ಮೈಸೂರಿನ ಗಾಂಧಿ ಶಿಲ್ಪ ಬಜಾರ್ ಮೇಳದ ವಿಶೇಷತೆ ಗೊತ್ತಾ?
ಮೈಸೂರು, ಮಾರ್ಚ್ 14: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ವರ್ಷದ ಎಲ್ಲ ತಿಂಗಳುಗಳಲ್ಲಿ ಯಾವುದಾದರೂ ಮೇಳ ನಡೆಯುತ್ತದೆ ಎನ್ನುವುದಾದರೆ ಅದು ಮೇಟಗಳ್ಳಿಯ ಜೆಎಸ್ಎಸ್ ಮೈಸೂರು ಅರ್ಬನ್ ಹಾತ್‌ನಲ್ಲಿ ಮಾತ್ರ. ಇದೀಗ ಇಲ್ಲಿ ಮಾ.14ರಿಂದ 23ರವರಗೆ ಗಾಂಧಿ ಶಿಲ್ಪ ಬಜಾರ್ ಮೇಳ ನಡೆಯುತ್ತಿದ್ದು, ಇಲ್ಲಿ ಇದುವರೆಗೆ ಸುಮಾರು 145 ಮೇಳಗಳು ಯಶಸ್ವಿಯಾಗಿ ನಡೆದಿರುವುದು ಹೆಮ್ಮೆಯ ಸಂಗತಿಯಾಗಿದೆ. ಈ ಮೇಳದ ಇನ್ನೊಂದು ವಿಶೇಷ ಏನೆಂದರೆ ಇದು ಕರಕುಶಲ ಕರ್ಮಿಗಳು ಮತ್ತು ಗ್ರಾಹಕರ ನಡುವೆ ನೇರ ಸಂಬಂಧವನ್ನು ಏರ್ಪಡಿಸುತ್ತಿದೆ.
ಗಾಂಧಿ ಶಿಲ್ಪ ಬಜಾರ್ ಮೇಳದಲ್ಲಿ ಪ್ರಪ್ರಥಮ ಬಾರಿಗೆ ತ್ರಿಪುರಾ ರಾಜ್ಯದ ಕೈಮಗ್ಗ, ಕರಕುಶಲ ಮತ್ತು ಕೃಷಿ ನಿರ್ದೇಶನಾಲಯ ಪಾಲ್ಗೊಳ್ಳುತ್ತಿರುವುದು ವಿಶೇಷವಾಗಿದೆ. ಬೆಳಗ್ಗಿನಿಂದ ರಾತ್ರಿವರೆಗೆ ಇಲ್ಲಿಗೆ ಜನರು ಬರಬಹುದಾಗಿದ್ದು, ಸುಮಾರು ಹತ್ತು ದಿನಗಳ ಕಾಲ ನಡೆಯುವ ಮೇಳದಲ್ಲಿ ಎಲ್ಲೆಂದರಲ್ಲಿ ಅಡ್ಡಾಡಿ, ಕರಕುಶಲ ಕರ್ಮಿಗಳ ಕಲಾನೈಪುಣ್ಯವನ್ನು ಕಣ್ತುಂಬಿಕೊಳ್ಳುವ ಅವಕಾಶವನ್ನು ಕಲ್ಪಿಸಲಾಗಿದೆ. ಈ ಗಾಂಧಿ ಶಿಲ್ಪ ಬಜಾರ್ ಮೇಳವು ಭಾರತ ಸರ್ಕಾರದ ನವದೆಹಲಿಯಲ್ಲಿರುವ ಜವಳಿ ಸಚಿವಾಯದ ಅಭಿವೃದ್ಧಿ ಆಯುಕ್ತರು (ಕರಕುಶಲ) ಕಚೇರಿಯ ಪ್ರಾಯೋಜಕತ್ವದಲ್ಲಿ ನಡೆಯುತ್ತಿದೆ.

