ತಿ.ನರಸೀಪುರದಲ್ಲಿ ಜೂಜು ಮತ್ತು ಕುಡುಕರ ಹಾವಳಿ: ಅಬಕಾರಿ ಅಧಿಕಾರಿಗಳ ಮುಂದೆ ಸಾರ್ವಜನಿಕರ ಆಕ್ರೋಶ

ಮೈಸೂರು, ಸೆಪ್ಟೆಂಬರ್‌ 19: ಮೈಸೂರು ಜಿಲ್ಲೆಯ ತಿ.ನರಸೀಪುರ ತಾಲೂಕಿನ ಬಿ.ಶೆಟ್ಟಹಳ್ಳಿ ಪಂಚಾಯತಿ ವ್ಯಾಪ್ತಿಯಲ್ಲಿ ಜೂಜು ಮತ್ತು ಕುಡುಕರ ಹಾವಳಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಗ್ರಾಮ ಪಂಚಾಯಿತಿ ಹಾಗೂ ಅಬಕಾರಿ ಇಲಾಖೆಗೆ ದೂರು ನೀಡಿದರು ಯಾವುದೇ ಕ್ರಮಕ್ಕೆ ಮುಂದಾಗಿಲ್ಲ ಎಂದು ಗ್ರಾಮ ಸಭೆಯಲ್ಲಿ ಸಾರ್ವಜನಿಕರು ಬಹಿರಂಗವಾಗಿ ಅಧಿಕಾರಿಗಳಿಗೆ ದೂರು ನೀಡಿದ್ದಾರೆ.

ತಿ.ನರಸೀಪುರ ತಾಲೂಕು ತಲಕಾಡು ಹೋಬಳಿ ಬಿ.ಶೆಟ್ಟಹಳ್ಳಿ ಗ್ರಾಮ ಪಂಚಾಯಿತಿ ಗ್ರಾಮ ಸಭೆ, ಮತ್ತು ಜಮಾಬಂದಿ ಸಭೆಯನ್ನು ಹಮ್ಮಿಕೊಳ್ಳಲಾಗಿತ್ತು. ಈ ಸಭೆಯನ್ನು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪುಟ್ಟಮ್ಮಎಂ. ಶಂಭುಲಿಂಗಯ್ಯ ಇವರ ಅಧ್ಯಕ್ಷತೆಯಲ್ಲಿ ಹಾಗೂ. ಉಸ್ತುವಾರಿ ಅಧಿಕಾರಿ. ಗೋವಿಂದರಾಜು ರವರ ಸಮ್ಮುಖದಲ್ಲಿ ಸಭೆ ನಡೆಯಿತು.

Illegal Liquor Sale In T Narasipura Public Outrage Before Excise Officials

ಡಿ.ಎಸ್.ಎಸ್ ಸಂಚಾಲಕ ಕುಕ್ಕೊರು ರಾಜು. ಮಾತನಾಡಿ 'ಟಿ. ಮೇಡಗಹಳ್ಳಿ ಗ್ರಾಮದಲ್ಲಿ ಯಾವುದೇ ಪರವಾನಿಗೆ ಇಲ್ಲದೆ ಅಕ್ರಮವಾಗಿ ಜೂಜು ಅಡ್ಡೆ ನಡೆಯುತ್ತಿರುವ ಬಗ್ಗೆ ಪಂಚಾಯತಿ ಅಧಿಕಾರಿಗಳು ತಿಳಿಸಿದರು ಸಹ ಯಾವುದೇ ಕ್ರಮಕ್ಕೆ ಮುಂದಾಗಿಲ್ಲ ಎಂದರು. ಜೂಜಾಟದಿಂದ ಮಹಿಳೆಯರು ಮಹಿಳೆಯ ಸಂಸಾ ರಕ್ಕೆ ತುಂಬಾ ತೊಂದರೆ ಉಂಟಾಗಿದೆ ಎಂದುವರು ಉಳಿದ ಧ್ವನಿಗೂಡಿಸಿದರು.

