ಮೈಸೂರು: ಮಗಳನ್ನು ಅಪಹರಿಸುತ್ತೇವೆ ಎಂದಿದ್ದಕ್ಕೆ ತಂದೆ ಆತ್ಮಹತ್ಯೆ

ಮೈಸೂರು, ಮಾರ್ಚ್ 26 : ಸಾಲಗಾರರ ಕಿರುಕುಳ ತಾಳಲಾರದೇ ಮನನೊಂದ ವ್ಯಕ್ತಿಯೋರ್ವ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾದ ಘಟನೆ ಮೈಸೂರಿನಲ್ಲಿ ನಡೆದಿದೆ.

ಕಲ್ಯಾಣಗಿರಿ ನಿವಾಸಿ ಸಯ್ಯದ್ ಶಮಿವುಲ್ಲಾ (41) ಆತ್ಮಹತ್ಯೆಗೆ ಶರಣಾದ ದುರ್ದೈವಿ. ಎನ್ ಐ ಸಿಲ್ಕ್ ನಲ್ಲಿ ಕೆಲಸ ಮಾಡುತ್ತಿದ್ದ ಶಮಿವುಲ್ಲಾ ಅವರು ವ್ಯವಹಾರಕ್ಕಾಗಿ ಇಲಿಯಾಸ್ ಬೇಗ್ ಬಳಿ 2,80 ಲಕ್ಷ ರು. ಸಾಲ ಪಡೆದಿದ್ದ ಎನ್ನಲಾಗಿದೆ.

ಪಡೆದುಕೊಂಡ ಸಾಲದ ಹಣವನ್ನು ವಾಪಸ್ಸು ನೀಡಿಲ್ಲ ಎನ್ನುವ ಕಾರಣಕ್ಕೆ ಸಾಲಗಾರರು ಮನೆಯ ಬಳಿ ಬಂದು ಕಿರುಕುಳ ನೀಡುತ್ತಿದ್ದರು. ಹಾಗೂ ಮಗಳನ್ನು ಅಪಹರಿಸುತ್ತೇವೆ ಎಂದು ಬೆದರಿಕೆಯನ್ನೊಡ್ಡಿದ್ದರು.

Harassed by loan shark 41-year-old man commits suicide in Mysuru

ಮಗಳ ಮದುವೆ ಇನ್ನೇನು ಒಂದು ತಿಂಗಳಷ್ಟೇ ಬಾಕಿ ಉಳಿದಿತ್ತು. ಇದರಿಂದ ಮನನೊಂದ ಶಮಿವುಲ್ಲಾ ಸಾಲಗಾರರ ಕಾಟ ತಾಳಲಾರದೆ ಕಳೆದ ವಾರ ವಿಷಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ.

ಆದರೆ, ಚಿಕಿತ್ಸೆ ಫಲಕಾರಿಯಾಗದೆ ಮೈಸೂರಿನ ಕೆ.ಆರ್.ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ. ಸಾಲ ನೀಡಿದ್ದ ಎನ್.ಐ ಸಿಲ್ಕ್ ಮಾಲೀಕ ಇಲಿಯಾಸ್ ಬೆಗ್ ವಿರುದ್ಧ ಉದಯಗಿರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+