ಮಾನವ ಆನೆ ಸಂಘರ್ಷ: ನಾಗರಹೊಳೆಯಲ್ಲಿ ದಿಢೀರ್ ಆನೆ ಗಣತಿ ಯಾಕೆ ಗೊತ್ತಾ?
ಮೈಸೂರು, ಮೇ 22: ಕಾಡಾನೆಗಳು ಆಗಾಗ್ಗೆ ನಾಡಿಗೆ ನುಗ್ಗಿ ಉಪಟಳ ನೀಡುವುದು ನಡೆಯುತ್ತಲೇ ಇದ್ದು, ಅರಣ್ಯ ಇಲಾಖೆ ಕಂದಕ, ಸೋಲಾರ್ ಬೇಲಿ, ರೈಲ್ವೆ ಕಂಬಿ ಅಳವಡಿಕೆ ಹೀಗೆ ಹತ್ತಾರು ರೀತಿಯ ಕ್ರಮಗಳನ್ನು ಕೈಗೊಂಡರೂ ಯಾವುದೇ ರೀತಿಯ ಪ್ರಯೋಜನಗಳಾಗುತ್ತಿಲ್ಲ. ಮೇಲಿಂದ ಮೇಲೆ ಒಂದಲ್ಲ ಒಂದು ಕಡೆಗಳಲ್ಲಿ ಕಾಡಾನೆಗಳ ದಾಳಿಗೆ ಸಿಲುಕಿ ಸಾವನ್ನಪ್ಪುವವರ ಸಂಖ್ಯೆ ಮಾತರ ಕಡಿಮೆಯಾಗಿಲ್ಲ. ಇದನ್ನು ತಡೆಯುವುದು ಕೂಡ ಸುಲಭವಾಗಿ ಉಳಿದಿಲ್ಲ.
ರಾಜ್ಯದಲ್ಲಿ ಅದರಲ್ಲೂ ಕರ್ನಾಟಕ, ಕೇರಳ ಮತ್ತು ತಮಿಳುನಾಡು ರಾಜ್ಯಗಳ ಗಡಿ ಪ್ರದೇಶಗಳಲ್ಲಿ ಮಾನವ ಆನೆ ಸಂಘರ್ಷ ಪ್ರಕರಣಗಳ ಹೆಚ್ಚಿನ ವರದಿಯಾಗುತ್ತಿದೆ. ಈ ಭಾಗದ ಜನರು ಆಕ್ರೋಶಗೊಂಡಿದ್ದಾರೆ. ಅರಣ್ಯ ಇಲಾಖೆ ವಿರುದ್ಧ ಆಕ್ರೋಶಗಳನ್ನು ಹೊರಹಾಕುತ್ತಲೇ ಬಂದಿದ್ದಾರೆ. ಇದಕ್ಕೆ ಏನಾದರೊಂದು ಪರಿಹಾರ ಕ್ರಮಗಳನ್ನು ಕಂಡು ಹಿಡಿಯಲು ಮೂರು ರಾಜ್ಯಗಳು ತಿಣುಕಾಡುತ್ತಾ ಬರುತ್ತಿವೆ.

ಸದ್ಯ ಮಾನವ ಮತ್ತು ಕಾಡಾನೆ ಸಂಘರ್ಷ ತಡೆಗೆ ಮೂರು ರಾಜ್ಯಗಳ ಪ್ರತಿನಿಧಿಗಳನ್ನು ಒಳಗೊಂಡಂತೆ ಅಂತರ್ರಾಜ್ಯ ಸಮನ್ವಯ ಸಮಿತಿ ರಚಿಸಿದ್ದು, ಮಾನವ ಆನೆ ಸಂಘರ್ಷ ತಡೆಗಟ್ಟಲು ಮತ್ತು ಸಂಘರ್ಷ ನಿರ್ವಹಣಾ ತಂತ್ರಗಳನ್ನು ವಿನ್ಯಾಸಗೊಳಿಸಲು ಅಂತರರಾಜ್ಯ ಗಡಿಗಳಲ್ಲಿ ನಿಯಮಿತವಾಗಿ ಏಕಕಾಲದಲ್ಲಿ ಆನೆ ಗಣತಿ ಕಾರ್ಯ (Synchronised Elephant Poplulation Estimation Exercise) ವನ್ನು ನಡೆಸಲು ತೀರ್ಮಾನಿಸಲಾಗಿದ್ದು, ಇದೀಗ ಗಣತಿಯು ಮೇ 23, 24 ಮತ್ತು 25 ರಂದು ನಡೆಯುತ್ತಿದೆ.
