ಸಿದ್ದರಾಮಯ್ಯ ಜನ್ಮ ಜಾಲಾಡಿ, ಪರಂ ಮೇಲೆ ಗೂಬೆ ಕೂರಿಸಿದ ಈಶ್ವರಪ್ಪ
Recommended Video

ಮೈಸೂರು, ಆಗಸ್ಟ್ 11 : ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಸೋಲಿಗೆ ಡಾ.ಜಿ.ಪರಮೇಶ್ವರ್ ಕಾರಣ ಎಂದು ಬಿಜೆಪಿಯ ಹಿರಿಯ ಮುಖಂಡ- ಶಿವಮೊಗ್ಗ ನಗರ ಶಾಸಕ ಕೆ.ಎಸ್ ಈಶ್ವರಪ್ಪ ಹೊಸ ಬಾಂಬ್ ಸಿಡಿಸಿದ್ದಾರೆ.
ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಕಳೆದ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ತುಮಕೂರು ಜಿಲ್ಲೆಯ ಕೊರಟಗೆರೆಯಲ್ಲಿ ಡಾ.ಜಿ.ಪರಮೇಶ್ವರ್ ರನ್ನು ಸಿದ್ದರಾಮಯ್ಯ ಸೋಲುವಂತೆ ಮಾಡಿದ್ದರು. ಹೀಗಾಗಿ ಈ ಸಲ ಆ ಸಿಟ್ಟಿಗಾಗಿ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಅವರನ್ನು ಪರಮೇಶ್ವರ್ ಸೋಲುವಂತೆ ಮಾಡಿದ್ದಾರೆ.
ಮುಖ್ಯಮಂತ್ರಿ ಆಗಿದ್ದೂ ಅವರು ಸೋತರು. ಇಷ್ಟಾದರೂ ಅವರಿಗೆ ಬುದ್ಧಿ ಬಂದಿಲ್ಲ ಎಂದು ಸಿದ್ದರಾಮಯ್ಯ ಬಗ್ಗೆ ಲೇವಡಿ ಮಾಡಿದರು. ಚುನಾವಣೆ ಆಯೋಗ ನೀತಿ ಸಂಹಿತೆ ಜಾರಿ ಮಾಡಿದ್ದರೂ ಮೈತ್ರಿ ಸರಕಾರದ ವರ್ಗಾವಣೆ ದಂಧೆ ನಿಂತಿಲ್ಲ. ರಾಜ್ಯದ ಮುಖ್ಯಮಂತ್ರಿ ಹಾಗೂ ಸಮನ್ವಯ ಸಮಿತಿ ಅಧ್ಯಕ್ಷರಿಗೆ ಸಂವಿಧಾನದ ಬಗ್ಗೆ ಗೊತ್ತಿಲ್ಲವಾ ಎಂದು ಪ್ರಶ್ನಿಸಿದರು.

ಚುನಾವಣಾ ಆಯೋಗ ಇದರ ಬಗ್ಗೆ ಕ್ರಮ ಜರುಗಿಸಬೇಕು. ನಾನು ಚುನಾವಣಾ ಆಯೋಗಕ್ಕೆ ಮನವಿ ಮಾಡುತ್ತೇನೆ ಎಂದರು.
ನರೇಂದ್ರ ಮೋದಿಯನ್ನು ಇಡೀ ದೇಶವೇ ಒಪ್ಪಿದೆ. ಸಿದ್ದರಾಮಯ್ಯ, ಪಾಕಿಸ್ತಾನ ಇಬ್ಬರು ಒಪ್ಪಲ್ಲ ಅಂತ ಹೇಳಿದ್ದೆ. ಸಿದ್ದರಾಮಯ್ಯ ನೀವೇನ್ ಇಂಟರ್ ನ್ಯಾಷನಲ್ ಲೀಡರ್ ರಾ? ಹಿಂದುಳಿದ ವರ್ಗದ ಚಾಂಪಿಯನ್ ಸಿದ್ದರಾಮಯ್ಯ ಅಲ್ಲ, ನರೇಂದ್ರ ಮೋದಿ. ಹಿಂದುಳಿದ ವರ್ಗಕ್ಕೆ ಸಿದ್ದರಾಮಯ್ಯ ಕೊಡುಗೆ ಏನು ಎಂದು ಈಶ್ವರಪ್ಪ ಪ್ರಶ್ನೆ ಮಾಡಿದರು.












Click it and Unblock the Notifications