ಇದಕ್ಕೆ ತ್ರಿಪುರಾ ಸರ್ಕಾರದ ಕೈಮಗ್ಗ ಕರಕುಶಲ ಮತ್ತು ರೇಷ್ಮೆ ನಿರ್ದೇಶನಾಲಯ ಕೈಜೋಡಿಸಿದ್ದು, ಜೆಎಸ್ಎಸ್ ಮೈಸೂರು ಅರ್ಬನ್ ಹಾತ್ ನಲ್ಲಿ ಗಾಂಧಿ ಶಿಲ್ಪ ಬಜಾರ್ ಮೇಳವನ್ನು 120 ಮಳಿಗೆಗಳಲ್ಲಿ ಆಯೋಜನೆ ಮಾಡಿದ್ದಾರೆ. ಇಲ್ಲಿಗೆ ಆಗಮಿಸುವವರಿಗೆ ಹತ್ತಾರು ಅನುಕೂಲಗಳಿದ್ದು, ತಾವು ಇಷ್ಟಪಡುವ ಜವಳಿಯಿಂದ ಆರಂಭವಾಗಿ ಕರಕುಶಲ ವಸ್ತುಗಳವರೆಗೆ ಎಲ್ಲವೂ ದೊರೆಯಲಿದೆ. ಹೀಗಾಗಿ ನಗರಕ್ಕೆ ಭೇಟಿ ನೀಡುವ ಜನರು ಅರ್ಬನ್ ಹಾತ್ ಗೆ ತೆರಳಿ ಮೇಳದಲ್ಲಿ ಅಡ್ಡಾಡುತ್ತಾರೆ.
ಗಾಂಧಿ ಶಿಲ್ಪ ಬಜಾರ್ ಮೇಳದಲ್ಲಿ ಏನೇನಿದೆ?
ಗಾಂಧಿ ಶಿಲ್ಪ ಬಜಾರ್ ಮೇಳಕ್ಕೊಂದು ಸುತ್ತು ಹೊಡೆದರೆ ನಮ್ಮ ದೇಶದ 22 ಕ್ಕೂ ಹೆಚ್ಚು ರಾಜ್ಯಗಳ ರಾಷ್ಟ್ರ ಮತ್ತು ರಾಜ್ಯ ಪ್ರಶಸ್ತಿ ಪುರಸ್ಕೃತ ಕರಕುಶಲಕರ್ಮಿಗಳು ಹಾಗೂ ಕೈಮಗ್ಗ ನೇಕಾರರು ಕರಕುಶಲ ಮತ್ತು ಕೈಮಗ್ಗ ಉತ್ಪನ್ನಗಳು ಒಂದೇ ಸೂರಿ ನಡಿಯಲ್ಲಿ ಮೈಸೂರಿನ ಸಂಸ್ಕೃತಿ ಪ್ರಿಯರಿಗೆ ಲಭ್ಯವಾಗುವಂತೆ ಈ ಮೇಳದಲ್ಲಿ ವ್ಯವಸ್ಥೆ ಮಾಡಿರುವುದು ಕಂಡು ಬರುತ್ತದೆ. ಇಲ್ಲಿರುವ ನೂರಿಪ್ಪತ್ತಕ್ಕೂ ಹೆಚ್ಚು ಮಳಿಗೆಗಳು ವಿಶೇಷತೆಗಳಿಂದ ಕೂಡಿದ್ದು ಇಲ್ಲಿ ಆಕರ್ಷಣೀಯ ವಸ್ತುಗಳು ಗಮನಸೆಳೆಯುತ್ತವೆ.
ಈ ಮೇಳದ ವಿಶೇಷತೆ ಏನೆಂದರೆ ಕುಶಲಕರ್ಮಿಗಳು ತಮ್ಮ ಕಲಕುಶಲತೆಯನ್ನು ಗ್ರಾಹಕರ ಅಗತ್ಯ ಮತ್ತು ಅಭಿರುಚಿಗೆ ತಕ್ಕಂತೆ ತಯಾರು ಮಾಡಿದ್ದು ಮಾರುಕಟ್ಟೆಯಲ್ಲಿ ಜನ ಇಷ್ಟಪಡುವಂತಹ ನವೀನ ವಿನ್ಯಾಸದ ವಸ್ತುಗಳನ್ನು ತಯಾರಿಸಿಟ್ಟಿದ್ದಾರೆ. ಇಲ್ಲಿ ಏನೆಲ್ಲ ಇದೆ ಎಂಬುದನ್ನು ನೋಡಿದ್ದೇ ಆದರೆ, ಮರದ ಕೆತ್ತನೆ, ಶಿಲಾ ಶಿಲ್ಪ, ಕಂಚಿನ ವಿಗ್ರಹಗಳು, ಮರದ ಕುಂದಣ ಕಲೆ, ಮಣ್ಣಿನ ಮಡಿಕೆಗಳು, ಪೇಪರ್, ರತ್ನಗಂಬಳಿ, ಹತ್ತಿ ಜಮಕಾನ, ಇಮಿಟೇಶನ್ ಆಭರಣಗಳು, ಮರದ ಅರಗಿನ ಕಲಾವಸ್ತುಗಳು, ಬಾಟಿಕ್, ಕಲಾಂಕಾರಿ ಚಿತ್ರಕಲೆ, ಚರ್ಮದ ಅಕರ್ಷಕ ವಸ್ತುಗಳು,ಕಲಾತ್ಮಕ ಚರ್ಮದ ಚಪ್ಪಲಿಗಳು ಆಕರ್ಷಿಸುತ್ತವೆ.