ಹೇಗಿರಲಿದೆ ಕಾಡಾನೆಗಳ ಗಣತಿ
ಈ ಆನೆ ಗಣತಿ ಕಾರ್ಯ ಹೇಗಿದೆ ಎಂದರೆ ಇದನ್ನು ಮೂರು ಹಂತದಲ್ಲಿ ಮಾಡಲಾಗುತ್ತಿದ್ದು, ಮೇ 23 ರಂದು ನಾಗರಹೊಳೆಯ ಬ್ಲಾಕ್ ಸಾಂಪ್ಲಿಂಗ್, ಮೇ 24 ರಂದು ಲೈನ್ ಟ್ರಾನ್ಸೆಕ್ಟ್ ಮತ್ತು ಮೇ 25 ರಂದು ವಾಟರ್ ಹೋಲ್ ಕೌಂಟ್ ಮಾಡಲಾಗುತ್ತದೆ. ಅದರಂತೆ ಮೊದಲ ದಿನ (ಮೇ23ರಂದು) ಬ್ಲಾಕ್ ಸಾಂಪ್ಲಿಂಗ್ ನಡೆಯಲಿದ್ದು, ಇದರ ಪ್ರಕಾರ 5 ಚ.ಕಿ.ಮೀ ಅಳತೆಯ ಮಾದರಿ ಬ್ಲಾಕ್ ಗಳನ್ನು ರಚಿಸಿ, ಮೂರು ಜನ ಸಿಬ್ಬಂದಿಗಳಿರುವ ತಂಡವು ಗಸ್ತಿನಲ್ಲಿ ಕನಿಷ್ಠ 15 ಕಿ.ಮೀ ಕಾಲ್ನಡಿಗೆಯಲ್ಲಿ ನಡೆದು ನೇರ ವೀಕ್ಷಣೆಯಾಗುವ ಆನೆಗಳ ಮಾಹಿತಿ (ಗುಂಪಿನಲ್ಲಿರುವ ಒಟ್ಟು ಆನೆಗಳ ಸಂಖ್ಯೆ, ಗಂಡಾನೆಗಳ ಸಂಖ್ಯೆ , ಹೆಣ್ಣಾನೆಗಳ ಸಂಖ್ಯೆ, ಮಕನಾ ಆನೆಗಳ ಸಂಖ್ಯೆ, ಮತ್ತು ವಯಸ್ಸಿನ ಮಾಹಿತಿ, ವಯಸ್ಕ, ಉಪವಯಸ್ಕ, ತಾರುಣ್ಯ ,ಮರಿ ಹಾಗೂ ಇತರೆ) ಯನ್ನು ದಾಖಲಿಸಲಾಗುತ್ತದೆ.