ಪರವಾನಿಗೆ ಪಡೆದ ಮಧ್ಯದ ಅಂಗಡಿ ಮಾಲೀಕರು. ಗ್ರಾಮಗಳಿರುವ ಸಣ್ಣಪುಟ್ಟ ಅಂಗಡಿಗಳಿಗೂ ಸಹ ಸರಬರಾಜು ಮಾಡುತ್ತಿದ್ದಾರೆ. ಇದರಿಂದ ಸಂಸಾರಗಳಲ್ಲಿ ಗಲಾಟೆ ಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದರೆ ಉಂಟಾಗುತ್ತಿದೆ. ಇದಕ್ಕೆಲ್ಲ ಕಾರಣ ಅಬಕಾರಿ ಇಲಾಖೆ ಎಂದು ನೇರವಾಗಿ ಆರೋಪಿಸಿದರು. ಈ ವೇಳೆ ಸ್ಥಳೀಯ ಅಬಕಾರಿ ಅಧಿಕಾರಿ ಕೂಡ ಸಭೆಯಲ್ಲಿದ್ದರು.

ವಸತಿ ಯೋಜನೆಗಾಗಿ ಸಾರ್ವಜನಿಕರಿಂದ ಒಟ್ಟು 186 ಅರ್ಜಿ ಬಂದಿದ್ದು, ಅದರಲ್ಲಿ ಅಂಬೇಡ್ಕರ್ ವಸತಿ ಯೋಜನೆಯಲ್ಲಿ 10 ಮನೆ ಪರಿಶಿಷ್ಟ ಜಾತಿ ಹಾಗೂ 5 ಮನೆಯನ್ನು ಪರಿಶಿಷ್ಟ ಪಂಗಡಕ್ಕೆ ಹಾಗೂ ಬಸವ ವಸತಿ ಯೋಜನೆಯ 24 ಮನೆಗಳಲ್ಲಿ 20 ಸಾಮಾನ್ಯ ವರ್ಗ, ಅಲ್ಪ ಸಂಖ್ಯಾತರರಿಗೆ 4 ಮನೆಗಳು ಆಯ್ಕೆ ಆಗಿರುವ ಬಗ್ಗೆ ಸಭೆಯಲ್ಲಿ ವಿವರಿಸಲಾಗಿದೆ.

ಈ ಸಂದರ್ಭದಲ್ಲಿ ಅಬಕಾರಿ ಇಲಾಖೆಯ ಸಬ್ ಇನ್ಸ್ಪೆಕ್ಟರ್ ಶಿವಕುಮಾರ್, ಶಿಕ್ಷಣ ಇಲಾಖೆ ಸಿಆರ್‌ಪಿ ಸಿದ್ದಲಿಂಗಪ್ಪ, ತೋಟಗಾರಿಕೆ ಇಲಾಖೆ ಪುಟ್ಟಸ್ವಾಮಿ, ಉಪಾಧ್ಯಕ್ಷರು ದಕ್ಷಿಣಮೂರ್ತಿ. ಎಸ್, ಸದಸ್ಯರುಗಳಾದ ಶಿವಶಂಕರ, ಮಂಜುಳಾ, ಉಮಾಪತಿ, ಚಿಕ್ಕನಾಗಮ್ಮ, ನಂಜಮಣಿ, ಬಸಮ್ಮಣಿ, ನೀಲಯ್ಯ, ಕುಮಾರ್, ಪಿಡಿಒ ಕೆಂಪೇಗೌಡ, ಎಸ್ ಡಿ ಎ ವಿಶ್ವನಾಥ್, ಬಿಲ್ ಕಲೆಕ್ಟರ್ ಪ್ರಕಾಶ್ ಹಾಗೂ ಗ್ರಾಮಸ್ಥರು ಅಂಗನವಾಡಿ, ಆಶಾ, ಕಾರ್ಯಕರ್ತರು ವಿವಿಧ ಇಲಾಖೆ ನೌಕರರು ಹಾಜರಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+