ಮಾಜಿ ಸಂಸದ ವಿಶ್ವನಾಥ್ ಪುತ್ರನ ಕಾರು ಅಪಘಾತ
ಮೈಸೂರು, ಸೆಪ್ಟೆಂಬರ್ 20: ಜೆಡಿಎಸ್ ಮುಖಂಡ ಹಾಗೂ ಮಾಜಿ ಸಂಸದ ಅಡಗೂರು ಎಚ್.ವಿಶ್ವನಾಥ್ ಪುತ್ರ ಪೂರ್ವಜ್ ರ ಕಾರು ಅಪಘಾತಕ್ಕೀಡಾಗಿದ್ದು, ಸಂಸದರ ಪುತ್ರ ಅಪಾಯದಿಂದ ಪಾರಾಗಿದ್ದಾರೆ.
ಕೆ.ಆರ್.ನಗರ ಪಟ್ಟಣ ಹೊರವಲಯದ ಬಸವೇಶ್ವರ ದೇವಾಲಯ ಬಳಿ ಮಂಗಳವಾರ ತಡರಾತ್ರಿ ಕಾರು - ಆಟೋ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ್ದು, ಎರಡೂ ವಾಹನಗಳು ಸಂಪೂರ್ಣ ಜಖಂಗೊಂಡಿವೆ.

ಪ್ರಾಣಾಪಾಯದಿಂದ ಮಾಜಿ ಸಂಸದ ವಿಶ್ವನಾಥ್ ಅವರ ಪುತ್ರ ಪೂರ್ವಜ್ ಪಾರಾಗಿದ್ದಾರೆ. ಕಾರ್ಯನಿಮಿತ್ತ ಚಾಂದಗಾಲು ಗ್ರಾಮಕ್ಕೆ ತೆರಳುತ್ತಿದ್ದರು. ಆಲೂಗಡ್ಡೆ ತುಂಬಿದ್ದ ಗೂಡ್ಸ್ ಆಟೋಗೆ ಡಿಕ್ಕಿಯಾಗಿದೆ.ಅರಕಲಗೂಡು ಮಂಜುನಾಥ್ ಎಂಬವರಿಗೆ ಸೇರಿದ ಆಟೋ ಇದಾಗಿದ್ದು, ಘಟನೆಯಲ್ಲಿ ನಾಲ್ವರಿಗೆ ಗಾಯಗಳಾಗಿವೆ. ಗಾಯಾಳುಗಳನ್ನು ಮೈಸೂರಿನ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ. ಕೆ.ಆರ್.ನಗರ ಠಾಣೆ ಪ್ರಕರಣ ದಾಖಲಾಗಿದೆ.












Click it and Unblock the Notifications