ಸುಮಲತಾ ಬಗ್ಗೆ ರೇವಣ್ಣ ಹೇಳಿಕೆ ವಿಚಾರ:ಪ್ರತಿಕ್ರಿಯೆ ನೀಡಲ್ಲವೆಂದ ಜಿಟಿಡಿ, ಕಾರಣವೇನು?

ಮೈಸೂರು, ಮಾರ್ಚ್ 9: ದೇವೇಗೌಡರ ಕುಟುಂಬ ಈಗ ಒಂದಾಗಿಲ್ಲ. ಅವರೆಲ್ಲರೂ ಬೇರೆ ಬೇರೆಯಾಗಿ ಸಾಕಷ್ಟು ವರ್ಷಗಳೇ ಸಂದಿವೆ ಎಂದು ಸಚಿವ ಜಿಟಿ ದೇವೇಗೌಡ ತಿಳಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕುಟುಂಬ ರಾಜಕಾರಣ ಈಗ ವಿಷಯವಲ್ಲ. ದೇವೇಗೌಡರ ಮಕ್ಕಳಾದ ಬಾಲಕೃಷ್ಣ, ರೇವಣ್ಣ ಹಾಗೂ ಕುಮಾರಸ್ವಾಮಿ ಅವರ ಕುಟುಂಬ ಬೇರೆ- ಬೇರೆಯಾಗಿದೆ. ಇಲ್ಲಿ ಯಾರನ್ನು ನಾಮಿನಿ ಮಾಡುತ್ತಿಲ್ಲ ಎಂದರು.

ಕುಟುಂಬಕ್ಕೂ ಮಿಗಿಲಾಗಿ ಜನರ ಮುಂದೆ ಹೋಗಿ ಅವರು ಆಯ್ಕೆ ಆಗುತ್ತಿದ್ದಾರೆ. ದೇವೇಗೌಡರ ಕುಟುಂಬದಲ್ಲಿ ಮಾತ್ರ ಕುಟುಂಬ ರಾಜಕಾರಣ ಇಲ್ಲ. ದೇಶದ ಸಾಕಷ್ಟು ರಾಜ್ಯಗಳಲ್ಲಿ ಇನ್ನು ಕುಟುಂಬ ರಾಜಕಾರಣ ಇದೆ ಜಿಟಿಡಿ ಆರೋಪಿಸಿದರು.

I do not give any response to Revannas statement:GT Devegowda

ಇನ್ನು ಸುಮಲತಾ ಬಗ್ಗೆ ಸಚಿವ ರೇವಣ್ಣ ಹೇಳಿಕೆ ವಿಚಾರವಾಗಿ ಮಾತನಾಡಿ, ಬಾಯಿಗೆ ಬಂದಂತೆ ಮಾತನಾಡುವವರಿಗೆಲ್ಲ ಉತ್ತರ ಕೊಡಲು ಸಾಧ್ಯವಿಲ್ಲ. ಯಾರೂ ಕೂಡ ಇನ್ನೊಬ್ಬರಿಗೆ ನೋವಾಗುವ ರೀತಿಯಲ್ಲಿ ರೀತಿ ಮಾತನಾಡಬಾರದು ಎಂದು ಕುಮಾರಸ್ವಾಮಿ ಸೂಚಿಸಿದ್ದು, ಈ ವಿಚಾರದಲ್ಲಿ ಯಾರೂ ತುಟಿ ಬಿಚ್ಚಬಾರದು ಎಂದು ಹೇಳಿದ್ದಾರೆ. ಇದರಿಂದ ನನ್ನನ್ನು ಕಟ್ಟು ಹಾಕಿದ ಹಾಗೆ ಆಗಿದೆ. ಈ ವಿಚಾರವಾಗಿ ನಾನು ಯಾವ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+