Good News: ಮೈಸೂರು ದಸರಾ, ಕೆಆರ್‌ಎಸ್‌ಗೆ ಆಗಮಿಸುವ ಪ್ರವಾಸಿ ವಾಹನಗಳಿಗೆ ತೆರಿಗೆ ವಿನಾಯಿತಿ-ಎಲ್ಲಿವರೆಗೆ?

Mysuru Dasara 2024: ಈಗಾಗಲೇ ಮೈಸೂರು ದಸರಾಗೆ ಅದ್ಧೂರಿ ಚಾಲನೆ ಸಿಕ್ಕಿದೆ. ಇನ್ನು ಈ ವೇಳೆ ಲಕ್ಷಾಂತರ ಸಂಖ್ಯೆಯಲ್ಲಿ ಪ್ರವಾಸಿಗರ ದಂಡೇ ಹರಿದುಬರುತ್ತದೆ. ಅದರಲ್ಲೂ ಯಲ್ಲೋ ಬೋರ್ಟ್‌ ಇರುವಂತಹ ಪ್ರವಾಸಿ ವಾಹನಗಳಲ್ಲಿ ಬರುವವರ ಸಂಖ್ಯೆ ಹೆಚ್ಚಾಗಿರುತ್ತದೆ. ಆದ್ದರಿಂದ ಇಂತಹ ವಾಹನಗಳಿಗೆ ಸಾರಿಗೆ ಇಲಾಖೆ ಗುಡ್‌ನ್ಯೂಸ್‌ವೊಂದನ್ನು ನೀಡಿದೆ.

ವಿಶ್ವ ವಿಖ್ಯಾತ ದಸರಾ ಹಬ್ಬ ಹಿನ್ನೆಲೆ ಹೊರ ರಾಜ್ಯಗಳಿಂದ ಮೈಸೂರಿಗೆ ಬರುವವರ ಸಂಖ್ಯೆ ಹೆಚ್ಚಾಗಿರುತ್ತದೆ. ಅದರಲ್ಲೂ ಪ್ರವಾಸಿ ವಾಹನಗಳಲ್ಲಿ ಅಂದರೆ ಹಳದಿ ನಂಬರ್‌ ಪ್ಲೇಟ್ ವಾಹನಗಳಲ್ಲೇ ಬರುವವರ ಸಂಖ್ಯೆ ಹೆಚ್ಚಾಗಿರುತ್ತದೆ. ಆದ್ದರಿಂದ ಅಕ್ಟೋಬರ್ 4ರಿಂದ 12ರ ವರೆಗೆ ಇಂತಹ ಪ್ರವಾಸಿ ವಾಹನಳ ಪ್ರವೇಶ ತೆರಿಗೆ ವಿನಾಯಿತಿ ನೀಡಿ ಸಾರಿಗೆ ಇಲಾಖೆ ಆದೇಶ ಹೊರಡಿಸಿದೆ.

Good News Tax Exemption for Tourist Vehicles Arriving for Mysuru Dasara and KRS Dam

ಯಾವುದೇ ಹಳದಿ ಬೋರ್ಡ್ ವಾಹನಗಳು ರಾಜ್ಯ ಪ್ರವೇಶಿಸಲು ತೆರಿಗೆ ಪಾವತಿ ಕಡ್ಡಾಯ ಆಗಿದೆ. ಆದರೆ, ದಸರಾ ಹಬ್ಬದ ಸಮಯದಲ್ಲಿ ಮೈಸೂರಿಗೆ ಪ್ರವಾಸಕ್ಕೆ ಬರುವ ಹೊರ ರಾಜ್ಯದ ಹಳದಿ ಬೋರ್ಡ್ ವಾಹನಗಳಿಗೆ ಪ್ರವೇಶ ತೆರಿಗೆಯಿಂದ ವಿನಾಯಿತಿ ನೀಡಲಾಗಿದೆ. ರಾಜ್ಯ ಪ್ರವೇಶಕ್ಕೆ ಮೊದಲು ಗಡಿಭಾಗದಲ್ಲಿ ವಿಶೇಷ ರಹದಾರಿ ಪಡೆಯಬೇಕಿದೆ.

ಮೈಸೂರು ನಗರ ಮತ್ತು ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ ಕೆಆರ್‌ಎಸ್‌ ಜಲಾಶಯ ವೀಕ್ಷಿಸಲು ಬರುವ ಪ್ರವಾಸಿ ವಾಹನಗಳಿಗೆ ಮಾತ್ರ ಈ ತೆರಿಗೆ ವಿನಾಯಿತಿ ಅನ್ವಯ ಆಗಲಿದೆ ಎಂದು ತಿಳಿದುಬಂದಿದೆ.

ಫಲಪುಷ್ಪ ಪ್ರದರ್ಶನದ ಥೀಮ್‌ ಏನಿದೆ?: ಇನ್ನು ಅಕ್ಟೋಬರ್ 03ರಂದು ವಿಶ್ವ ವಿಖ್ಯಾತ ಮೈಸೂರು ದಸರಾಗೆ ಅದ್ಧೂರಿ ಚಾಲನೆ ಸಿಕ್ಕಿದೆ. ಅದರಲ್ಲೂ ದಸರಾ ಪ್ರಮುಖ ಆಕರ್ಷಣೆಗಳಲ್ಲಿ ಫಲಪುಷ್ಪ ಪ್ರದರ್ಶನವೂ ಕೂಡ ಒಂದಾಗಿದೆ. ಹಾಗಾದರೆ ಈ ಬಾರಿಯ ಫಲಪುಷ್ಪ ಪ್ರದರ್ಶನದ ಥೀಮ್‌ ಏನಿದೆ ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ತಿಳಿಯಿರಿ.

ಮೈಸೂರು ದಸರಾ ವಿಶೇಷತೆಗಳಲ್ಲೊಂದಾದ ಫಲಪುಷ್ಪ ಪ್ರದರ್ಶನ ನೋಡುಗರನ್ನು ತನ್ನತ್ತ ಕೈಬೀಸಿ ಕರೆಯುತ್ತಿದ್ದು, ಮೇಲ್ನೋಟಕ್ಕೆ ಪುಷ್ಪಲೋಕವೇ ಧರೆಗಿಳಿದು ಬಂದಿದೆಯೇನೋ ಎಂಬಂತೆ ಭಾಸವಾಗುತ್ತಿದೆ. ಸರ್ಕಾರ ಪಂಚ ಗ್ಯಾರಂಟಿಗಳು ಇಲ್ಲಿ ರಾರಾಜಿಸುತ್ತಿದ್ದು, ಪುಷ್ಪಗಳಲ್ಲಿಯೇ ಭಾರತದ ಸಂವಿಧಾನ, ಸಂಸತ್ತಿನ ಕುರಿತಂತೆ ಜನರಿಗೆ ಜಾಗೃತಿ ಮೂಡಿಸುವ ಕೆಲಸವನ್ನು ಮಾಡಲಾಗಿದೆ.

ಪುಷ್ಪ ಪ್ರೇಮಿಗಳನ್ನು ಬಗೆ-ಬಗೆಯ ಪುಷ್ಪಗಳು ತನ್ನತ್ತ ಕೈ ಬೀಸಿ ಕರೆಯುತ್ತಿದ್ದರೆ, ವಿವಿಧ ನಮೂನೆಯ ಪುಷ್ಪಗಳಿಂದ ನಿರ್ಮಾಣಗೊಂಡ ಕಲಾಕೃತಿಗಳು ಕಣ್ಮನ ಸೆಳೆಯುತ್ತಿವೆ. ಫಲಪುಷ್ಪ ಪ್ರದರ್ಶನ ನಡೆಯುತ್ತಿರುವ ಕುಪ್ಪಣ್ಣ ಪಾರ್ಕ್‌ ಅನ್ನು ಒಂದು ಹೊಡೆದರೆ, ಇಲ್ಲಿ ಸಮಾಜಕ್ಕೆ ಅತ್ಯಾದ್ಭುತ ಕೊಡೆಗೆಗಳನ್ನು ನೀಡಿದ ವ್ಯಕ್ತಿಗಳು, ಸಾಧಕರು, ವಚನಾಕಾರರ ಕಲಾಕೃತಿಗಳನ್ನು ಕಾಣಬಹುದಾಗಿದೆ.

