ಫ್ಲೈಬಸ್ಗೆ ಉಚಿತ ವೋಲ್ವೋ ಸಂಪರ್ಕ ಸೇವೆ

ಸೋಮವಾರ ಮೈಸೂರಿನಲ್ಲಿ ಈ ಸಂಪರ್ಕ ಸೇವೆ ಬಸ್ ಸಂಚಾರಕ್ಕೆ ಚಾಲನೆ ನೀಡಲಾಗಿದೆ. ನಗರದ ಪ್ರಮುಖ ಹೋಟೆಲ್, ಬಡಾವಣೆಗಳ ಮುಖಾಂತರ ಜನರು ಈ ವೋಲ್ವೋ ಬಸ್ ಮೂಲಕ, ಕೆಎಸ್ಆರ್ ಟಿಸಿ ನಿಲ್ದಾಣ ತಲುಪಿ ಫ್ಲೈಬಸ್ ಮೂಲಕ ಬೆಂಗಳೂರಿಗೆ ತೆರಳಬಹುದಾಗಿದೆ.
ಫ್ಲೈ ಬಸ್ ಸೇವೆಗೆ ಹೆಚ್ಚಿನ ಜನರನ್ನು ಆಕರ್ಷಿಸಲು ಕೆಎಸ್ಆರ್ ಟಿಸಿ ಈ ಸೇವೆಯನ್ನು ಪ್ರಾರಂಭಿಸಿದೆ. ವೋಲ್ವೋ ಬಸ್ ಗಳನ್ನು ಈ ಸಂಪರ್ಕ ಸೇವೆಗಾಗಿ ಬಳಸಿಕೊಳ್ಳಲಾಗಿದೆ. ಫ್ಲೈ ಬಸ್ ಗೆ ಸಂಪರ್ಕ ಕಲ್ಪಿಸುವ ಈ ಸೇವೆ ಉಚಿತವಾಗಿದೆ. (ಬೆಂಗಳೂರು ವಿ.ನಿಲ್ದಾಣ- ಮೈಸೂರು ಮಧ್ಯೆ ನೇರ ಬಸ್)
ಮಾರ್ಗ ಯಾವುದು : ಈ ನೂತನ ಸಂಪರ್ಕ ಸೇವೆ ಹೆಬ್ಟಾಳು ಕೈಗಾರಿಕಾ ಪ್ರದೇಶ ಇನ್ಫೋಸಿಸ್ನಿಂದ ಆರಂಭವಾಗಲಿದೆ. ಕೂರ್ಗಳ್ಳಿ, ಹೂಟಗಳ್ಳಿ, ಹಿನಕಲ್, ಪ್ರಿಮೀಯರ್ ಸ್ಟೂಡಿಯೋ, ಬಿಎಂ ಆಸ್ಪತ್ರೆ, ಮೆಟ್ರೋಪಾಲ್ ವೃತ್ತ, ರೈಲ್ವೇ ನಿಲ್ದಾಣ ವೃತ್ತ, ಕೆಆರ್ ಆಸ್ಪತ್ರೆ ಮಾರ್ಗವಾಗಿ ಸಂಚರಿಸಿ ಗ್ರಾಮಾಂತರ ಬಸ್ ನಿಲ್ದಾಣ ತಲುಪಲಿದೆ.
ಈ ಮಾರ್ಗಗಳಿಂದ ಸಾರ್ವಜನಿಕರು, ವೋಲ್ವೋ ಬಸ್ ನಲ್ಲಿ ಉಚಿತವಾಗಿ ಗ್ರಾಮಾಂತರ ಬಸ್ ನಿಲ್ದಾಣಕ್ಕೆ ಆಗಮಿಸಿ, ಫ್ಲೈಬಸ್ ಏರಿ ಬೆಂಗಳೂರು ತಲುಪಬಹುದು. ಫ್ಲೈ ಬಸ್ ಹೊರಡುವ ಸಮಯಕ್ಕೆ ಅನುಗುಣವಾಗಿ ಪ್ರಯಾಣಿಕರನ್ನು ಈ ಬಸ್ ನಿಲ್ದಾಣಕ್ಕೆ ತಲುಪಿಸಲಿದೆ.
ಕೆಎಸ್ಆರ್ ಟಿಸಿ ಆರಂಭಿಸಿರುವ ಫ್ಲೈಬಸ್ ಸೇವೆಗೆ ಪ್ರಯಾಣಿಕರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿರಲಿಲ್ಲ. ಆದ್ದರಿಂದ ಜನರನ್ನು ಆಕರ್ಷಿಸಲು ಇಂತಹ ಉಚಿತ ಸಂಪರ್ಕ ಸೇವೆ ಬಸ್ ಆರಂಭಿಸಿದೆ. ಇದರಿಂದ ಫ್ಲೈ ಬಸ್ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಲಿದೆಯೇ ಕಾದು ನೋಡಬೇಕು.
