ಸಮಸ್ಯೆ ಆಲಿಸಲು ಬಂದು ಜಗಳಕ್ಕಿಳಿದ ಮೈಸೂರಿನ ಜನಪ್ರತಿನಿಧಿಗಳು

ಮೈಸೂರು, ಸೆಪ್ಟೆಂಬರ್ 27 : ಮೈಸೂರಿನಲ್ಲಿ ಸುರಿದ ಭಾರೀ ಮಳೆಗೆ ದಸರಾ ಹಬ್ಬ ಬಣ್ಣ ಕಳೆದುಕೊಂಡಂತಾಗಿದೆ. ಹಲವು ರಸ್ತೆಗಳು, ಫಲ-ಪುಷ್ಪ ಪ್ರದರ್ಶನ, ದಸರೆಗೆ ರಂಗು ನೀಡುತ್ತಿದ್ದ ಹತ್ತು ಹಲವು ಕಾರ್ಯಕ್ರಮಗಳು ಮಳೆಯ ಕಾರಣ ಅಸ್ತವ್ಯಸ್ಥಗೊಂದಿವೆ. ಸಾಂಸ್ಕೃತಿಕ ನಗರಿ ವರುಣನ ಅವಕೃಪೆಯಲ್ಲಿ ಕಂಗೆಟ್ಟಿದ್ದರೆ ರಾಜಕಾರಣಿಗಳು ಮಾತ್ರ ಎಂದಿನಂತೆ ಮಳೆಯನ್ನೂ ತಮ್ಮ ರಾಜಕೀಯಕ್ಕಾಗಿ ಬಳಸಿಕೊಂದಿದ್ದು ವಿಪರ್ಯಾಸ.

ಜನರ ಸಮಸ್ಯೆ ಆಲಿಸಲು ಬಂದ ಮೈಸೂರಿನ ಕೆ.ಆರ್. ಕ್ಷೇತ್ರದ ಶಾಸಕ ಎಂ.ಕೆ ಸೋಮಶೇಖರ್ ಹಾಗೂ ಬಿಜೆಪಿಯ ನಾಯಕ ಹೆಚ್.ವಿ ರಾಜೀವ್ ವಾಕ್ಸಮರಕ್ಕಿಳಿದ ಘಟನೆ ನಗರದ ಕನಕಗಿರಿಯಲ್ಲಿ ನಡೆಯಿತು. ಕಾಂಗ್ರೆಸ್ ಶಾಸಕ ಎಂ.ಕೆ ಸೋಮಶೇಖರ್ ಅವರು ಬಿಜೆಪಿ ನಾಯಕ ಹೆಚ್.ವಿ ರಾಜೀವ್ ಅವರನ್ನ ಕಂಡು "15 ವರ್ಷಗಳಿಂದ ಈ ಕ್ಷೇತ್ರದಲ್ಲಿ ಏನು ಮಾಡಿದ್ದೀರಾ? ಈಗ ರಾಜಕೀಯ ಮಾಡಲು ಬಂದಿದ್ದೀರಾ" ಎಂದು ಪ್ರಶ್ನಿಸಿದ್ದಾರೆ.

Have rain in Mysuru: People's Representatives quarral each other

ಇದಕ್ಕೆ ಆಕ್ರೋಶಗೊಂಡ ಹೆಚ್.ವಿ ರಾಜೀವ್, "ಮೊದಲು ನೀವೇನು ಮಾಡಿದ್ದೀರಿ ಅಂತಾ ತಿಳಿಸಿ. ಆಗೋ ಕೆಲಸ ಮೊದಲು ಮಾಡಿ" ಎಂದು ತಿರುಗೇಟು ನೀಡಿದ್ದಾರೆ. ಈ ಮಧ್ಯೆ ಇಬ್ಬರು ಶಾಸಕರು ಪರಸ್ಪರ ಅಶ್ಲೀಲ ಪದಗಳಿಂದ ನಿಂದಿಸಿಕೊಂಡರು ಎಂಬ ಮಾಹಿತಿ ಲಭ್ಯವಾಗಿದೆ.

Have rain in Mysuru: People's Representatives quarral each other

ಹಿನಕಲ್ ಕೆರೆ ಉಕ್ಕಿ ಹರಿಯಲು ಪಾಪಣ್ಣನವರೇ ಕಾರಣ!
'ವರುಣನ ಆರ್ಭಟದಿಂದ ಹಿನಕಲ್ ಕಲ್ಯಾಣಿ ಉಕ್ಕಿ ಹರಿಯುತ್ತಿದ್ದು, ಇದಕ್ಕೆ ಸಿಎಂ ಸಿದ್ದರಾಮಯ್ಯ ಅವರ ಆಪ್ತ ಪಾಪಣ್ಣ ಕಾರಣವಂತೆ...' ಹೀಗಂತ ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಟ್ವೀಟ್ ಮಾಡಿದ್ದಾರೆ. ನಿನ್ನೆ ಸುರಿದ ಬಾರಿ ಮಳೆಗೆ ಹಿನಕಲ್ ಕೆರ ಕೊಡಿ ಒಡೆದು ಸಾಕಷ್ಟು ಆವಾಂತರ ಸೃಷ್ಠಿಯಾಗಿದೆ. ಈ ರೀತಿ ಮಳೆ ನೀರು ಮನೆ ಹಾಗೂ ರಸ್ತೆಗಳಿಗೆ ನೀರು ನುಗ್ಗಲು ಸಿ ಎಂ ಸಿದ್ದರಾಮಯ್ಯ ಆಪ್ತ ಹಿನಕಲ್ ಪಾಪಣ್ಣ ರಾಜಕಾಲುವೆ ಒತ್ತುವರಿ ಮಾಡಿರುವುದೇ ಕಾರಣ ಅಂತ ಸಾಮಾಜಿಕ ಜಾಲತಾಣದಲ್ಲಿ ಸಿಂಹ ತರಾಟೆಗೆ ತೆಗೆದುಕೊಂಡಿದ್ದಾರೆ.

ಒಂದಲ್ಲಾ ಒಂದು ರೀತಿ ಕಾಂಗ್ರೆಸ್ ನಾಯಕರ ವಿರುದ್ದ ಹರಿ ಹಾಯುತ್ತಿದ್ದ ಸಂಸದ ಪ್ರತಾಪ್ ಸಿಂಹ ಇದೀಗ ಸಿಎಂ ಸಿದ್ದರಾಮಯ್ಯ ಆಪ್ತ ಪಾಪಣ್ಣ ವಿರುದ್ದ ಆಕ್ರೋಶ ಹೊರ ಹಾಕಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+