ನರಭಕ್ಷಕ ಹುಲಿ ಹಿಡಿಯಲು ಬಂದ ಗಣೇಶ್, ರೋಹಿತ್
ಮೈಸೂರು, ನವೆಂಬರ್ 19 : ನಂಜನಗೂಡು ಮತ್ತು ಹೆಚ್.ಡಿ.ಕೋಟೆ ಗಡಿಭಾಗದ ಅರಣ್ಯದಂಚಿನ ಗ್ರಾಮಸ್ಥರ ಪಾಲಿಗೆ ನರಭಕ್ಷಕನಾಗಿ ಕಾಡುತ್ತಿರುವ ಹುಲಿಯನ್ನು ಜೀವಂತ ಸೆರೆಹಿಡಿಯುವ ಅಥವಾ ಕೊಲ್ಲುವ ಕಾರ್ಯಾಚರಣೆಗೆ ಚಾಲನೆ ನೀಡಲಾಗಿದೆ.
ಹುಲಿ ಕಾರ್ಯಾಚರಣೆಯಲ್ಲಿ ಪಳಗಿರುವ ಅರಣ್ಯ ಇಲಾಖೆಯ ಪಡೆಯನ್ನು ಕರೆ ತರಲಾಗಿದ್ದು, ಸಾಕಾನೆಗಳನ್ನು ಬಳಸಿಕೊಳ್ಳಲಾಗುತ್ತಿದೆ. ಅರಣ್ಯದಲ್ಲಿ ಅಡಗಿ ಕುಳಿತಿರುವ ಹುಲಿಗಾಗಿ ಹುಡುಕಾಟ ತೀವ್ರಗೊಳ್ಳುತ್ತಿದೆ. ಇಬ್ಬರು ಶಾರ್ಪ್ ಶೂಟರ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದಾರೆ.[ಸಿಗದ ನರಭಕ್ಷಕ ಹುಲಿ, ಸಿಡಿದೆದ್ದ ಹೆಡಿಯಾಲ ಗ್ರಾಮಸ್ಥರು]

ಹುಲಿ ಹಿಡಿಯಲು ಬಂದ ಆನೆಗಳು : ಶಿವಣ್ಣ ಎಂಬ ವ್ಯಕ್ತಿಯ ಮೇಲೆ ಹುಲಿ ದಾಳಿ ಮಾಡಿದ ಸ್ಥಳದಲ್ಲಿ ಬೋನು ಇಡಲಾಗಿದ್ದು, ಅದರೊಳಗೆ ಮೇಕೆಯನ್ನು ಕಟ್ಟಿ ಹಾಕಿ ಕಾಯಲಾಗುತ್ತಿದೆ. ಬಂಡೀಪುರ ರಾಷ್ಟ್ರೀಯ ಉದ್ಯಾನವನದ ರಾಂಪುರ ಆನೆ ಶಿಬಿರದಿಂದ ಗಣೇಶ್, ಪಾರ್ಥಸಾರಥಿ ಮತ್ತು ರೋಹಿತ್ ಎಂಬ ಮೂರು ಆನೆಗಳನ್ನು ಕಾರ್ಯಾಚರಣೆಗೆ ಬಳಸಿಕೊಳ್ಳಲಾಗುತ್ತದೆ. [ದನ ಮೇಯಿಸುತ್ತಿದ್ದವ ಹುಲಿ ದಾಳಿಗೆ ಬಲಿ]

ಅರಣ್ಯ ಇಲಾಖೆಯ 25 ಕ್ಕೂ ಹೆಚ್ಚು ಸಿಬ್ಬಂದಿಗಳು, ಎಸ್‍ಟಿಪಿಎಸ್ ಸಿಬ್ಬಂದಿಗಳು ಮತ್ತು ಬೆಂಗಳೂರಿನಿಂದ ಇಬ್ಬರು ಶಾರ್ಪ್ ಶೂಟರ್ ಹುಲಿ ಹುಡುಕುವ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದಾರೆ.ರೈತ ಶಿವಣ್ಣನನ್ನು ಹುಲಿ ಬಲಿ ತೆಗೆದುಕೊಂಡ ಸ್ಥಳದ ಮೂರು ಕಿ.ಮೀ. ವ್ಯಾಪ್ತಿಯಲ್ಲಿ ಕೂಂಬಿಂಗ್ ಆರಂಭಗೊಂಡಿದೆ. [ನರಭಕ್ಷಕ ಹುಲಿಗೆ ಹೆದರಿದ ನಂಜನಗೂಡು ಗ್ರಾಮಸ್ಥರು]

ಬೆಂಗಳೂರಿನಿಂದ ಬಂದಿರುವ ಶ್ರಾಪ್ ಶೂಟರ್ ಸುಶೀಲ್‍ಕುಮಾರ್ ಸ್ಥಳ ಪರಿಶೀಲನೆ ನಡೆಸಿ, ಹುಲಿ ಹೆಜ್ಜೆ ಗುರುತುಗಳನ್ನು ನೋಡಿ, ಇದು ಪ್ರಾಯದ ಗಂಡು ಹುಲಿ. ಈಗ ಹುಲಿಗಳು ಸೇರುವ ಸಮಯ. ಒಂದು ಕಡೆ ಹುಲಿ ನಿಲ್ಲುವುದಿಲ್ಲ. ಆದ್ದರಿಂದ ಹುಲಿ ಚಲನವಲನಗಳನ್ನು ಗಮನಿಸಬೇಕಿದೆ ಎಂದು ಹೇಳಿದ್ದಾರೆ.












Click it and Unblock the Notifications