ಮೈಸೂರು: ಪತ್ನಿಯ ಕಿರುಕುಳ ತಾಳಲಾರದೆ ಆತ್ಮಹತ್ಯೆಗೆ ಯತ್ನಿಸಿದ ಪತಿ
ಮೈಸೂರು, ಮಾರ್ಚ್ 7: ನಿನಗೆ ಸಂತಾನ ಶಕ್ತಿಯಿಲ್ಲ ಎಂದು ಹಿಯಾಳಿಸಿ ಪತ್ನಿ ಹಾಗೂ ಅತ್ತೆ-ಮಾವ ನನ್ನನ್ನು ನಿತ್ಯ ಮಾನಸಿಕವಾಗಿ ಹಿಂಸಿಸುತ್ತಿದ್ದಾರೆಂದು ನೊಂದು ವ್ಯಕ್ತಿಯೊಬ್ಬ ಆತ್ಮಹತ್ಯೆಗೆ ಪ್ರಯತ್ನಿಸಿದ ವಿಚಿತ್ರ ಘಟನೆ ಮೈಸೂರಿನಲ್ಲಿಂದು ನಡೆದಿದೆ.

ಗಾಯತ್ರಿಪುರಂ ನಿವಾಸಿ ಅರುಣ್ ರಾವ್ ಎಂಬಾತನೇ ನೀರಿನ ಟ್ಯಾಂಕರ್ ಏರಿ, ಕೈಯಲ್ಲಿ ಪೆಟ್ರೋಲ್ ಹಿಡಿದು ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ ಎಂಬುದು ತಿಳಿದುಬಂದಿದೆ. ಮದುವೆಯಾಗಿ ಹತ್ತು ವರ್ಷವಾಗಿದ್ದರೂ ಮಕ್ಕಳಾಗಿಲ್ಲ ಎಂಬ ಕಾರಣಕ್ಕೆ ಪತ್ನಿ ಮತ್ತು ಆಕೆಯ ಮನೆಯವರು ಈತನನ್ನು ಹಿಯಾಳಿಸುತ್ತಿದ್ದರು ಎಂದು ಅತ ಆರೋಪಿಸಿದ್ದಾನೆ.
ಲಕ್ಷ್ಮಿಪುರಂ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.












Click it and Unblock the Notifications