ಮೈಸೂರಿನಲ್ಲಿ ವೇಶ್ಯಾವಾಟಿಕೆ ಜಾಲ: ನಾಲ್ವರ ಬಂಧನ

ಮೈಸೂರು, ಮೇ 31 : ಮೈಸೂರಿನಲ್ಲಿ ದಿನೇ ದಿನೇ ವೇಶ್ಯಾವಾಟಿಕೆ ಜಾಲ ಬೆಳೆಯುತ್ತಿದೆ. ಇದಕ್ಕೆ ಪೂರಕವೆಂಬಂತೆ ಇಲ್ಲಿನ ವಿಜಯನಗರದ ಮಹದೇಶ್ವರ ಬಡಾವಣೆಯ ತ್ರಿನೇತ್ರ ವೃತ್ತದಲ್ಲಿರುವ ಕಟ್ಟಡವೊಂದರಲ್ಲಿ ನಡೆಯುತ್ತಿದ್ದ ವೇಶ್ಯಾವಾಟಿಕೆ ಅಡ್ಡೆ ಮೇಲೆ ದಾಳಿ ನಡೆಸಿರುವ ನಗರ ಅಪರಾಧ ಪತ್ತೆ ವಿಭಾಗದ ಪೊಲೀಸರು ನಾಲ್ವರನ್ನು ಬಂಧಿಸಿ, ಇಬ್ಬರು ಯುವತಿಯರನ್ನು ರಕ್ಷಿಸಿದ್ದಾರೆ.

ನಗರದ ಮಹದೇವಪುರ ರಸ್ತೆ ನಿವಾಸಿ ಸಮೀರ್ ಪಾಷಾ (28), ನಜರ್ ಬಾದಿನ ಎಂ.ಸಿರಾಜುದ್ದೀನ್ (25), ಗಾಯತ್ರಿಪುರಂನ ಎಸ್.ಪ್ರಶಾಂತ್ (27), ಯಡಿಯಾಲದ ಆರ್.ವೆಂಕಟರಾಜು (22) ಬಂಧಿತರು.

ಇವರಲ್ಲಿ ಸಮೀರ್ ಪಾಷಾ, ಫೈರೋಜ್ ಎಂಬ ವ್ಯಕ್ತಿಯೊಂದಿಗೆ ಸೇರಿಕೊಂಡು ವೇಶ್ಯಾವಾಟಿಕೆ ನಡೆಸುತ್ತಿದ್ದ.

four people arrested for Prostitution rocket in Mysuru

ದಾಳಿ ವೇಳೆ 6 ಸಾವಿರ ನಗದು, 6 ಮೊಬೈಲ್‌ ಫೋನ್‌ಗಳು, 1 ಆಟೋ ಹಾಗೂ 2 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಸಿಸಿಬಿಯ ಎಸಿಪಿ ಮರಿಯಪ್ಪ ಅವರ ನೇತೃತ್ವದಲ್ಲಿ ಈ ದಾಳಿ ನಡೆದಿದೆ. ಇನ್‌ಸ್ಪೆಕ್ಟರ್ ಸಿ.ಕಿರಣ್ ‌ಕುಮಾರ್, ವಿಜಯನಗರ ಠಾಣೆಯ ಪ್ರಭಾರ ಇನ್‌ಸ್ಪೆಕ್ಟರ್ ಸುರೇಶ್‌ಕುಮಾರ್, ಸಿಬ್ಬಂದಿ ಎಂ.ಆರ್.ಗಣೇಶ್, ಆನಂದ್, ಅನಿಲ್, ಚಾಮುಂಡಮ್ಮ ಕಾರ್ಯಾಚರಣೆ ತಂಡದಲ್ಲಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+