ಮೇ24ರಂದು ಲೈನ್ ಟ್ರಾನ್ಸೆಕ್ಟ್ ನಡೆಯಲಿದ್ದು, ಇದರ ಪ್ರಕಾರ 2 ಕಿ.ಮೀ ಟ್ರಾನ್ಸೆಕ್ಟ್ ನ್ನು ಮುಂಜಾನೆ 6ಗಂಟೆಗೆ ಆರಂಭ ಮಾಡಲಾಗುತ್ತದೆ. ಟ್ರಾನ್ಸೆಕ್ಟ್ ನಡಿಗೆಯಲ್ಲಿ ಎರಡು ಬದಿಯಲ್ಲಿ ಕಾಣಸಿಗುವ ಆನೆಗಳ ಲದ್ದಿಗಳು, ಹೆಜ್ಜೆಗಳ ಗುರುತುಗಳ ಮಾಹಿತಿಯನ್ನು ದಾಖಲಿಸಲಾಗುತ್ತದೆ. ಮೇ 25ರಂದು ಕೆರೆಗಳ ಬಳಿ ಗಣತಿ ನಡೆಯಲಿದ್ದು, ಈ ಸಂದರ್ಭ ಸಂರಕ್ಷಿತ ಪ್ರದೇಶದ ಗಸ್ತುಗಳಲ್ಲಿ ಆಯ್ದ ಕೆರೆಗಳ ಬಳಿ ಸಿಬ್ಬಂದಿಗಳು ಮುಂಜಾನೆ 6 ರಿಂದ ಸಂಜೆ 6 ರ ವರೆಗೆ ಕಾದು ಕುಳಿತು, ಕೆರೆಗಳಿಗೆ ಬರುವ ಆನೆಗಳ ಛಾಯಾಚಿತ್ರದೊಂದಿಗೆ ಮಾಹಿತಿಯನ್ನು ದಾಖಲಿಸುತ್ತಾರೆ. ಹೀಗೆ ಮೂರು ದಿನಗಳಲ್ಲಿ ಬೇರೆ ಬೇರೆ ರೀತಿಯಲ್ಲಿ ಕಾಡಾನೆಗಳ ಗಣತಿ ನಡೆಯಲಿದೆ.

300ಕ್ಕೂ ಹೆಚ್ಚು ಸಿಬ್ಬಂದಿ ಭಾಗಿ
ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶವು ಮೈಸೂರು ಮತ್ತು ಕೊಡಗು ಜಿಲ್ಲೆಗಳಲ್ಲಿ ಹಬ್ಬಿದ್ದು ರಾಜ್ಯದಲ್ಲಿ ಹೆಚ್ಚು ಆನೆಗಳನ್ನು ಹೊಂದಿರುವ ಪ್ರದೇಶವಾಗಿರುತ್ತದೆ ಹಾಗೂ ವಿಶಾಲವಾದ ಕಾರಿಡಾರ್ ಪ್ರದೇಶವನ್ನು ಹೊಂದಿರುತ್ತದೆ. ಈಗಾಗಲೇ ಆಧುನಿಕ ತಂತ್ರಜ್ಞಾನವಾದ ಕ್ಯಾಮೆರಾ ಟ್ರ್ಯಾಪಿಂಗ್ ಮೂಲಕ 15 ದಿನಗಳ ಕ್ಯಾಮೆರಾ ಟ್ರ್ಯಾಪಿಂಗ್ ಗಣತಿ ಮಾಡಿ ಮಾಹಿತಿ ಸಂಗ್ರಹಿಸಲಾಗಿದೆ.
ನಾಗರಹೊಳೆ ಹುಲಿ ಸಂರಕ್ಷಿತ ವ್ಯಾಪ್ತಿಯ 91 ಗಸ್ತುಗಳಲ್ಲಿ 300ಕ್ಕೂ ಹೆಚ್ಚು ಸಿಬ್ಬಂದಿ ಆನೆಗಣತಿಯಲ್ಲಿ ಭಾಗವಹಿಸಲಿದ್ದಾರೆ. ಗಣತಿಗೆ ಅಗತ್ಯ ಸಿದ್ದತೆಗಳನ್ನು ಮಾಡಿಕೊಳ್ಳಲಾಗಿದ್ದು, ಆನ್ ಲೈನ್ ಮೂಲಕ ಪ್ರತಿ ಗಸ್ತಿನಿಂದ ಕನಿಷ್ಠ ಒಬ್ಬ ಸಿಬ್ಬಂದಿಗೆ ಆನೆಗಣತಿಗೆ ತರಬೇತಿ ನೀಡಲಾಗಿದೆ. ಆನೆಗಳ ಲಿಂಗ ಪ್ರಮಾಣ, ಪ್ರತಿ ಕಿ.ಮೀ ಗೆ ಆನೆಗಳ ಸಾಂಧ್ರತೆ ಹೆಚ್ಚಾಗಿರುವ ಪ್ರದೇಶಗಳನ್ನು ಗುರುತಿಸುವುದರಿಂದ ಮಾನವ ಆನೆ ಸಂಘರ್ಷ ತಡೆಗಟ್ಟಲು ಮತ್ತು ಸಂಘರ್ಷ ನಿರ್ವಹಣೆ ತಂತ್ರಗಳನ್ನು ವಿನ್ಯಾಸಗೊಳಿಸುವುದಕ್ಕೆ ಉಪಯೋಗವಾಗುತ್ತದೆ.

