• search
  • Live TV
ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಚುನಾವಣೆಗಾಗಿ ಅಂಬರೀಶ್ ಹೆಸರನ್ನು ಬಳಸಿಲ್ಲ:ಸಿಎಂ ಕುಮಾರಸ್ವಾಮಿ

|

ಮೈಸೂರು, ಮಾರ್ಚ್ 25:ನಾವು ಚುನಾವಣೆಗಾಗಿ ಅಂಬರೀಶ್ ಹೆಸರನ್ನು ಬಳಸಿಲ್ಲ. ಅಂಬರೀಶ್ ಹೆಸರನ್ನು ಬಳಸದೆ ಮಂಡ್ಯದಲ್ಲಿ ಮತ ಕೇಳುತ್ತೇನೆ. ನಾನು ಮಾಡಿರುವ ಅಭಿವೃದ್ಧಿ ಕೆಲಸಗಳ ಮೇಲೆ ಮತ ಕೇಳುತ್ತಿದ್ದೇನೆ ಎಂದು ಪ್ರತಿಕ್ರಿಯಿಸಿದ್ದಾರೆ.

ಕರ್ನಾಟಕ ಲೋಕಸಭಾ ಕ್ಷೇತ್ರಗಳ 'ಎ ಟು ಜೆಡ್' ಮಾಹಿತಿ

ಮೈಸೂರಿನಲ್ಲಿ ನಿಖಿಲ್ ಕುಮಾರಸ್ವಾಮಿ ನಾಮಪತ್ರ ಸಲ್ಲಿಕೆ ಪೂರ್ವಭಾವಿಯಾಗಿ ಚಾಮುಂಡಿ ಬೆಟ್ಟದಲ್ಲಿ ವಿಶೇಷ ಪೂಜೆ ಸಲ್ಲಿಸಿ ಅವರು ಮಾತನಾಡಿದರು. ಅಂಬರೀಶ್ ಹೆಸರನ್ನು ನಾವು ದುರ್ಬಳಕೆ ಮಾಡಿಕೊಂಡಿಲ್ಲ. ಸ್ನೇಹಿತನಾಗಿ ಅಂಬರೀಶ್ ಜೊತೆ ನಾನು ಹೇಗಿದ್ದೆ ಎಂಬುದು ಎಲ್ಲರಿಗೂ ತಿಳಿದಿದೆ ಎಂದರು.

ಕರ್ನಾಟಕದಿಂದ ಮೋದಿ ಸ್ಪರ್ಧೆ ವದಂತಿ: HDK ಏನಂದ್ರು?

ಅಂಬರೀಶ್ ಮೃತರಾದ ಸಂದರ್ಭದಲ್ಲಿ ಯಾವ ರೀತಿ ಕಾರ್ಯ ನಿರ್ವಹಿಸಿದ್ದೆ. ಇದು ಎಲ್ಲರಿಗೂ ಕೂಡ ಗೊತ್ತಿರುವ ಸಂಗತಿ. ಅಂಬರೀಶ್ ಹೆಸರನ್ನ ಬಳಕೆ ಮಾಡಿಕೊಳ್ಳುತ್ತಿರುವವರು ಅವರು. ನಾವು ಅಂಬರೀಶ್ ಹೆಸರನ್ನ ಬಳಕೆ ಮಾಡಿಕೊಳ್ಳುತ್ತಿಲ್ಲ ಎಂದು ಸುಮಲತಾಗೆ ತಿರುಗೇಟು ನೀಡಿದರು.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ನಾನು ಮಂಡ್ಯಗಾಗಿ ದುಡಿಮೆ ಮಾಡಿದ್ದೇನೆ. ಯಾರು ಏನೇ ಹೇಳಿದರೂ, ಮಂಡ್ಯದಲ್ಲಿ ನಿಖಿಲ್ ಗೆಲವು ಖಚಿತ. ಹಾಸನ, ಮಂಡ್ಯ, ತುಮಕೂರು ಕ್ಷೇತ್ರಗಳಲ್ಲಿ ನಮ್ಮನ್ನ ಸೋಲಿಸಲು ಕುತಂತ್ರ ನಡೆಸುತ್ತಿದ್ದಾರೆ. ನಮ್ಮ ಕುಟುಂಬವನ್ನು ಸೋಲಿಸಲು ಅನೇಕರು ಒಳಗೊಳಗೆ ರಾಜಕೀಯ ಮಾಡುತ್ತಿದ್ದಾರೆ. ಆ ಕುತಂತ್ರ ಮಾಡುವವರು ಎಲ್ಲ ಪಕ್ಷದಲ್ಲೂ ಇದ್ದಾರೆ ಎಂದರು. ಮುಂದೆ ಓದಿ..

