ನಾಡ ದೇವತೆ ದರ್ಶನಕ್ಕೆ ಬರುವವರಿಗೆ ಡ್ರೆಸ್ ಕೋಡ್ : ಸಂಸದ ಪ್ರತಾಪ್ ಸಿಂಹ ಬೆಂಬಲ
ಮೈಸೂರು, ಡಿ. 27: ರಾಜ್ಯದ ದೇವಸ್ಥಾಗಳಲ್ಲಿ ವಸ್ತ್ರ ಸಂಹಿತೆ ಜಾರಿಗೆ ತರುವ ಬಗ್ಗೆ ಈಗ ಚರ್ಚೆಗಳು ಆರಭವಾಗಿವೆ. ದದೇವಸ್ಥಾನಕ್ಕೆ ಬರುವ ಭಕ್ತಾದಿಗಳಿಗೆ ಡ್ರೆಸ್ ಕೋಡ್ ತರಬೇಕು ಎಂದು ಹಿಂದೂ ಪರ ಸಂಘಟನೆಗಳು ಈ ಹಿಂದೆ ಮುರುಡೇಶ್ವರ ದೇವಸ್ಥಾನ, ಗೋಕರ್ಣ ಮಹಾಬಲೇಶ್ವರ ದೇವಸ್ಥಾನಗಳಲ್ಲಿ ಮನವಿ ಮಾಡಲಾಗಿತ್ತು. ಈಗ ಇದೇ ರೀತಿ ಮೈಸೂರಿನ ಚಾಮುಂಡೇಶ್ವರಿ ದರ್ಶನಕ್ಕೂ ಅನ್ವಯಿಸುವಂತೆ ಒತ್ತಡ ಹೇರಲಾಗುತ್ತಿದೆ.
ವಿಶ್ವ ವಿಖ್ಯಾತ ಚಾಮುಂಡಿ ಬೆಟ್ಟದಲ್ಲಿ ನಾಡ ದೇವತೆ ಚಾಮುಂಡೇಶ್ವರಿ ದೇವಿಯ ದರ್ಶನಕ್ಕೆ ಬರುವ ಭಕ್ತಾದಿಗಳಿಗೂ ವಸ್ತ್ರ ಸಂಹಿತೆ ಜಾರಿ ಮಾಡಬೇಕು ಎಂದು ಅಭಿಯಾನ ಆರಂಭವಾಗಿದ್ದು, ಇದಕ್ಕೆ ಸಂಸದ ಪ್ರತಾಪ್ ಸಿಂಹ ಬೆಂಬಲ ವ್ಯಕ್ತಪಡಿಸಿದ್ದಾರೆ.
ಚಾಮುಂಡೇಶ್ವರಿ ದೇವಸ್ಥಾನಕ್ಕೆ ಬರುವ ಭಕ್ತಾದಿಗಳು ಸಾಂಪ್ರದಾಯಿಕ ಉಡುಗೆಯಲ್ಲಿ ಬರುವಂತೆ ಕೆಲವು ಹಿಂದೂ ಪರ ಸಂಘಟನೆಗಳು ,ಸಾರ್ವಜನಿಕರು ಅಭಿಯಾನ ಪ್ರಾರಂಭಿಸಿದ್ದಾರೆ.

ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿರುವ ಮೈಸೂರು ಕೊಡಗು ಸಂಸದ ಪ್ರತಾಪ್ ಸಿಂಹ, "ಚಾಮುಂಡಿ ಬೆಟ್ಟಕ್ಕೆ ಬರುವ ಭಕ್ತರಿಗೆ ಡ್ರೆಸ್ ಕೊಡ್ ಮಾಡಬೇಕು. ಇದು ಬಹಳ ಹಿಂದಿನಿಂದಲೂ ಸಾರ್ವಜನಿಕರ ಬೇಡಿಕೆಯಾಗಿದೆ. ಎಷ್ಟೋ ಸಲಿ ನಾವು ಚಾಮುಂಡಿ ಬೆಟ್ಟಕ್ಕೆ ಹೋದಾಗ ಅಲ್ಲಿ ಬೇರೆ ಬೇರೆ ವಸ್ತ್ರ ತೊಟ್ಟು ಬರುವವರನ್ನು ನೋಡುತ್ತೇವೆ. ಆದರೆ, ಕೇರಳದಲ್ಲಿ ಯಾವುದೇ ದೇವಸ್ಥಾನಕ್ಕೆ ಹೋದರೂ ಕೂಡ ಅಲ್ಲಿ ಮಹಿಳೆಯರು ಕಡ್ಡಾಯವಾಗಿ ಸೀರೆ, ಸಲ್ವಾರ್ ತೊಟ್ಟಿರಬೇಕು. ಪುರುಷರು ಪಂಚೆ ಮತ್ತು ಶಲ್ಯ ಹಾಕಿರಬೇಕು ಅಂತ ಕಡ್ಡಾಯವಿದೆ" ಎಂದಿದ್ದಾರೆ.
