ಟ್ರಾವಲ್ಸ್ ಚಾಲಕ ಹೋಗಿದ್ದಾನೆ. ಈ ಹಂತದಲ್ಲಿ ಕ್ಷುಲ್ಲಕ ಕಾರಣಕ್ಕೆ ಮಾತಿಗೆ ಮಾತು ಬೆಳೆದು ಸತೀಶ್ ಗೌಡ ಫೈರಿಂಗ್ ಮಾಡಿದ್ದಾನೆ. ಸತೀಶ್ ಗೌಡ ಪಾನಮತ್ತನಾಗಿದ್ದ ಎನ್ನಲಾಗಿದೆ.
ವಿಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಸತೀಶ್ ಗೌಡನನ್ನು ವಿಚಾರಣೆ ನಡೆಸುತ್ತಿದ್ದಾರೆ.
ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !