ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸೀತೆ ಜಿಂಕೆ, ದನ, ಹಂದಿ ಮಾಂಸ ತಿಂದಿದ್ದಾಳೆ : ವಿವಾದಾತ್ಮಾಕ ಹೇಳಿಕೆ

|
Google Oneindia Kannada News

ಮೈಸೂರು, ಜನವರಿ 12 : ರಾಮನ ಕುರಿತಾಗಿ ವಿವಾದಾತ್ಮಕ ಹೇಳಿಕೆ ನೀಡಿದ ಚಿಂತಕ ಕೆ. ಎಸ್ ಭಗವಾನ್ ಬಳಿಕ ಮೈಸೂರಿನಲ್ಲಿ ಮತ್ತೊಬ್ಬರು ವಿವಾದಾತ್ಮಕ ಹೇಳಿಕೆ ನೀಡಿ ಹಿಂದೂಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಹೌದು, ಮರ್ಯಾದಾ ಪುರುಷೋತ್ತಮ ಶ್ರೀ ರಾಮನ ಕುರಿತ ವಿವಾದಿತ ಹೇಳಿಕೆಗಳ ಬೆನ್ನಲ್ಲೇ ಇದೀಗ ರಾಮನ ಪತ್ನಿ ಸೀತೆಯ ಆಹಾರ ಕ್ರಮದ ಬಗ್ಗೆ ಪೆರಿಯಾರ್​ವಾದಿ ಚಿಂತಕಿ ಕಲೈಸೆಲ್ವಿ ಸ್ಥಳೀಯ ಕಾರ್ಯಕ್ರಮವೊಂದರಲ್ಲಿ ವಿವಾದಾತ್ಮಕ ಹೇಳಿಕೆ ನೀಡಿ ಸದ್ದು ಮಾಡಿದ್ದಾರೆ.

ಪ್ರೊ.ಕೆ.ಎಸ್.ಭಗವಾನ್ ಹತ್ಯೆಗೆ ಸಂಚು : 700 ಪುಟಗಳ ಚಾರ್ಜ್ ಶೀಟ್ ಸಲ್ಲಿಕೆ ಪ್ರೊ.ಕೆ.ಎಸ್.ಭಗವಾನ್ ಹತ್ಯೆಗೆ ಸಂಚು : 700 ಪುಟಗಳ ಚಾರ್ಜ್ ಶೀಟ್ ಸಲ್ಲಿಕೆ

ಸೀತೆ ಜಿಂಕೆ, ಹಂದಿ, ದನದ ಮಾಂಸ ತಿಂದಿರುವ ಕುರಿತು ಸೀತೆ ಅರಣ್ಯ ಕಾಂಡದಲ್ಲಿ ಉಲ್ಲೇಖವಿದೆ. ಆಕೆ ತಾನೇ ಖುದ್ದು ದನದ ಮಾಂಸವನ್ನು ತುಪ್ಪದಲ್ಲಿ ಹುರಿದು ತಿಂದ ಬಗ್ಗೆ ಆ ಪುರಾಣದಲ್ಲಿ ಉಲ್ಲೇಖವಿದೆ. ಅದೇ ನಾವು ಈಗಿನ ಕಾಲದಲ್ಲಿ ಜಿಂಕೆ ಮಾಂಸ ತಿಂದಿದ್ದರೆ ಅರಣ್ಯ ಕಾಯ್ದೆ ಅಡಿ ಬಂಧನವಾಗುತ್ತಿತ್ತು ಎಂದು ಹೇಳುವ ಮೂಲಕ ವಿವಾದಾತ್ಮಕ ನುಡಿಗೆ ಕಿಡಿ ಹತ್ತಿಸಿದ್ದಾರೆ.

Goddess Sita ate deer meat

ವೇದಗಳ ಕಾಲದಲ್ಲಿ ಮಹಿಳೆಯರಿಗೆ ಹೆಚ್ಚಿನ ಮಹತ್ವ ಇತ್ತು ಎಂಬುದು ಶುದ್ಧ ಸುಳ್ಳು. ಆದರೆ, ಮಹಿಳೆಯರಿಗೆ ಯಾವುದೇ ರೀತಿಯ ಸ್ವಾತಂತ್ರ್ಯವಿರಲಿಲ್ಲ. ಧರ್ಮವನ್ನು‌ ಪ್ರತಿಪಾದಿಸಲು ಮಹಿಳೆಯರ ಮೇಲೆ ಈ ರೀತಿ ಹೇರಿಕೆ ಮಾಡಲು ಇವರು ಯಾರು?. ವರ್ಣಾಶ್ರಮ ಧರ್ಮವನ್ನು ಒಪ್ಪಿಕೊಂಡು ವರ್ಣಾಶ್ರಮ‌ ಶ್ರೇಷ್ಟ, ಬ್ರಾಹ್ಮಣರು ಶ್ರೇಷ್ಟ ಎಂದು ಒಪ್ಪಿಕೊಳ್ಳಬೇಕು. ಇಲ್ಲವಾದರೆ ಅವರನ್ನು ಕೀಳಾಗಿ ನೋಡುತ್ತಿದ್ದರು ಎಂದರು.

ಭಗವಾನ್ ಮೇಲಿನ ಎಲ್ಲಾ ದೂರುಗಳನ್ನು ವಜಾಗೊಳಿಸುವಂತೆ ಪೊಲೀಸರಿಗೆ ಒತ್ತಡ ಭಗವಾನ್ ಮೇಲಿನ ಎಲ್ಲಾ ದೂರುಗಳನ್ನು ವಜಾಗೊಳಿಸುವಂತೆ ಪೊಲೀಸರಿಗೆ ಒತ್ತಡ

ದೇವರ ಕಾಲದಲ್ಲಿ ವಿಷ್ಟು ಅಷ್ಟೊಂದು ಅವತಾರ ಎತ್ತಿದ್ದಾನೆ ಎಂಬ ಮಾತಿದೆ. ಆದರೆ ಶಿವ ಯಾಕೆ ಎತ್ತಿಲ್ಲ. ವಿಷ್ಣು ದೇವಾಲಾಯಗಳು ವಿಜೃಂಭಣೆಯಿಂದ ಕೂಡಿರುತ್ತವೆ. ಶಿವನ ದೇವಾಲಯ ಬೋಗಿಯಂತೆ ಸಾಧಾರಣವಾಗಿ ತೋರಿಸಲು ಕಾರಣ ಏನು? ಇದು ಮೌಡ್ಯವನ್ನು ಹೆಚ್ಚಿಸುವ ಕೆಲಸ ಎಂದು ಪುಂಖಾನುಪುಂಖವಾಗಿ ನುಡಿದು ಎಲ್ಲರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

English summary
Tamil writer Kalaiselvi Stocked a controversy on Saturday by Claiming Goddess sita used to consume Deer, Cow meat.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X