ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರು ರೈಲು ನಿಲ್ದಾಣದಲ್ಲಿ ದಂಡ ಪ್ರಯೋಗ

|
Google Oneindia Kannada News

ಮೈಸೂರು, ಡಿ. 6 : ಮೈಸೂರು ರೈಲು ನಿಲ್ದಾಣದಲ್ಲಿ ಸ್ವಚ್ಛತೆಯನ್ನು ಕಾಪಾಡಲು ಅಧಿಕಾರಿಗಳು ದಂಡದ ಮೊರೆ ಹೋಗಿದ್ದಾರೆ. ಉಗುಳಿದರೆ, ನಿಲ್ದಾಣದಲ್ಲಿ ಎಲ್ಲೆಂದರಲ್ಲಿ ಕಸ ಹಾಕಿದರೆ, ರೈಲು ನಿಲ್ದಾಣದಲ್ಲಿದ್ದಾಗ ಅದರ ಶೌಚಾಲಯ ಬಳಕೆ, ನಿಲ್ದಾಣದಲ್ಲಿ ಧೂಮಪಾನ ಮಾಡಿದರೆ ನೀವು ದಂಡ ಪಾವತಿ ಮಾಡಬೇಕಾಗುತ್ತದೆ.

ಎರಡು ವರ್ಷಗಳ ಹಿಂದೆ ರೈಲು ನಿಲ್ದಾಣದ ಸ್ವಚ್ಛತೆಗಾಗಿ ದಂಡ ಹಾಕುವ ಕಾನೂನನ್ನು ಮೈಸೂರು ರೈಲು ನಿಲ್ದಾಣದಲ್ಲಿ ಜಾರಿಗೆ ತರಲಾಗಿದೆ. ಆದರೆ, ಬೆರಳೆಣಿಕೆ ಪ್ರಕರಣದಲ್ಲಿ ಮಾತ್ರ ದಂಡ ಹಾಕಲಾಗಿದೆ. ಸದ್ಯ, ಈ ಕಾನೂನನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲು ಅಧಿಕಾರಿಗಳು ನಿರ್ಧರಿಸಿದ್ದಾರೆ. [ವಿವಿಯಲ್ಲಿ ಧಮ್ ಹೊಡೆದ್ರೆ ಪರೀಕ್ಷೆ ಬರೆಯುವಂತಿಲ್ಲ]

mysuru

ನಿಲ್ದಾಣದಲ್ಲಿ ಉಗುಳಿದರೆ, ಎಲ್ಲೆಂದರಲ್ಲಿ ಕಸ ಹಾಕಿದರೆ, ರೈಲು ನಿಲ್ದಾಣದಲ್ಲಿದ್ದಾಗ ಅದರ ಶೌಚಾಲಯ ಬಳಸಿದರೆ, ಧೂಮಪಾನ ಮಾಡಿದರೆ ಸ್ಥಳದಲ್ಲೇ ದಂಡ ವಿಧಿಸಲಾಗುತ್ತದೆ. ಈ ಕುರಿತು ಪ್ರಯಾಣಿಕರಿಗೆ ಎಚ್ಚರಿಕೆ ನೀಡುವ ಫಲಕಗಳನ್ನು ನಿಲ್ದಾಣದಲ್ಲಿ ಅಧಿಕಾರಿಗಳು ಹಾಕುತ್ತಿದ್ದಾರೆ. ['ಟೀಮ್' ಸ್ವಚ್ಛತಾ ಕಾರ್ಯಕ್ಕೆ ರೈಲ್ವೆ ಪ್ರಶಂಸೆ]

ಎಷ್ಟು ದಂಡ : ರೈಲ್ವೆ ನಿಲ್ದಾಣದ ಸ್ವಚ್ಛತೆ ಕುರಿತು 2012ರಲ್ಲಿ ಜಾರಿಗೆ ಬಂದ ನಿಯಮದಂತೆ ಧೂಮಪಾನಕ್ಕೆ 100 ರೂ. ಮತ್ತು ಉಗುಳಿದರೆ, ಕಸ ಹಾಕಿದರೆ, ಶೌಚಾಲಯ ಬಳಸಿದರೆ 500 ರೂ. ದಂಡ ವಿಧಿಸಬಹುದಾಗಿದೆ. ಆದರೆ, ಅಧಿಕಾರಿಗಳು ಧೂಮಪಾನಕ್ಕೆ 100 ಮತ್ತು ಇತರ ಚಟುವಟಿಕೆಗಳಿಗೆ 200 ರೂ. ದಂಡ ವಸೂಲಿ ಮಾಡಲು ನಿರ್ಧರಿಸಿದ್ದಾರೆ.

ವಿಭಾಗೀಯ ರೈಲ್ವೆ ವ್ಯವಸ್ಥಾಪಕ ರಾಜ್ಕುಮಾರ್ ಲಾಲ್ ಅವರೂ ದಂಡ ಪ್ರಯೋಗದ ಬಗ್ಗೆ ಮಾಹಿತಿ ನೀಡಿದ್ದು, ಕಳೆದ ಬುಧವಾರದಿಂದ ಪ್ರಯಾಣಿಕರಿಗೆ ಈ ಕುರಿತು ಮಾಹಿತಿ ನೀಡಲು ಫಲಕ ಅಳವಡಿಕೆ, ಕರಪತ್ರ ಹಂಚಿಕೆಯನ್ನು ಆರಂಭಿಸಲಾಗಿದ್ದು, ಮುಂದಿನ ವಾರದಿಂದ ದಂಡ ವಿಧಿಸಲಾಗುತ್ತದೆ ಎಂದು ಹೇಳಿದ್ದಾರೆ.

English summary
The Railway authorities in Mysuru have begun penalizing passengers for not only littering and spitting on railway premises, including compartments, but also for using the toilet when the train is stationed at the platform.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X