ಚಾಮುಂಡಿ ಬೆಟ್ಟದಲ್ಲಿ ದೇವಿ ದರ್ಶನಕ್ಕೆ ಡ್ರೆಸ್ ಕೋಡ್..? ಸಂಸದ ಪ್ರತಾಪ್ ಸಿಂಹ ಹೇಳಿದ್ದೇನು..? pic.twitter.com/Nxsd4d5ZDL
— Pratap Simha (@mepratap) December 27, 2022
"ನಾವು ದೇವಸ್ಥಾನಕ್ಕೆ ಹೋಗುವಾಗ ಶ್ರದ್ಧೆ ಭಕ್ತಿಯಿಂದ ಹೋಗಬೇಕಾಗುತ್ತದೆ, ಹೀಗಾಗಿ ಚಾಮುಂಡಿ ಬೆಟ್ಟದಲ್ಲಿ ವಸ್ತ್ರ ಸಂಹಿತೆ ತರಬೇಕು ಎಂದು ಅಭಿಯಾನ ಮಾಡುತ್ತಿರುವುದು ಒಳ್ಳೆಯ ಬೆಲವಣಿಗೆ. ಇದಕ್ಕೆ ನನ್ನ ಬೆಂಬಲ ಕೂಡ ಇದೆ. ನಾನು ಭಕ್ತರಲ್ಲಿ ಮನವಿ ಮಾಡೋದು ಏನಂದರೆ, ಯಾವುದೇ ಕಾನೂನು ತಂದು, ಕಟ್ಟು ಪಾಡು ಅನುಷ್ಠಾನಕ್ಕೆ ತರುವುದಕ್ಕಿಂತ ತಾವೇ ಬೆಟ್ಟಕ್ಕೆ ಬರುವಾಗ ದೇವಸ್ಥಾನಕ್ಕೆ ಹೋಗುವಾಗ ಯಾವ ವಸ್ತ್ರ ಸೂಕ್ತ ಎನ್ನಿಸುತ್ತದೋ ಅದನ್ನು ಯೋಚಿಸಿ ಹಾಕಿಕೊಂಡು ಬನ್ನಿ. ಆಗ ಈ ಸಮಸ್ಯೆಯೇ ಇರುವುದಿಲ್ಲ" ಎಂದಿದ್ದಾರೆ.
ಈ ಹಿಂದೆ ಗೋಕರ್ಣ ಮಹಾಬಲೇಶ್ವರ ದೇವಸ್ಥಾನದಲ್ಲಿ ಪುರುಷ ಭಕ್ತರು ಮತ್ತು ಪ್ರವಾಸಿಗರು ಧೋತಿಯನ್ನು ಧರಿಸಬೇಕು. ಮಹಿಳೆಯರು ಸೀರೆ ಅಥವಾ ಚೂಡಿದಾರ್ ಅನ್ನು ಧರಿಸಬೇಕು ಎಂದು ಹೇಳಲಾಗಿದೆ. ಇದರ ಬೆನ್ನಲ್ಲೇ ಮುರುಡೇಶ್ವರದಲ್ಲಿಯೂ ಭಕ್ತಾದಿಗಳಿಗೆ ಡ್ರೆಸ್ ಕೋಡ್ ಹಾಕುವಂತೆ ಹಿಂದೂ ಸಂಘಟನೆಗಳು ಮುರುಡೇಶ್ವರ ದೇವಸ್ಥಾನದ ಅಧಿಕಾರಿಗಳಿಗೆ ಮನವಿ ಮಾಡಿವೆ.
ಹಿಂದೂ ಜನ ಜಾಗೃತಿ ಸಮಿತಿ (ಎಚ್‌ಜೆಜೆಎಸ್) ಆಶ್ರಯದಲ್ಲಿ ವಿವಿಧ ಹಿಂದೂ ಸಂಘಟನೆಗಳು ಗೋಕರ್ಣ ದೇವಸ್ಥಾನದಂತೆಯೇ ಡ್ರೆಸ್ ಕೋಡ್ ಕೋರಿ ಮುರುಡೇಶ್ವರ ಅಧಿಕಾರಿಗಳನ್ನು ಸಂಪರ್ಕಿಸಿದ್ದವು. ಈಗ ಮೈಸೂರಿನ ಚಾಮುಮಡಿ ಬೆಟ್ಟದಲ್ಲೂ ವಸ್ತ್ರ ಸಂಹಿತೆ ಜಾರಿ ಮಾಡಲು ಒತ್ತಾಯ ಕೇಳಿಬರುತ್ತಿದೆ.












Click it and Unblock the Notifications