ಮೈಸೂರಿಗೆ ಶೀಘ್ರವೇ ಬರಲಿದೆ ಹೆಲಿ ಟೂರಿಸಂ

ಮೈಸೂರು, ಮಾರ್ಚ್ 02: ಪ್ರವಾಸಿಗರ ಸ್ವರ್ಗ ಎಂದು ಬಿಂಬಿತವಾಗಿರುವ ಸಾಂಸ್ಕೃತಿಕ ನಗರಿ ಮೈಸೂರು, ಕೆಲವೇ ದಿನಗಳಲ್ಲಿ ಇನ್ನಷ್ಟು ಆಕರ್ಷಣೀಯ ತಾಣವಾಗಿ ರೂಪುಗೊಳ್ಳಲಿದೆ. ಆ ಮೂಲಕ ಪ್ರವಾಸೋದ್ಯಮಕ್ಕೆ ಮತ್ತಷ್ಟು ಮೆರಗು ಸಿಗಲಿದೆ.

ಹತ್ತಾರು ಪ್ರವಾಸಿ ತಾಣ, ಸುಂದರ ಪ್ರಕೃತಿಯ ಸೊಬಗನ್ನು ಹೊಂದಿರುವ ಮೈಸೂರಲ್ಲಿ ಶೀಘ್ರವೇ ಹೆಲಿ ಟೂರಿಸಂ ಆರಂಭಕ್ಕೆ ಸರ್ಕಾರ ಚಿಂತನೆ ನಡೆಸಿದೆ. ಪ್ರವಾಸೋದ್ಯಮ ಸಚಿವ ಸಿ. ಪಿ. ಯೋಗೇಶ್ವರ್ ಈ ಬಗ್ಗೆ ಹೇಳಿಕೆ ನೀಡಿದ್ದಾರೆ.

ಮಂಗಳವಾರ ಮೈಸೂರಿನಲ್ಲಿ ಮಾತನಾಡಿದ ಸಚಿವರು, "ಮೈಸೂರು ಸೇರಿ ರಾಜ್ಯದ 4 ಪ್ರವಾಸಿ ತಾಣಗಳಲ್ಲಿ ಹೆಲಿ ಟೂರಿಸಂ ಆರಂಭಿಸುತ್ತೇವೆ. ಈ ಬಗ್ಗೆ ಅಧಿಕಾರಿಗಳ ಜೊತೆ ಸಭೆ ಮಾಡಲಿದ್ದೇನೆ" ಎಂದರು ಹೇಳಿದರು.

Government to start Heli Tourism soon In Mysuru: CP Yogeshwar

"ಮೈಸೂರಿನ ಹೋಟೆಲ್‌ಗಳನ್ನು ವಾಣಿಜ್ಯ ವ್ಯಾಪ್ತಿಯಿಂದ ಕೈಗಾರಿಕಾ ವ್ಯಾಪ್ತಿಗೆ ತರಲಾಗುವುದು. ಮೈಸೂರು ಪ್ರವಾಸೋದ್ಯಮಕ್ಕೆ ಬೇಕಾಗಿರೋ ಎಲ್ಲಾ ರೀತಿಯ ಉತ್ತೇಜನ ನೀಡುವುದಾಗಿ" ಸಚಿವರು ಭರವಸೆ ನೀಡಿದರು.

ಇತ್ತೀಚಿನ ದಿನಗಳಲ್ಲಿ ಮೈಸೂರಿಗೆ ಪ್ರವಾಸಿಗರ ಸಂಖ್ಯೆ ಕಡಿಮೆ ಆಗುತ್ತಿರುವ ಕುರಿತು ಪ್ರತಿಕ್ರಿಯಿಸಿದ ಸಚಿವರು, "ಇದಕ್ಕೆ ಕಾರಣ ಅಂತರ ರಾಜ್ಯ ರಸ್ತೆ ತೆರಿಗೆ ಹೆಚ್ಚಳ. ಒಂದೇ ದೇಶ ಒಂದು ತೆರಿಗೆಯಂತೆ ಒಂದೇ ತೆರಿಗೆ ಪದ್ದತಿ ಜಾರಿಗೆ ಚಿಂತನೆ ನಡೆದಿದೆ" ಎಂದರು.

"ಕೇರಳ ಮಾದರಿಯಲ್ಲಿ ರಸ್ತೆ ತೆರಿಗೆ ಜಾರಿಗೆ ಚಿಂತಿಸಲಾಗಿದ್ದು, ಈ ಬಾರಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಮಂಡಿಸಲಿರುವ ಬಜೆಟ್‌ನಲ್ಲಿ ಮೈಸೂರು ಪ್ರವಾಸೋದ್ಯಮಕ್ಕೆ ವಿಶೇಷ ಅನುದಾನ ಸಿಗುವ ನಿರೀಕ್ಷೆ" ಇದೆ ಎಂದು ಸಚಿವರು ಹೇಳಿದರು.

ಹೆಲಿ ಟೂರಿಸಂ: ಮೈಸೂರಿನಲ್ಲಿ ದಸರಾ ಸಂದರ್ಭದಲ್ಲಿ ಹೆಲಿ ಟೂರಿಸಂ ಸೇವೆ ಪ್ರಸ್ತುತ ಲಭ್ಯವಿದೆ. ಹೆಲಿಕಾಪ್ಟರ್‌ನಲ್ಲಿ ಕುಳಿತು ನಗರದ ಸೌಂದರ್ಯವನ್ನು ಸವಿಯಬಹುದಾಗಿದೆ. ಇದಕ್ಕೆ ದರವನ್ನು ನಿಗದಿ ಮಾಡಿರಲಾಗುತ್ತದೆ.

ಸಚಿವರಾದ ಬಳಿಕ ಮೊದಲ ಬಾರಿಗೆ ಮೈಸೂರಿಗೆ ಭೇಟಿ ನೀಡಿರುವ ಸಿ. ಪಿ. ಯೋಗೇಶ್ವರ್ ಚಾಮುಂಡಿಬೆಟ್ಟಕ್ಕೆ ತೆರಳಿ ನಾಡಿನ ಅಧಿದೇವತೆ ಚಾಮುಂಡೇಶ್ವರಿ ದರ್ಶನ ಪಡೆದು ವಿಶೇಷ ಪೂಜೆಯನ್ನು ಸಲ್ಲಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+