ದೇಶದ ಸಂವಿಧಾನದಿಂದ ಆರಂಭವಾಗಿ 12ನೇ ಶತಮಾನದಲ್ಲಿ ಅಲ್ಲಮಪ್ರಭು, ಬಸವಣ್ಣ ಸೇರಿದಂತೆ ನೂರಾರು ಶರಣರು ಒಟ್ಟುಗೂಡಿ ಸಮಾಜ ಸುಧಾರಣೆಗಾಗಿ ಚರ್ಚೆ ನಡೆಸುತ್ತಿದ್ದ ಅನುಭವ ಮಂಟಪ, ಶಿಕ್ಷಣ ಕ್ರಾಂತಿಯ ಬಗ್ಗೆ ಬೆಳಕು ಚೆಲ್ಲಿದ ಅಕ್ಷರದವ್ವ ಸಾವಿತ್ರಿ ಬಾಯಿ ಫುಲೆ ನೋಡುಗರನ್ನು ಸೆಳೆಯುತ್ತಾರೆ.

ಅಷ್ಟೇ ಅಲ್ಲದೆ ಈ ಬಾರಿ ಟಿ-20 ವಿಶ್ವಕಪ್ ಗೆದ್ದ ಭಾರತಕ್ಕೆ ಅಭಿನಂದನೆ ಸಲ್ಲಿಸುವ ಸಲುವಾಗಿ ವಿಶ್ವಕಪ್ ಮಾದರಿ ಕೂಡ ಹೂವಿನಿಂದ ಅರಳಿ ನಿಂತಿದ್ದು, ಕ್ರೀಡಾಭಿಮಾನಿಗಳನ್ನು ತನ್ಮತ್ತ ಸೆಳೆಯುವುದರಲ್ಲಿ ಯಾವುದೇ ಅನುಮಾನವಿಲ್ಲ.

ಪುಷ್ಪಗಳಲ್ಲಿ ಮೂಡಿದ ಪಂಚ ಗ್ಯಾರಂಟಿ: ಇನ್ನು ಕ್ರಿಸ್ತಪೂರ್ವದಲ್ಲಿ ಭಗವಾನ್ ಬುದ್ಧನು ತಮ್ಮ ಶಿಷ್ಯರ ಜೊತೆ ಕುಳಿತು ಸಂವಾದ ನಡೆಸುತ್ತಿರುವ ದೃಶ್ಯವನ್ನೂ ಕೂಡ ಹೂವಿನಲ್ಲಿ ರೂಪ ಕೊಡಲಾಗಿದೆ. ನಮ್ಮ ದೇಶದ ಹೆಮ್ಮೆಯ ಪಾರ್ಲಿಮೆಂಟ್, ಅದಕ್ಕಾಗಿ ದುಡಿದ ಮಹನೀಯರ ಚಿತ್ರಗಳೂ ಕೂಡ ಪುಷ್ಪ ರೂಪದಲ್ಲಿ ಅನಾವರಣಗೊಂಡು, ದೇಶದ ಸಂವಿಧಾನ, ಸಂಸತ್ತು ಕುರಿತು ಜನರಿಗೆ ಜಾಗೃತಿ ಮೂಡಿಸುವ ಕಾಯಕದಲ್ಲಿ ತೊಡಗಿರುವುದು ಕಂಡು ಬರುತ್ತದೆ.

ಇದೆಲ್ಲದರ ನಡುವೆ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳಾದ ಅನ್ನಭಾಗ್ಯ, ಯುವನಿಧಿ, ಗೃಹಜ್ಯೋತಿ, ಶಕ್ತಿ ಹಾಗೂ ಗೃಹಲಕ್ಷ್ಮೀ ಯೋಜನೆಗಳ ವಿಷಯಾಧಾರಿತವಾದ ಪುಷ್ಪ ಕಲಾಕೃತಿ ಮಾದರಿಗಳು ಸರ್ಕಾರಿ ಯೋಜನೆಯನ್ನು ಜನರಿಗೆ ಮುಟ್ಟಿಸುವ ಕೆಲಸ ಮಾಡುತ್ತಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+