ಇಂದಿನಿಂದ ವಿಧಾನಸೌಧದಲ್ಲಿ ಕನ್ನಡ ಭಾಷೆಯಲ್ಲೇ ವ್ಯವಹಾರ: ಜಿ.ಟಿ ದೇವೇಗೌಡ

ಮೈಸೂರು, ನವೆಂಬರ್. 01: ಕನ್ನಡ ಭಾಷೆಯ ಉಳಿವಿಗೆ ಪ್ರತಿಯೊಬ್ಬರು ಶ್ರಮಿಸಬೇಕಿದೆ. ಈ ನಿಟ್ಟಿನಲ್ಲಿ ಆಡಳಿತರೂಢ ಸರ್ಕಾರ ಸರ್ವ ಸನ್ನದ್ಧವಾಗಿದೆ. ಹೀಗಾಗಿ ಇಂದಿನಿಂದ ವಿಧಾನಸೌಧದಲ್ಲಿ ಕನ್ನಡ ಭಾಷೆಯಲ್ಲೇ ವ್ಯವಹಾರ ನಡೆಸಲಾಗುತ್ತದೆ ಎಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ ದೇವೇಗೌಡ ತಿಳಿಸಿದರು.

ಇಂದು ಗುರುವಾರ ನಗರದ ಕೋಟೆ ಆಂಜನೇಯ ದೇವಸ್ಥಾನದ ಬಳಿ ಜಿಲ್ಲಾಡಳಿತ ಆಯೋಜಿಸಿದ್ದ 63ನೇ ಕನ್ನಡ ರಾಜ್ಯೋತ್ಸವದ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ಕನ್ನಡ ಭಾಷೆಗಾಗಿ ಹೋರಾಟ ಮಾಡಿದ ಹಾಗೂ ಮಹನೀಯರನ್ನು ಸ್ಮರಿಸುವ ಕಾಯಕವಾಗಬೇಕು. ಹೀಗಾಗಿ ನಮ್ಮ ಸರ್ಕಾರ ಕನ್ನಡ ಭಾಷೆಯ ಏಳಿಗೆಗೆ ದುಡಿಯಲಿದೆ. ಕನ್ನಡ ನಾಡಿನಲ್ಲಿ ಕನ್ನಡ ಭಾಷೆ ಉಳಿವಿಗಾಗಿ ನಮ್ಮ ಸರ್ಕಾರವಿದೆ ಎಂದರು.

GT Devegowda says everybody needs to strive for the survival of Kannada

ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ನವೆಂಬರ್ 1 ರಿಂದ ರಾಜ್ಯದ ಸರ್ಕಾರಿ ಕಚೇರಿಗಳಲ್ಲಿ ಕನ್ನಡ ವ್ಯವಹಾರ ನಡೆಸಬೇಕೆಂದು ಇಂದಿನಿಂದ ಆದೇಶ ಹೊರಡಿಸಿದ್ದಾರೆ. ಯಾವುದೇ ಅಧಿಕಾರಿಗಳಾಗಿರಲಿ ಎಲ್ಲರೂ ಕನ್ನಡದಲ್ಲೇ ವ್ಯವಹರಿಸಬೇಕು ಮತ್ತು ಎಲ್ಲಾ ಕಡತಗಳು ಸಹ ಕನ್ನಡದಲ್ಲೇ ಇರಲಿದೆ. ಕನ್ನಡ ಭಾಷೆಯನ್ನು ಬೆಳೆಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದರು.

GT Devegowda says everybody needs to strive for the survival of Kannada

ಮೈಸೂರಿನ ಯುವ ಭಾರತ್ ಸಂಘಟನೆಯ ವತಿಯಿಂದ ಟೆಕ್ಕಿಗಳಿಗೆ ಕನ್ನಡ ನಿಘಂಟುಗಳ ಪುಸ್ತಕವನ್ನು ಉಚಿತವಾಗಿ ನೀಡುವ ಮೂಲಕ ಕನ್ನಡ ರಾಜ್ಯೋತ್ಸವ ಆಚರಿಸಲಾಯಿತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+