ಹಸಿರಿನಿಂದ ಕಂಗೊಳಿಸುತ್ತಿರುವ ಅರಣ್ಯ
ಹಾಗೆನೊಡಿದರೆ ನಾಗರಹೊಳೆ ಅರಣ್ಯ ಪ್ರದೇಶದಲ್ಲಿ ಕಾಡಾನೆ ಮಾತ್ರವಲ್ಲದೆ, ಹುಲಿ, ಚಿರತೆ, ಜಿಂಕೆ, ಕಾಡುಕೋಣ ಹೀಗೆ ಹಲವು ವನ್ಯಪ್ರಾಣಿಗಳು ಬದುಕು ಕಟ್ಟಿಕೊಂಡಿವೆ. ಈ ಅರಣ್ಯದಲ್ಲಿ ಕಾಡಾನೆ ಮತ್ತು ಹುಲಿ ಗಣತಿ ನಡೆಯುತ್ತಲೇ ಇರುತ್ತದೆ. ನಾಗರಹೊಳೆಗೆ ಭೇಟಿ ನೀಡಿ ಇಲ್ಲಿನ ಪ್ರಕೃತಿ ಮತ್ತು ವನ್ಯ ಪ್ರಾಣಿಗಳನ್ನು ನೋಡಿ ಪ್ರವಾಸಿಗರು ಖುಷಿ ಪಡುತ್ತಾರೆ. ಇದೀಗ ಮಳೆ ಸುರಿದ ಕಾರಣ ಇಡೀ ಅರಣ್ಯ ಹಸಿರಿನಿಂದ ಕಂಗೊಳಿಸುತ್ತಿದ್ದು ಮುದ ನೀಡುತ್ತಿದೆ.
-
Gold Rate : ಮಾರ್ಚ್ 29ರ ಚಿನ್ನ ಮತ್ತು ಬೆಳ್ಳಿ ಬೆಲೆ: ಪ್ರಮುಖ ನಗರಗಳ ಇಂದಿನ ದರ ಪಟ್ಟಿ ಹೀಗಿದೆ -
Karnataka Weather: ರಾಜ್ಯದ 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ -
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
RCB: ಆರ್ಸಿಬಿ ಪಂದ್ಯದ ನಡುವೆಯೆ ಮತ್ತೊಮ್ಮ ಅಭಿಮಾನಿಗಳ ಮನಗೆದ್ದ 'ಕ್ರಶ್' ಅನನ್ಯಾ ಬಿರ್ಲಾ -
Khushbu Sundar: ಲವ್ ಜಿಹಾದ್ ಆರೋಪ ಹೊತ್ತಿದ್ದ ನಟಿ ಖುಷ್ಬೂ ಪತಿ ಸುಂದರ್ ರಾಜಕೀಯಕ್ಕೆ ಎಂಟ್ರಿ: ಮಧುರೈ ಸೆಂಟ್ರಲ್ನಿಂದ ಸ್ಪರ್ಧೆ -
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
ನಮ್ಮ ಮೆಟ್ರೋ-ಬಾಗ್ಮನೆ ಗ್ರೂಪ್ ಮಧ್ಯೆ ₹40 ಕೋಟಿ ಒಪ್ಪಂದ: ಮೆಟ್ರೋ ನಿಲ್ದಾಣಕ್ಕೆ 'ಬಾಗ್ಮನೆ' ಹೆಸರು -
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
March 29 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ












Click it and Unblock the Notifications