Get Updates
Get notified of breaking news, exclusive insights, and must-see stories!

ಇನ್ಮುಂದೆ *** ಮುಚ್ಕೊಂಡು ಶಾಲೆಗೆ ಹೋಗಬೇಕು; ಕಣ್ಣನ್ ವಿವಾದಾತ್ಮಕ ಹೇಳಿಕೆ!

ಮೈಸೂರು, ಮಾರ್ಚ್ 21: ಹಿಜಾಬ್ ಕುರಿತು ರಾಜಕೀಯ ನಾಯಕರು ನೀಡುತ್ತಿರುವ ಹಾಗೂ ನೀಡಿರುವ ಹೇಳಿಕೆಗಳು ವಿವಾದ ಹೊತ್ತಿಸುವುದು ಸರ್ವೇ ಸಾಮಾನ್ಯ. ಈಗ ಅಂಥದ್ದೇ ವಿವಾದದ ಕಿಚ್ಚು ಹೊತ್ತಿಸುವಂತಹ ಹೇಳಿಕೆಯೊಂದನ್ನು ಹಿರೇಮಗಳೂರು ಕಣ್ಣನ್ ನೀಡಿದ್ದಾರೆ.

ಬಹುರೂಪಿ ರಾಷ್ಟ್ರೀಯ ರಂಗೋತ್ಸವದ ಅಂಗವಾಗಿ ಮೈಸೂರಿನ ವನರಂಗದಲ್ಲಿ ಮಾತನಾಡಿದ ಅವರು ಹಿಜಾಬ್ ಕುರಿತು ನೀಡಿದ ಹೇಳಿಕೆ ವಿವಾದ ಹುಟ್ಟು ಹಾಕುವಂತಿದೆ. ಕೆಲವು ಬಾರಿ ಮಾತನಾಡುವುದು ಅನಿವಾರ್ಯವಾಗಿರುತ್ತದೆ. ಮಾತನಾಡುವುದಕ್ಕೆ ಭಯ ಪಡಬಾರದು ಎಂದ ಅವರು ಇನ್ಮುಂದೆ ಹಿಜಾಬ್ ಹಾಕಿಕೊಂಡು ಶಾಲೆಗೆ ಹೋಗಬಾರದು ಎಂದರು.

ಇನ್ಮುಂದೆ (***) ಮುಚ್ಚಿಕೊಂಡು ಶಾಲೆಗೆ ಹೋಗಬೇಕು. ವೈದ್ಯರ ಬಳಿ ಹೋದಾಗ ಎಲ್ಲವನ್ನೂ ಬಿಚ್ಚಿ ತೋರಿಸುತ್ತೇವೆ. ಹಾಗಿರುವಾಗ ಈ ವಿಚಾರ ಮಾತನಾಡುವುದಕ್ಕೆ ಭಯ ಏಕೆ ಬೇಕು ಎಂದು ಹಿರೇಮಗಳೂರು ಕಣ್ಣನ್ ಹೇಳಿದರು.

Hiremagaluru Kannan Controversial Statement on Hijab Row at Mysore

ಚಕ್ರವರ್ತಿ ಸೂಲಿಬೆಲೆ ಮಾತಿಗೆ ಮಳೆಯೇ ಹೋಯ್ತು:

"ನಾನು ವೇದಿಕೆಗೆ ಬರುವುದಕ್ಕೂ ಮೊದಲು ಮಳೆ ಬರುವ ಸೂಚನೆ ಇತ್ತು. ಆದರೆ ಚಕ್ರವರ್ತಿ ಸೂಲಿಬೆಲೆ ವೇದಿಕೆಗೆ ಬರುತ್ತಿದ್ದಂತೆ ಅವರ ಮಾತಿಗೆ ಹೆದರಿ ಮಳೆಯೇ ಹೋಯಿತು. ಹಿಜಾಬ್ ಹೋಗಿರುವಾಗ ಇನ್ನು ಮಳೆ ಹೋಗದೇ ಇರುತ್ತದೆಯೇ ಎಂದು ಹಿರೇಮಗಳೂರು ಕಣ್ಣನ್ ಸೂಚ್ಯವಾಗಿ ತಿವಿದರು.

ಮಮ್ಮಿ ಎನ್ನುವುದಕ್ಕಿಂತ ಅಮ್ಮ ಎನ್ನುವುದೇ ಚೆಂದ:

ನಮ್ಮದು ಡೋಂಟ್ ಕೇರ್ ಸಂಸ್ಕೃತಿ ಅಲ್ಲ, ಟೇಕ್ ಕೇರ್ ಸಂಸ್ಕೃತಿ. ಹತ್ತು ದೇವರನ್ನು ಪೂಜಿಸುವುದಕ್ಕೂ ಮೊದಲು ಹೆತ್ತ ತಾಯಿಯನ್ನು ಪೋಷಿಸು, ಪೂಜಿಸು ಎಂದು ಹೇಳಿಕೊಡುವ ಸಂಸ್ಕೃತಿ ನಮ್ಮಲ್ಲಿದೆ. ಇಂಗ್ಲಿಷ್ ನಲ್ಲಿ ಮಮ್ಮಿ ಎಂದರೆ ಸಮಾಧಿ ಎಂದು ಆಗುತ್ತದೆ. ಅದಕ್ಕಿಂತ ಕನ್ನಡದಲ್ಲಿ ಅಮ್ಮ ಎನ್ನುವುದೇ ಚೆಂದ ಎಂದು ಹಿರೇಮಗಳೂರು ಕಣ್ಣನ್ ಕಿವಿಮಾತು ಹೇಳಿದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+