ಕೂದಲು ಉದುರುತ್ತಿದೆ ಎಂದು ಆತ್ಮಹತ್ಯೆಗೆ ಶರಣಾದ ಯುವತಿ!
ಮೈಸೂರು, ಸೆಪ್ಟೆಂಬರ್ 02 : ಹೇರ್ ಸ್ಟ್ರೈಟ್ನಿಂಗ್ ಆದ ಬಳಿಕ ಕೂದಲು ಉದುರಿದ್ದರಿಂದ ಮನನೊಂದು ವಿದ್ಯಾರ್ಥಿನಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಜಯಲಕ್ಷ್ಮಿಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿಯನ್ನು ಜಿ.ನೇಹಾ ಗಂಗಮ್ಮ (19) ಎಂದು ಗುರುತಿಸಲಾಗಿದೆ. ಕೊಡಗು ಮೂಲದ ನೇಹಾ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಲಕ್ಷ್ಮಣತೀರ್ಥ ನದಿಯಲ್ಲಿ ಶವ ತೇಲುತ್ತಿರುವುದನ್ನು ನೋಡಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದರು.
ನೇಹಾ ಮೈಸೂರಿನ ಸೆಂಟ್ ಜೋಸೆಫ್ ಕಾಲೇಜಿನಲ್ಲಿ ಬಿಬಿಎ ಪದವಿ ವ್ಯಾಸಾಂಗ ಮಾಡುತ್ತಿದ್ದಳು. ಗೋಕುಲಂನಲ್ಲಿರುವ ಕೂರ್ಗ್ ಪಿಜಿಯಿಂದ ಕಾಲೇಜಿಗೆ ತೆರಳುವುದಾಗಿ ಎಂದು ಹೇಳಿ ಆಗಸ್ಟ್ 28 ರಂದು ತೆರಳಿದ್ದವಳು ಮರಳಿ ಬಂದಿರಲಿಲ್ಲ. ಪಿಜಿ ಮಾಲೀಕರು ಜಯಲಕ್ಷ್ಮಿಪುರಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಮೃತ ಯುವತಿ ನೇಹಾ ನಿಟ್ಟೂರು ಗ್ರಾಮದ ಪ್ರಭಾ, ಶೈಲಾ ದಂಪತಿಯ ಪುತ್ರಿ. ಶನಿವಾರ ಸಂಜೆ ಹೊಳೆಯಲ್ಲಿ ಶವ ತೇಲುತ್ತಿದ್ದುದನ್ನು ಸ್ಥಳೀಯರು ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ಶವವನ್ನು ಹೊರತೆಗೆದಾಗ ನೇಹಾ ಎಂದು ಗುರುತಿಸಲಾಗಿದೆ.
ನೇಹಾ ಮೈಸೂರಿನ ರೋಹಿಣಿ ಬ್ಯೂಟಿ ಝೋನ್ ನಲ್ಲಿ ಹೇರ್ ಸ್ಟ್ರೈಟಿಂಗ್ ಮಾಡಿಸಿಕೊಂಡಿದ್ದಳು. ಹೇರ್ ಸ್ಟ್ರೈಟ್ನಿಂಗ್ ಮಾಡಿಸಿಕೊಂಡ ಬಳಿಕ ಯುವತಿಯ ಕೂದಲು ಉದುರಲು ಆರಂಭಿಸಿದೆ. ಈ ವೇಳೆ ಮನನೊಂದ ಯುವತಿ ಕಾಲೇಜಿಗೆ ಹೋಗಲು ಹಿಂದೇಟು ಹಾಕುತ್ತಿದ್ದಳು. ಆದರೆ ಆಕೆಯ ಪೋಷಕರು ಸಮಾಧಾನ ಪಡಿಸಿ ಕಾಲೇಜಿಗೆ ಕಳುಹಿಸಿದ್ದರು.
ಆದರೆ, ನೇಹಾ ಕೂದಲು ಉದುರುವಿಕೆಯಿಂದ ಮನನೊಂದು ಅಗಸ್ಟ್ 28ರಂದು ಲಕ್ಷ್ಮಣ ತೀರ್ಥ ನದಿಗೆ ಹಾರಿ ಆತ್ಮಹತ್ಯೆಗೆ ಮಾಡಿಕೊಂಡಿದ್ದಾಳೆ. ನೇಹಾ ಗಂಗಮ್ಮ ಪೋಷಕರು ರೋಹಿಣಿ ಬ್ಯೂಟಿ ಝೋನ್ ವಿರುದ್ದ ದೂರು ನೀಡಿದ್ದಾರೆ.












Click it and Unblock the Notifications