ನೋ ಎಲೆಕ್ಷನ್ ಟೆನ್ಷನ್; ಜಿಟಿಡಿ ಭರ್ಜರಿ ಡಾನ್ಸ್ ವೈರಲ್
Recommended Video
ಮೈಸೂರು, ನವೆಂಬರ್ 22: ರಾಜ್ಯದಲ್ಲಿ ಉಪ ಚುನಾವಣೆ ಕಾವು ಜೋರಾಗಿದೆ. ಈ ಚುನಾವಣೆಯಲ್ಲಿ ಗೆಲುವು ಸಾಧಿಸಲು ಪ್ರಮುಖ ಪಕ್ಷಗಳ ನಾಯಕರು ಭಾರೀ ಕಸರತ್ತು ನಡೆಸುತ್ತಿದ್ದಾರೆ. ಆದರೆ ಮಾಜಿ ಸಚಿವ ಜಿ.ಟಿ. ದೇವೇಗೌಡ ಮಾತ್ರ ಉಪ ಚುನಾವಣೆ ಒತ್ತಡ ಬದಿಗೊತ್ತಿ ಕುಟುಂಬ ಸದಸ್ಯರೊಂದಿಗೆ ಕಾಲ ಕಳೆಯುತ್ತಿದ್ದಾರೆ.
ಹುಣಸೂರು ಉಪ ಚುನಾವಣೆ ಹಿನ್ನೆಲೆಯಲ್ಲಿ ಜೆಡಿಎಸ್ ನಾಯಕರು ತಮ್ಮದೇ ತಂತ್ರಗಾರಿಕೆ ರೂಪಿಸುತ್ತಿದ್ದರೆ, ಉಪ ಚುನಾವಣೆಯಲ್ಲಿ ತಟಸ್ಥವಾಗಿರುವ ಜೆಡಿಎಸ್ ಶಾಸಕ ಜಿ.ಟಿ. ದೇವೇಗೌಡ, ಕುಟುಂಬ ಸದಸ್ಯರೊಂದಿಗೆ ಎಂಜಾಯ್ ಮೂಡಿನಲ್ಲಿದ್ದಾರೆ. ಹುಣಸೂರು ಕ್ಷೇತ್ರದ ಮೇಲೆ ಹಿಡಿತ ಹೊಂದಿರುವ ಜಿ.ಟಿ. ದೇವೇಗೌಡ, ತಮ್ಮ ಬೆಂಬಲ ಯಾರಿಗೆ ಎಂಬ ಗುಟ್ಟು ಬಿಟ್ಟುಕೊಡದೆ, ರಾಜಕೀಯ ಜಂಜಾಟ ಬದಿಗಿಟ್ಟು, ಆರಾಮವಾಗಿ ಕಾಲ ಕಳೆಯುತ್ತಿದ್ದಾರೆ.

ಹೀಗಾಗಿ ಜಿಟಿಡಿ ಅವರ ಮುಂದಿನ ನಡೆ ನಿಗೂಢವಾಗಿದೆ. ರಾಜಕೀಯ ಒತ್ತಡವಿಲ್ಲದೇ ಕುಟುಂಬ ಸದಸ್ಯರ ಜೊತೆ ಮೈಸೂರು ತಾಲ್ಲೂಕಿನ ದಡದಕಲ್ಲಹಳ್ಳಿ ಗ್ರಾಮದಲ್ಲಿ ನಡೆದಿರುವ ಶ್ರೀನಿವಾಸ ಕಲ್ಯಾಣೋತ್ಸವ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು, ಜಿಟಿಡಿ ಭರ್ಜರಿ ಡ್ಯಾನ್ಸ್ ಮಾಡಿರುವ ವೀಡಿಯೋ ವೈರಲ್ ಆಗಿದೆ. ಪತ್ನಿ ಲಲಿತಾ ಜೊತೆ ಜಿ.ಟಿ. ದೇವೇಗೌಡರು ಮಾಡಿದ ಕಲ್ಯಾಣ ನೃತ್ಯಕ್ಕೆ, ಅಭಿಮಾನಿಗಳು ಫುಲ್ ಫಿದಾ ಆಗಿದ್ದಾರೆ.












Click it and Unblock the Notifications