ತ್ರಿಷಿಕಾ ನಕಲಿ ಇನ್ಸ್ಟಾಗ್ರಾಂ ಖಾತೆ ಹಿನ್ನೆಲೆ, ಸೈಬರ್ ಕ್ರೈಂಗೆ ದೂರು
ಮೈಸೂರು, ನವೆಂಬರ್ 21 : ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಪತ್ನಿ ತ್ರಿಷಿಕಾ ಒಡೆಯರ್ ಇನ್ಸ್ಟಾಗ್ರಾಂ ನಕಲಿ ಖಾತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು ಸೈಬರ್ ಪೊಲೀಸರಿಗೆ ದೂರು ನೀಡಿದ್ದಾರೆ.
ತ್ರಿಷಿಕಾ ಹೆಸರಿನಲ್ಲಿ ನಕಲಿ ಖಾತೆಯನ್ನು ತೆರೆದು ಬೇರೆ ಬೇರೆ ಜನಕ್ಕೆ ರಿಕ್ವೆಸ್ಟ್ ಕಳಿಸುವುದಲ್ಲದೇ ತ್ರಿಷಿಕಾ ಮತ್ತು ಅರಮನೆಗೆ ಸಂಬಂಧಪಟ್ಟ ಫೋಟೋಗಳನ್ನು ಅಪ್‌ಲೋಡ್ ಮಾಡಲಾಗುತ್ತಿದೆ ಎಂದು ದೂರು ನೀಡಲಾಗಿದೆ. ಸೋಮವಾರ ತಮ್ಮ ಪಿಎ ಮೂಲಕ ತ್ರಿಷಿಕಾ ಬೆಂಗಳೂರು ಸೈಬರ್ ಪೊಲೀಸರಿಗೆ ದೂರು ನೀಡಿದ್ದಾರೆ.

ನವೆಂಬರ್ 13 ರಂದು ನಕಲಿ ಖಾತೆಯ ಬಗ್ಗೆ ಮಾಹಿತಿ ಸಿಕ್ಕಿತ್ತು. ಈ ಬಗ್ಗೆ ಕುರಿತು ಯದುವೀರ್ ಸಾಮಾಜಿಕ ಜಾಲತಾಣಗಳಲ್ಲಿ ಎಚ್ಚರಿಕೆಯ ಪೋಸ್ಟ್ ವೊಂದನ್ನು ಸಹ ಅಪ್‌ಲೋಡ್ ಮಾಡಿದ್ದರು .












Click it and Unblock the Notifications