ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಶ್ರೀನಿವಾಸ್ ಪ್ರಸಾದ್ ಪುಸ್ತಕಕ್ಕೆ ಮೈಸೂರಿನಲ್ಲಿ ಮಹದೇವಪ್ಪ ಟೀಕೆ

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ಮಾರ್ಚ್ 23: "ದಲಿತ ಚಳವಳಿಗೆ ಬಂಡೆಯಂತೆ ಬೆನ್ನಿಗೆ ನಿಂತ ಮೊದಲ ರಾಜಕಾರಣಿ ನಾನು" ಎಂದು ಬಿಜೆಪಿ ಮುಖಂಡ ವಿ.ಶ್ರೀನಿವಾಸಪ್ರಸಾದ್ ಗೆ ಸಚಿವ ಎಚ್ ಸಿ ಮಹದೇವಪ್ಪ ತಿರುಗೇಟು ನೀಡಿದ್ದಾರೆ.

ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ

ಮೈಸೂರಿನ ಸರ್ಕಾರಿ ಅತಿಥಿಗೃಹದಲ್ಲಿ ಮಾತನಾಡಿದ ಅವರು, ಇತ್ತೀಚೆಗೆ ಬಿಡುಗಡೆಯಾದ ಮಾಜಿ ಸಚಿವ ಶ್ರೀನಿವಾಸ್ ಪ್ರಸಾದ್ ಅವರ 'ಸ್ವಾಭಿಮಾನ ರಾಜಕಾರಣದ ಹಿನ್ನೆಲೆ ನಂಜನಗೂಡು ವಿಧಾನಸಭೆ ಉಪಚುನಾವಣೆ ವಿಶ್ಲೇಷಣೆ' ಪುಸ್ತಕದ ಕುರಿತು ಪ್ರತಿಕ್ರಿಯೆ ನೀಡಿರು.

ಮಾಜಿ ಸಚಿವ ಶ್ರೀನಿವಾಸ್ ಪ್ರಸಾದ್ ಪುಸ್ತಕದಲ್ಲಿ ಏನಿದೆ? ಮುಖ್ಯಾಂಶಗಳು ಮಾಜಿ ಸಚಿವ ಶ್ರೀನಿವಾಸ್ ಪ್ರಸಾದ್ ಪುಸ್ತಕದಲ್ಲಿ ಏನಿದೆ? ಮುಖ್ಯಾಂಶಗಳು

"ದಲಿತ ಚಳವಳಿಯನ್ನು ಇವರು ಬೆಳೆಸಿಯೇ ಇಲ್ಲ. ಯಾವುದೇ ದಲಿತ ನಾಯಕರನ್ನು ಬೇಕಾದರೂ ನೀವು ಕೇಳಿಕೊಳ್ಳಿ. ಕೇವಲ ಚುನಾವಣೆಗಾಗಿ ಮಾತ್ರವಲ್ಲ, ದಲಿತ ಚಳವಳಿಯನ್ನು ಬಲಗೊಳಿಸುವ ಸಲುವಾಗಿ ಸದಾ ಸಭೆಗಳಿರುತ್ತವೆ. ಪ್ರಜಾತಂತ್ರ ವ್ಯವಸ್ಥೆಯಲ್ಲಿ ಟೀಕೆ ಟಿಪ್ಪಣಿ ಇರಬೇಕು. ಪ್ರಜಾಪ್ರಭುತ್ವ ಉಳಿದಿರೋದೆ ಟೀಕೆ ಟಿಪ್ಪಣಿಯಿಂದ. ನಾವು ಚುನಾವಣೆಗೆ ಹೊಗ್ತಿವಿ ನಮ್ಮ ಕಾರ್ಯಕ್ರಮ ನಾವು ಹೇಳ್ತಿವಿ. ಜೆ ಡಿ ಎಸ್ ನವರು ಅವರ ಕಾರ್ಯಕ್ರಮ ಹೇಳಲಿ. ಯಾರನ್ನ ಗೆಲ್ಲಿಸಬೇಕು ಅಂತಾ ಜನಾ ತೀರ್ಮಾನ ಮಾಡ್ತಾರೆ" ಎಂದು ಅವರು ಹೇಳಿದರು.

I am the fisrt politician who stands strongly for Dalit movement: HC Mahadevappa

ಡಾ.ಹೆಚ್.ಸಿ.ಮಹದೇವಪ್ಪ ಚುನಾವಣೆಗೆ ಸ್ಪರ್ಧಿಸದೆ ಪಕ್ಷ ಸಂಘಟನೆ ತೊಡಗಿಸಿಕೊಳ್ಳುವ ವಿಚಾರಕ್ಕೆ ಸಂಬಂಧಿಸಿದಂತೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಸ್ಪರ್ಧೆ ಮಾಡದೆ ಪಕ್ಷ ಸಂಘಟನೆ ಮಾಡುವುದೂ ಒಳ್ಳೆಯ ವಿಚಾರ ಎಂದು ವಂದತಿಗಳಿಗೆ ಪುಷ್ಟಿ ನೀಡಿದರು.

"ನಾನು ಸ್ಪರ್ಧೆ ಮಾಡಬೇಕೋ, ಇಲ್ಲವೋ ಅಥವಾ ಎಲ್ಲಿಂದ ಸ್ಪರ್ಧೆ ಮಾಡಬೇಕು ಎಂಬೆಲ್ಲವನ್ನೂ ಪಕ್ಷ ನಿರ್ಧರಿಸಲಿದೆ. ಹೈಕಮಾಂಡ್ ವಹಿಸುವ ಜವಬ್ದಾರಿಯನ್ನು ನಿಭಾಯಿಸುವುದಷ್ಟೇ ನನ್ನ ಕೆಲಸ" ಎಂದು ಅವರು ಹೇಳಿದರು.

"ಸಿ.ವಿ.ರಾಮನ್ ನಗರಕ್ಕೆ ಅರ್ಜಿ ಹಾಕಿಲ್ಲ. ಟಿ.ನರಸೀಪುರದಲ್ಲಿ ಅಪ್ಪ ಮಗನ(ಸುನಿಲ್ ಬೋಸ್) ಪೈಪೋಟಿ ಇದೆ ಅನ್ನೋ ಪ್ರಶ್ನೆ ಇಲ್ಲ. ಕೋಮುವಾದಿ ಶಕ್ತಿಗಳನ್ನು ಸೋಲಿಸುವುದು ನಮ್ಮ ಗುರಿ. ಸಕಲೇಶಪುರಕ್ಕೂ ನನ್ನ ಕರೆಯುತ್ತಿದ್ದಾರೆ, ಪ್ರೀತಿಯಿಂದ ಕರೆಯುತ್ತಾರೆ ಅಷ್ಟೇ" ಎಂದು ಅವರು ತಿಳಿಸಿದರು.

English summary
"I am the fisrt politician who stands strongly for Dalit movement" Congress leader and PWD minister H C mahadevappa told in Mysuru today. He was responding to the book written by BJP leader V. Srinivas Prasad. Which released recently.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X