ಗ್ರಾಹಕ ಕುಶಲಕರ್ಮಿಗಳ ಬಾಂಧವ್ಯ ವೃದ್ಧಿಯ ಮೇಳ
ಇದಿಷ್ಟೇ ಅಲ್ಲದೆ, ಚನ್ನಪಟ್ಟಣದ ಗೊಂಬೆಗಳು, ಕಸೂತಿ ಕಲೆ, ಮಧ್ಯಪ್ರದೇಶ ರಾಜ್ಯದ ಮಹೇಶ್ವರಿ, ಚಂದೇರಿ ಸೀರೆಗಳು, ಒಡಿಶಾ ರಾಜ್ಯದ ಪಟ್ಟ ಚಿತ್ರ, ಬೆಳ್ಳಿಯ ಸೂಕ್ಷ್ಮ ವಿನ್ಯಾಸ ವಸ್ತುಗಳು, ಬಿದಿರು- ಬೆತ್ತದ ವಸ್ತುಗಳು, ಚಿಕನ್ ಎಂಬ್ರಾಯ್ಡರಿ, ಡ್ರೈ ಪ್ಲವರ್‌ಗಳು, ಕಲಾತ್ಮಕ ಕಲ್ಲಿನ ವಸ್ತುಗಳು, ಪಂಜಾಬ್ ರಾಜ್ಯದ ಫುಲ್ಕಾರಿ ಬಟ್ಟೆಗಳು ಈ ಮೇಳ ದಲ್ಲಿ ಕಾಣಸಿಗುತ್ತಿದ್ದು, ಎಲ್ಲವೂ ಒಂದೇ ಸೂರಿನಡಿ ಸಿಗುವುದರಿಂದ ಪ್ರತಿ ಸಲ ಮೇಳ ಆರಂಭವಾದಾಗ ಜನರು ಇತ್ತ ಬರುತ್ತಾರೆ. ಇನ್ನು ಇಲ್ಲಿ ಕಲಾ ಕುಶಲತೆಯ ವಸ್ತುಗಳನ್ನು ನೋಡಿ ಕಣ್ತುಂಬಿಸಿಕೊಳ್ಳುವುದು ಒಂಥರಾ ಮಜಾ.
ಪ್ರತಿ ತಿಂಗಳು ಒಂದಲ್ಲ ಒಂದು ಉದ್ದೇಶವನ್ನಿಟ್ಟುಕೊಂಡು ಇಲ್ಲಿ ಮೇಳವನ್ನು ಆಯೋಜನೆ ಮಾಡಲಾಗುತ್ತಿದ್ದು, ಏಕೆ ಈ ಮೇಳ ಯಶಸ್ಸು ಕಾಣುತ್ತಿದೆ ಎಂದರೆ, ಮಧ್ಯವರ್ತಿಗಳು ಇಲ್ಲದೆ ಗ್ರಾಹಕರು ಮತ್ತು ಉತ್ಪಾದಕರ ಮಧ್ಯೆ ನೇರ ಸಂಪರ್ಕ ಮತ್ತು ಸಂವಹನಕ್ಕೆ ಅವಕಾಶ ಕಲ್ಪಿಸುವುದರಿಂದ ಎನ್ನುವುದರಲ್ಲಿ ಎರಡು ಮಾತಿಲ್ಲ. ಹೀಗಾಗಿ ಗ್ರಾಹಕ ಮತ್ತು ಕುಶಲಕರ್ಮಿಗಳ ಬಾಂಧವ್ಯ ವೃದ್ಧಿಯ ಮೇಳ ಎಂದರೂ ತಪ್ಪಾಗಲಾರದು. ಈ ಗಾಂಧಿ ಶಿಲ್ಪ ಬಜಾರ್ ಮೇಳದಲ್ಲಿ ಭಾಗವಹಿಸುತ್ತಿರುವ ಕುಶಲಕರ್ಮಿಗಳಿಗೆ ಉಚಿತವಾಗಿ ಮಳಿಗೆಗಳನ್ನು ನೀಡುತ್ತಿರುವುದು, ಜತೆಗೆ ಪ್ರಯಾಣ ಭತ್ಯೆ, ದಿನಭತ್ಯೆನ್ನೂ ಕರಕುಶಲ ಅಭಿವೃದ್ಧಿ ಅಯುಕ್ತರ ಕಚೇರಿಯಿಂದ ನೀಡುತ್ತಿರುವುದು ಕರಕುಶಲ ಕರ್ಮಿಗಳ ಅಭಿವೃದ್ಧಿಗೆ ಹಿಡಿದ ಕೈಕನ್ನಡಿಯಾಗಿದೆ.