 ಮೋದಿ ಸ್ಪರ್ಧೆ ಮಾಡಿದರೆ ಸ್ವಾಗತಿಸುವೆ

ಮೋದಿ ಸ್ಪರ್ಧೆ ಮಾಡಿದರೆ ಸ್ವಾಗತಿಸುವೆ

ಕರ್ನಾಟಕದಲ್ಲಿ ಮೋದಿ ಸ್ಪರ್ಧಿಸಿದರೆ ನಮಗೆ ಅದ್ಕಕಿಂತ ದೊಡ್ಡದೇನು ಇಲ್ಲ. ಕರ್ನಾಟಕದಲ್ಲಿ ಮೋದಿ ಸ್ಪರ್ಧೆ ಮಾಡಿದರೆ ಸ್ವಾಗತಿಸುವೆ. ಸಮಸ್ಯೆಗಳ ಬಗ್ಗೆ ಪ್ರಧಾನಿ ಮೋದಿಯವರಿಗೆ ಜ್ಞಾನೋದಯವಾಗಿ ಬಗೆಹರಿಸಲಿ. ನನಗೆ ಟೆನ್ಷನ್ ಕೊಡೋಕೆ ಬಿಜೆಪಿಯವರಿಂದ ಸಾಧ್ಯವಿಲ್ಲ ಎಂದು ಕುಮಾರಸ್ವಾಮಿ ಹೇಳಿದರು.

 ಯಾರಿಗೆ ಯಾರು ಟೆನ್ಷನ್ ಕೊಡಲಿದ್ದಾರೆ?

ಯಾರಿಗೆ ಯಾರು ಟೆನ್ಷನ್ ಕೊಡಲಿದ್ದಾರೆ?

ಸ್ವಲ್ಪ ದಿನ ವೇಟ್ ಮಾಡಿ ಯಾರಿಗೆ ಯಾರು ಟೆನ್ಷನ್ ಕೊಡಲಿದ್ದಾರೆ ನೋಡಿ ಎಂದ ಸಿಎಂ, ದೇವೇಗೌಡರ ಕುಟುಂಬವನ್ನು ನಾಶ ಮಾಡಲು ಕಳೆದ 60 ವರ್ಷಗಳಿಂದ ಒಂದು ವರ್ಗ ಪ್ರಯತ್ನ ಮಾಡುತ್ತಿದೆ. ಅದು ಸಾಧ್ಯವಿಲ್ಲ. ನಾನು 28 ಕ್ಷೇತ್ರಗಳಲ್ಲಿಯೂ ಪ್ರಚಾರ ಮಾಡುತ್ತೇನೆ.ಸಿದ್ದರಾಮಯ್ಯ ಪ್ರಚಾರಕ್ಕೆ ಬರುವುದು ಬಿಡುವುದು ಅವರಿಗೆ ಬಿಟ್ಟ ವಿಚಾರ. ನಾವು ಆಹ್ವಾನ ನೀಡಿದ್ದೇವೆ ಎಂದರು.

ಡಿ ಬಾಸ್' ವಿರುದ್ಧ ಸಿಡಿಮಿಡಿಗೊಂಡ ಸಿಎಂ ಕುಮಾರಸ್ವಾಮಿ

 ಬದುಕುವ ದಾರಿ ತೋರಿಸಿದ್ದು ಈ ಕುಮಾರಸ್ವಾಮಿ

ಬದುಕುವ ದಾರಿ ತೋರಿಸಿದ್ದು ಈ ಕುಮಾರಸ್ವಾಮಿ

ಮಂಡ್ಯದಲ್ಲಿ ರೈತ ಕುಟುಂಬದ ಅನೇಕ ಹೆಣ್ಣು ಮಕ್ಕಳು ಅನಾಥರಾದಾಗ ಅವರಿಗೆ ಬದುಕುವ ದಾರಿ ತೋರಿಸಿದ್ದು ಈ ಕುಮಾರಸ್ವಾಮಿ. ಅವರು ಕಣ್ಣೀರು ಹಾಕುವಾಗ ಆಯಮ್ಮ ಬಂದಿಲ್ಲ. ಅವರ ಕಣ್ಣೀರು ಒರೆಸಿದ್ದು ನಾನು ಎಂದು ಸುಮಲತಾ ಅವರ ಬಗ್ಗೆ ವ್ಯಂಗ್ಯವಾಡಿದ್ದಾರೆ ಸಿಎಂ.

 ನನ್ನ ಕೈ ಹಿಡಿಯುತ್ತಾರೆಂಬ ವಿಶ್ವಾಸವಿದೆ

ನನ್ನ ಕೈ ಹಿಡಿಯುತ್ತಾರೆಂಬ ವಿಶ್ವಾಸವಿದೆ

ಇದೇ ವೇಳೆ ನಿಖಿಲ್ ಕುಮಾರಸ್ವಾಮಿ ಮಾತನಾಡಿ, ನಾನು ಎಲ್ಲಾ ಕಡೆಯೂ ಪ್ರಚಾರಕ್ಕೆ ಹೋಗುತ್ತಿದ್ದೇನೆ. ಹೋದಲೆಲ್ಲ ಜನರು ಸ್ಪಂದಿಸುತ್ತಿರುವ ವಾತಾವರಣ ನೋಡಿದರೆ ಮಂಡ್ಯದ ಜನ ನನ್ನ ಕೈ ಹಿಡಿಯುತ್ತಾರೆಂಬ ವಿಶ್ವಾಸ ಇದೆ ಎಂದರು.

ಮತ್ತೆ, ಮಗದೊಮ್ಮೆ 'ಭಿಕ್ಷೆ, ಸ್ವಾಭಿಮಾನ' ಪದ ಪ್ರಯೋಗಿಸಿದ ಕುಮಾರಸ್ವಾಮಿ

English summary
CM Kumaraswamy visited Chamundi hills before filing nomination of Nikhil Kumaraswamy. CM also clarifies that, I will do not use name Ambareesh for election and also welcomed to PM Modi fo contest from Karnataka.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X