ಮೈಸೂರು: ಭದ್ರತಾ ಸಿಬ್ಬಂದಿಗೆ ಬಾಂಬ್ ದಾಳಿ ತಡೆ ತರಬೇತಿ
ಮೈಸೂರು, ಜ. 28: ಫೆಬ್ರವರಿ 5 ರಿಂದ 7 ರವರೆಗೆ ಮೈಸೂರಿನಲ್ಲಿ ಭದ್ರತಾ ಸಿಬ್ಬಂದಿಗೆ ವಿಧ್ವಂಸಕ ಕೃತ್ಯ ತಡೆ ತರಬೇತಿ ನಡೆಯಲಿದೆ. ಮೈಸೂರು ನಗರ ಪೊಲೀಸ್ ಇಲಾಖೆ ಉಚಿತ ತರಬೇತಿ ಕಾರ್ಯಕ್ರಮ ಹಮ್ಮಿಕೊಂಡಿದೆ.
ಹೋಟೆಲ್, ಮಾಲ್ ಮತ್ತು ಇನ್ನಿತರ ಕಡೆಗಳಲ್ಲಿ ಕರ್ತವ್ಯ ಸಲ್ಲಿಸುವ ಖಾಸಗಿ ಭದ್ರತಾ ಸಿಬ್ಬಂದಿ ತರಬೇತಿಯಲ್ಲಿ ಭಾಗವಹಿಸಬಹುದು. ಬೆಂಗಳೂರಿನ ಚರ್ಚ್ ಸ್ಟ್ರೀಟ್ ಸ್ಫೋಟವನ್ನು ಗಮನದಲ್ಲಿರಿಸಿಕೊಂಡು ಪೊಲೀಸ್ ಇಲಾಖೆ ಉಚಿತ ತರಬೇತಿ ಶಿಬಿರ ಹಮ್ಮಿಕೊಂಡಿದೆ.[ಮೈಸೂರು ಅರಮನೆಗೆ ಹುಸಿ ಬಾಂಬ್ ಕರೆ ಬೆದರಿಕೆ]

ಸಾರ್ವಜನಿಕ ಸ್ಥಳಗಳು ಅಂದರೆ ಹೋಟೆಲ್, ಮಾಲ್ ಮತ್ತಿತರ ಕಡೆ ಕೆಲಸ ನಿರ್ವಹಿಸುವ ಭದ್ರತಾ ಸಿಬ್ಬಂದಿ ಯಾವ ಅಂಶಗಳನ್ನು ತಿಳಿದುಕೊಂಡಿರಬೇಕು? ವೈಜ್ಞಾನಿಕ ಉಪಕರಣ ಬಳಕೆ ಹೇಗೆ? ತಪಾಸಣೆ ಕ್ರಮ ಹೇಗೆ? ಈ ರೀತಿಯ ಹಲವಾರು ಅಂಶಗಳನ್ನು ತರಬೇತಿಯಲ್ಲಿ ತಿಳಿಸಿಕೊಡಲಾಗುವುದು.[ಮೈಸೂರಲ್ಲಿ ವೇಶ್ಯಾವಾಟಿಕೆ ಜಾಲ : 2 ಯುವತಿಯರ ರಕ್ಷಣೆ]
ಪ್ರಾತ್ಯಕ್ಷಿಕೆಗಳ ಮೂಲಕ ತರಬೇತಿ ನಡೆಯಲಿದ್ದು ಹೆಚ್ಚಿನ ಮಾಹಿತಿಗೆ, ಎಸಿಪಿ ಮಲ್ಲಿಕಾರ್ಜುನಪ್ಪ ದೂರವಾಣಿ 0821-5418347 ಅಥವಾ 9480802210 ನ್ನು ಸಂಪರ್ಕಿಲು ಕೋರಲಾಗಿದೆ.











Click it and Unblock the Notifications