-
Gold Rate April 9: ಚಿನ್ನ - ಬೆಳ್ಳಿ ಬೆಲೆಯಲ್ಲಿ ಭರ್ಜರಿ ಇಳಿಕೆ: ಬಂಗಾರ ಖರೀದಿದಾರರಿಗೆ ಸಂತೋಷದ ಸುದ್ದಿ -
ರಾಜ್ಯದ ಕಳೆದ 3 ವರ್ಷಗಳ ದ್ವಿತೀಯ PUC ಫಲಿತಾಂಶದ ಹೈಲೈಟ್ಸ್; ಮೇಲುಗೈ ಸಾಧಿಸಿದ ಜಿಲ್ಲೆಗಳು ಯಾವುವು? ಇಲ್ಲಿದೆ ಮಾಹಿತಿ -
Dhurandhar-2 OTT: ನೆಟ್ಫ್ಲಿಕ್ಸ್ ಅಲ್ಲ, ಈ ಒಟಿಟಿಯಲ್ಲಿ 'ಧರಂಧರ-2' ಅಬ್ಬರ, ಯಾವಾಗ? -
Karnataka Weather: ಕರ್ನಾಟಕದ 4 ಜಿಲ್ಲೆಗಳಲ್ಲಿ ಮಳೆ - ವಿವಿಧ ಭಾಗಗಳಲ್ಲಿ ಭಾರೀ ಬಿಸಿಲು, ಕರ್ನಾಟಕದ ಹವಾಮಾನ ವರದಿ -
Ragi Price Today: ಕರ್ನಾಟಕದ ಮಾರುಕಟ್ಟೆಗಳಲ್ಲಿ ಇಂದಿನ "ರಾಗಿ' ಬೆಲೆ ಎಷ್ಟಿದೆ? ಲೇಟೆಸ್ಟ್ ಅಪ್ಡೇಟ್ -
April 9 Horoscope: 12 ರಾಶಿಗಳಿಗೆ ಇಂದು ಸಂತೋಷ, ಸವಾಲು ಮತ್ತು ಅವಕಾಶಗಳ ಮಿಶ್ರ ಫಲ -
Viral: ಬೆಂಗಳೂರಿಗೆ ಕಾಲಿಟ್ಟಿತೇ ಡೇಂಜರಸ್ 'ಜಾಂಬಿ ಡ್ರಗ್'?: ಯುವಕನ ವಿಡಿಯೋ ನೋಡಿ ಬೆಚ್ಚಿಬಿದ್ದ ಸಿಲಿಕಾನ್ ಸಿಟಿ ಜನ -
April 10 Horoscope: 12 ರಾಶಿಗಳಿಗೆ ಇಂದು ಆರೋಗ್ಯ, ಹಣಕಾಸು ಮತ್ತು ಪ್ರೇಮದಲ್ಲಿ ಮಿಶ್ರ ಫಲ -
ಬೆಂಗಳೂರು ನಾಯಂಡಳ್ಳಿಯಲ್ಲಿ ಮನೆಯ ಮೊದಲ ಮಹಡಿಯಿಂದ ಬಿದ್ದ ಒಂದೂವರೆ ವರ್ಷದ ಕಂದಮ್ಮ -
SSLC Hindi: ಅಂಕ ಬದಲು ಗ್ರೇಡಿಂಗ್ ವಿರೋಧಿಸಿ ಅರ್ಜಿ ಸಲ್ಲಿಸಿದ ಅರ್ಜಿದಾರರಿಗೆ 1 ಲಕ್ಷ ರೂ. ದಂಡ: ಕರವೇ ಹೇಳಿದ್ದೇನು -
PUC Results: 2026ರ ದ್ವಿತೀಯ PUC ಪರೀಕ್ಷೆ ಫಲಿತಾಂಶ ಪ್ರಕಟ, ಇವರೇ ನೋಡಿ ಟಾಪರ್ -
Arecanut Price: ದಾವಣಗೆರೆ ಮಾರುಕಟ್ಟೆಯಲ್ಲಿ ರಾಶಿ ಅಡಿಕೆ ಧಾರಣೆ ಏರಿಕೆ: ಇಲ್ಲಿದೆ ಏಪ್ರಿಲ್ 9ರ ದರಪಟ್ಟಿ












Click it and Unblock the Notifications