Yuva Dasara: ಮಳೆಯಲ್ಲೂ ಇಳಯರಾಜಾ ಸಂಗೀತದ ಮೋಡಿ; ಐ ಲವ್ ಮೈಸೂರು ಎಂದ ಸಂಗೀತ ಮಾಂತ್ರಿಕ

ಮೈಸೂರು ದಸರಾ ಸಂಭ್ರಮ ಕಳೆಗಟ್ಟಿದೆ, ಯುವ ದಸರಾ ಪ್ರಯುಕ್ತ ಸಂಗೀತ ಮಾಂತ್ರಿಕ ಇಳಯರಾಜಾ ಅವರು ನೀಡಿದ ಕಾರ್ಯಕ್ರಮ ಮನಸೂರೆಗೊಂಡಿತು. ಕಾರ್ಯಕ್ರಮದಲ್ಲಿ ಮಾತನಾಡಿದ ಇಳಯರಾಜಾ, ತಾಯಿ ಚಾಮುಂಡೇಶ್ವರಿ ಆಶೀರ್ವಾದಿಂದ ನಾನು ಮೈಸೂರಿಗೆ ಬರುವಂತಾಗಿದೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಸಾವಿರಾರು ಜನ ಭಾಗವಹಿಸಿದ್ದು, ಇಳಯರಾಜಾ ಅವರ ಸಂಗೀತಕ್ಕೆ ಮನಸೋತರು.

ಮೈಸೂರಿಗೆ ಜೊತೆ ತಮ್ಮ ಹಳೆಯ ದಿನಗಳನ್ನು ಮೆಲುಕು ಹಾಕಿದ ಇಳಯರಾಜಾ, 1974ರಲ್ಲಿ ಕಾರ್ಯಕ್ರಮ ನೀಡಲು ಮೈಸೂರಿಗೆ ಬಂದಿದ್ದೆ, ಆಗಿನಿಂದಲೂ ಮೈಸೂರಿನ ಜೊತೆ ನಂಟು ಇದೆ. ಜಿ.ಕೆ ವೆಂಕಟೇಶ್, ಪಿ.ಬಿ ಶ್ರೀನಿವಾಸ್, ಎಸ್ ಜಾನಕಿ ಅವರ ಜೊತೆಯಲ್ಲಿ ಕೀ ಬೋರ್ಡ್ ನುಡಿಸಲು ಬಂದವನು ನಾನು, ತಾಯಿ ಚಾಮುಂಡೇಶ್ವರಿ ಆಶೀರ್ವಾದವೇ ಇಂದು ನನ್ನನ್ನು ಮೈಸೂರಿಗೆ ಬರುವಂತೆ ಮಾಡಿದ್ದು, ನಿಮ್ಮನ್ನೆಲ್ಲಾ ನೋಡುವ ಅವಕಾಶ ಸಿಕ್ಕಿದೆ ಎಂದರು.

Ilayaraja Music Nights at Yuva Dasara Celebrates Mysuru s Rich Culture

1974ರಲ್ಲಿ ಕಾರ್ಯಕ್ರಮ ನೀಡಿದ ಬಳಿಕ ನೇರವಾಗಿ ಮೂಕಾಂಬಿಕಾ ದೇವಸ್ಥಾನಕ್ಕೆ ತೆರಳಿದ್ದೆ, ಅಲ್ಲಿನ ದೇವಿಯ ಸೌಂದರ್ಯ ನೋಡಲು ಎರಡು ಕಣ್ಣುಗಳೇ ಸಾಲದು ಎಂದ ಅವರು ಭಕ್ತಿ ಗೀತೆಯನ್ನು ಹಾಡುವ ಮೂಲಕ ದೇವಿಯನ್ನು ಆರಾಧಿಸಿದರು. ಚಾಮುಂಡೇಶ್ವರಿಯ ಗೀತೆಯಾದ ಜನನಿ ಜಗನಿ ಎಂಬ ತಮಿಳು ಗೀತೆಯ ಮೂಲಕ ಗಾಯನವನ್ನು ಆರಂಭಿಸಿ ಕೇಳುಗರ ಮನಸಿಗೆ ಮುದ ನೀಡಿದರು.