-
SSLC ಸಮಾಜ ವಿಜ್ಞಾನ ಪರೀಕ್ಷೆ ವಿಶ್ಲೇಷಣೆ: ಪ್ರಶ್ನೆಪತ್ರಿಕೆ ಹೇಗಿತ್ತು? ವಿದ್ಯಾರ್ಥಿಗಳ ಪ್ರತಿಕ್ರಿಯೆ ಏನು? -
ಉಬರ್ ಕ್ಯಾಬ್ ಬುಕ್ ಮಾಡಿದಷ್ಟೇ ಸುಲಭವಾಗಿ ತೆಂಗಿನಕಾಯಿ ಕೀಳುವವರನ್ನು ಕರೆಯಿರಿ: ಆನಂದ್ ಮಹೀಂದ್ರಾ ಹಂಚಿಕೊಂಡ Video Viral -
SSLC ಪರೀಕ್ಷೆ-1ರಲ್ಲಿ ಅಂಕ ಕಡಿಮೆಯಾಗಿದೆಯೇ? ಚಿಂತೆ ಬಿಡಿ, ಮೇ 18ರಿಂದ ನಡೆಯುವ ಪರೀಕ್ಷೆ-2ಕ್ಕೆ ಸಜ್ಜಾಗಿ -
Bengaluru: ಪಬ್ನಲ್ಲಿ 150 ರೂ. ಕೊಟ್ಟು ಆರ್ಡರ್ ಮಾಡಿದ್ರೆ ಬಂದಿದ್ದು ಬರೀ ಹಪ್ಪಳ-ಸಂಡಿಗೆ: ದಂಗಾದ ಗ್ರಾಹಕ -
ಇಂಡೋನೇಷ್ಯಾದಲ್ಲಿ 7.4 ತೀವ್ರತೆಯ ಪ್ರಬಲ ಭೂಕಂಪ: ಏಷ್ಯಾ ರಾಷ್ಟ್ರಗಳಲ್ಲಿ ಸುನಾಮಿ ಆತಂಕ, ಭಾರತದ ಮೇಲಾಗುವ ಪರಿಣಾಮವೇನು? -
Bengaluru House Rent: ಬೆಂಗಳೂರಿನ ಪ್ರೈಮ್ ಏರಿಯಾದಲ್ಲೂ ನಾನ್ವೆಜ್ ಪ್ರಿಯರಿಗೆ ಮನೆ ಸಿಗ್ತಿಲ್ಲ, ಸೋಷಿಯಲ್ ಮೀಡಿಯಾ ಚರ್ಚೆ -
Prakash Raj: ನಾಸ್ತಿಕನಾದರೂ ತಾಯಿಯ ನಂಬಿಕೆಗೆ ಗೌರವ ಕೊಟ್ಟು; ಕ್ರೈಸ್ತ ಧರ್ಮದ ಸಂಪ್ರದಾಯ ಪಾಲನೆ: ನಟ ಪ್ರಕಾಶ್ ರಾಜ್ -
Education: CBSE 9 ಮತ್ತು 10ನೇ ತರಗತಿಯ ಹೊಸ ಪಠ್ಯಕ್ರಮ ಇಂದು ಬಿಡುಗಡೆ -
ಮುಂದಿನ 2 ರಿಂದ 3 ವಾರಗಳಲ್ಲಿ ಇರಾನ್ ಮೇಲೆ ಅತ್ಯಂತ ಭೀಕರ ದಾಳಿ: ಟ್ರಂಪ್ ಎಚ್ಚರಿಕೆ -
ವಿದ್ಯಾರ್ಥಿಗಳ ಮೊಬೈಲ್ ಗೀಳಿಗೆ ಬ್ರೇಕ್: ಹೊಸ 'ಡಿಜಿಟಲ್ ನೀತಿ' ಪ್ರಕಟಿಸಿದ ಆರೋಗ್ಯ ಇಲಾಖೆ -
Raghav Chadha: ಸಂಸದ ರಾಘವ್ ಚಡ್ಡಾಗೆ ಶಾಕ್ ಕೊಟ್ಟ ಎಎಪಿ, ಬಿಜೆಪಿ ಸೇರಲಿದ್ದಾರೆಯೇ ಸ್ಟಾರ್ ರಾಜಕಾರಣಿ -
Nuwan Thushara: ಆರ್ಸಿಬಿಗಾಗಿ ಶ್ರೀಲಂಕಾ ಕ್ರಿಕೆಟ್ ಮಂಡಳಿಯ ವಿರುದ್ಧವೇ ತಿರುಗಿ ಬಿದ್ದ ಸ್ಟಾರ್ ಆಟಗಾರ ನುವಾನ್ ತುಷಾರ












Click it and Unblock the Notifications