ನಂಜನಗೂಡು ನ್ಯಾಯಾಲಯದಲ್ಲಿ ಅಗ್ನಿ ಅವಘಡ
ಮೈಸೂರು, ಫೆಬ್ರವರಿ 19: ಶಾರ್ಟ್ ಸರ್ಕ್ಯೂಟ್ ನಿಂದ ನಂಜನಗೂಡು ನ್ಯಾಯಾಲಯದ ಕಂಪ್ಯೂಟರ್ ಕೊಠಡಿ ಹೊತ್ತಿ ಉರಿದಿದೆ.
ಕೊಠಡಿಯಲ್ಲಿದ್ದ ಕೆಲವು ಕಂಪ್ಯೂಟರ್ ಮತ್ತು ಎಲೆಕ್ಟ್ರಾನಿಕ್ ವಸ್ತುಗಳು ಸಂಪೂರ್ಣ ಭಸ್ಮವಾಗಿವೆ. ನ್ಯಾಯಾಲಯದ ಮೊದಲನೇ ಅಂತಸ್ತಿನಲ್ಲಿ ಆಕಸ್ಮಿಕವಾಗಿ ಶಾರ್ಟ್ ಸರ್ಕ್ಯೂಟ್ ಆಗಿದ್ದರಿಂದ ಎಲೆಕ್ಟ್ರಾನಿಕ್ ವಸ್ತುಗಳು ಬೆಂಕಿಗೆ ಆಹುತಿಯಾಗಿವೆ.
ನಂಜನಗೂಡು ನ್ಯಾಯಾಲಯದಲ್ಲಿ ಕಾಣಿಸಿಕೊಂಡ ದಟ್ಟ ಹೊಗೆಯಿಂದ ಸಾರ್ವಜನಿಕರು ಮತ್ತು ನ್ಯಾಯಾಧೀಶರು ಗಾಬರಿಗೊಂಡಿದ್ದರು. ನಂತರ ಕೂಡಲೇ ಆಗಮಿಸಿದ ನಂಜನಗೂಡಿನ ಅಗ್ನಿಶಾಮಕ ಸಿಬ್ಬಂದಿಗಳು, ಬೆಂಕಿ ನಂದಿಸಲು ಯಶಸ್ವಿಯಾದರು.

ಕಂಪ್ಯೂಟರ್ ಮತ್ತು ಎಲೆಕ್ಟ್ರಾನಿಕ್ ವಸ್ತುಗಳನ್ನು ಹೊರತುಪಡಿಸಿದರೆ ಬೇರೆ ಯಾವುದಕ್ಕೆ ಹಾನಿಯಾಗಿದೆ ಎಂದು ತಿಳಿದು ಬಂದಿಲ್ಲ. ಆದರೆ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.












Click it and Unblock the Notifications