ಖ್ಯಾತ ಹಿನ್ನಲೆ ಗಾಯಕ ಎಸ್.ಪಿ. ಬಾಲಸುಬ್ರಹ್ಮಣ್ಯ ಅವರ ಮಗ ಎಸ್.ಪಿ ಚರಣ್ ಅವರ ಸುಮಧುರ ಧ್ವನಿಯಲ್ಲಿ ಅನಂತ್ ನಾಗ್ ಅವರ ಮಾತು ತಪ್ಪದ ಮಗ ಚಿತ್ರದ ಎಂತ ಸೌಂದರ್ಯ ನೋಡು ನಮ್ಮ ಕರುನಾಡ ಬೀಡು ಹಾಡು ಹಾಡಿ ರಂಜಿಸಿದರು. ಶಂಕರ್‍‌ ನಾಗ್ ಅವರ ಹಾಡು ಸಂತೋಷಕ್ಕೆ ಹಾಡು ನೆರೆದಿದ್ದವರನ್ನು ಕುಣಿಯುವಂತೆ ಮಾಡಿತು.

ಕನ್ನಡ ಗೀತೆಗಳ ಕಲರವ

ಯುವ ದಸರಾ ಕಾರ್ಯಕ್ರಮದಲ್ಲಿ ಕನ್ನಡಕ್ಕೆ ಸರಿಯಾದ ಪ್ರಾಶಸ್ತ್ಯ ಸಿಗುತ್ತಿಲ್ಲ ಎನ್ನುವ ದೂರುಗಳು ಕೇಳಿಬಂದಿದ್ದವು. ಆದರೆ ಇಳಯರಾಜಾ ಅವರ ಕಾರ್ಯಕ್ರಮಕದಲ್ಲಿ ಹೆಚ್ಚಾಗಿ ಕನ್ನಡ ಗೀತೆಗಳನ್ನೇ ಹಾಡಿದ್ದು, ನೆರೆದಿದ್ದ ಅಭಿಮಾನಿಗಳಿಗೆ ಖುಷಿ ಕೊಟ್ಟಿತು.

ಹಿನ್ನಲೆ ಗಾಯಕರಾದ ಶರತ್, ಮುದ್ದು ಬಾಲಕೃಷ್ಣ, ವಿಭಾರವಿ, ಶ್ವೇತಾ ಮೋಹನ್, ಹರಿ ಚರಣ್ ವಿವಿಧ ಸುಮಧುರ ಗೀತೆಗಳಿಗೆ ಧ್ವನಿಯಾದರು. ಡಾ. ರಾಜ್‌ಕುಮಾರ್, ವಿಷ್ಣುವರ್ಧನ್, ಶಂಕರ್ ನಾಗ್, ಶಿವರಾಜ್‌ಕುಮಾರ್, ಅನಂತ್‌ ನಾಗ್‌ ಸೇರಿದಂತೆ ಹಲವು ನಾಯಕರ ಚಲನಚಿತ್ರಗಳ ಗೀತೆಗಳನ್ನು ಹಾಡುವ ಮೂಲಕ ಮನಸೆಳೆದರು.

ಸಾಹಿತಿಗಳಾದ ವಿ. ಮನೋಹರ್, ಕೆ ಕಲ್ಯಾಣ್ ಅವರೂ ಇಳಯರಾಜಾ ಅವರ ಜೊತೆಯ ಅನುಭವವನ್ನು ಹಂಚಿಕೊಂಡರು. ಚಾಮರಾಜನಗರ ಸೀಮೆಯ ಅನ್ನ ಚಿತ್ರ ತಂಡವು ಚಿತ್ರದ ಗೀತೆಗಳನ್ನು ಹಾಡಿ ತಮ್ಮ ಚಿತ್ರವನ್ನು ಚಿತ್ರಮಂದಿರಕ್ಕೆ ಬಂದು ನೋಡುವಂತೆ ಮನವಿ ಮಾಡಿದರು.

ಸುಪ್ರಸಿದ್ಧ ಸಂಗೀತ ನಿರ್ದೇಶಕರಾದ ಇಳಿಯರಾಜಾ ಅವರ ಕಾರ್ಯಕ್ರಮಕ್ಕೂ ಮುನ್ನ ಕನ್ನಡ ಚಿತ್ರ ನಿಖಿತಾ ಸ್ವಾಮಿ ಮತ್ತು ಅಕ್ಬರ್ ಮ್ಯೂಸಿಕಲ್ ತಂಡದಿಂದ ನೃತ್ಯ ಪ್ರದರ್ಶನವನ್ನು ಆಯೋಜಿಸಲಾಗಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+