ಆಟೋ – ಬೈಕ್ ಮುಖಾಮುಖಿ ಡಿಕ್ಕಿ : ಅಪ್ಪ-ಮಗ ಸ್ಥಳದಲ್ಲೇ ಸಾವು
ಮೈಸೂರು, ಡಿಸೆಂಬರ್ 9 : ಬನ್ನೂರು ಮುಖ್ಯರಸ್ತೆಯಲ್ಲಿ ಆಪೇ ಆಟೋ ಮತ್ತು ದ್ವಿಚಕ್ರವಾಹನ ನಡುವೆ ಅಪಘಾತ ಸಂಭವಿಸಿ ದ್ವಿಚಕ್ರವಾಹನದಲ್ಲಿ ಸವಾರಿ ಮಾಡುತ್ತಿದ್ದ ತಂದೆ ಮಗ ಇಬ್ಬರೂ ದಾರುಣವಾಗಿ ಸಾವನ್ನಪ್ಪಿದ ಘಟನೆ ಶನಿವಾರ ನಡೆದಿದೆ.
ಮೃತರನ್ನು ಬನ್ನೂರಿನ ಬಾಣಸವಾಡಿಯ ನಿವಾಸಿಗಳಾದ ಮಹೇಂದ್ರ ಮತ್ತು ಆತನ ತಂದೆ ಸಿದ್ಧಶೆಟ್ಟಿ ಎಂದು ಹೇಳಲಾಗಿದೆ. ಮಹೇಂದ್ರ ಅವರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದು, ಸಿದ್ಧಶೆಟ್ಟಿ ಅವರನ್ನು ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಸಾವನ್ನಪ್ಪಿದ್ದಾರೆ.

ಬನ್ನೂರು ರಸ್ತೆಯಲ್ಲಿ ಬರುತ್ತಿರುವಾಗ ಆಪೇ ಆಟೋ ಡಿಕ್ಕಿ ಹೊಡೆದ ಪರಿಣಾಮ ಈ ದುರ್ಘಟನೆ ನಡೆದಿದೆ. ಬನ್ನೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.












Click it and Unblock the Notifications