ಅಯೋಧ್ಯೆಯಲ್ಲಿ ಮಂದಿರವೂ ಬೇಡ, ಮಸೀದಿಯೂ ಬೇಡ:ಪ್ರೊ.ಕೆ.ಎಸ್. ಭಗವಾನ್
ಮೈಸೂರು, ಡಿಸೆಂಬರ್ 5: ಪ್ರತಿಷ್ಠಿತ ಅಯೋಧ್ಯೆಯಲ್ಲಿ ಮಂದಿರವೂ ಬೇಡ, ಮಸೀದಿಯೂ ಬೇಡ. ಆ ಜಾಗದಲ್ಲಿ ರಾಷ್ಟ್ರ ಮಟ್ಟದ ಉದ್ಯಾನವನ ನಿರ್ಮಾಣವಾಗಲಿ ಎಂದು ಪ್ರಗತಿಪರ ಚಿಂತಕ ಪ್ರೊ.ಕೆ.ಎಸ್ ಭಗವಾನ್ ತಿಳಿಸಿದ್ದಾರೆ.
ನಾಲ್ವಡಿ ಕೃಷ್ಣರಾಜ ಒಡೆಯರ್ ಜಾರಿಗೆ ತಂದ ಮೀಸಲಾತಿಗೆ 100 ವರ್ಷ ಹಿನ್ನೆಲೆಯಲ್ಲಿ ವಿವಿಧ ಪ್ರಗತಿಪರ ಸಂಘಟನೆಗಳಿಂದ ನಾಲ್ವಡಿಯವರ ಸಮಾಧಿಗೆ ಪುಷ್ಪಾರ್ಚನೆ ಮಾಡಿ ಮೌನ ಪ್ರತಿಭಟನೆ ನಡೆಸಲಾಯಿತು.
ಈ ವೇಳೆ ಮಾತನಾಡಿದ ಅವರು ಆ ಜಾಗದಲ್ಲಿ ಯಾವ ಮಂದಿರ ನಿರ್ಮಾಣವಾದರೂ ಶಾಂತಿ ಕದಡುತ್ತದೆ. ಈ ಜಾಗದ ವಿಚಾರ ರಾಜಕೀಯ ತಿರುವು ಪಡೆದುಕೊಳ್ಳುತ್ತದೆ. ಹೀಗಾಗಿ ಆ ಸ್ಥಳದಲ್ಲಿ ರಾಷ್ಟ್ರೀಯ ಉದ್ಯಾನವನ ನಿರ್ಮಾಣ ಮಾಡಲಿ. ರಾಷ್ಟ್ರೀಯ ಆಸ್ತಿ ಎಂದು ಸರ್ಕಾರ ಘೋಷಣೆ ಮಾಡಲಿ ಎಂದು ಆಗ್ರಹಿಸಿದರು.

ಇದೇ ವೇಳೆ ಮಾತನಾಡಿದ ಹಿಂದುಳಿದ ವರ್ಗಗಳ ಜಾಗೃತಿ ವೇದಿಕೆ ಅಧ್ಯಕ್ಷ ಕೆ.ಎಸ್.ಶಿವರಾಂ ಕೆಪಿಎಸ್ ಸಿ ನೇಮಕಾತಿಯಲ್ಲಿ ಸರ್ಕಾರ ಮೀಸಲಾತಿಯ ಅಂಶವನ್ನು ಕಡೆಗಣಿಸಿದೆ. ಕೆಳವರ್ಗದ ಜನರಿಗೆ ಆಶಾಕಿರಣವಾದ ಮೀಸಲಾತಿಯನ್ನು ಕಸಿಯುವ ಪ್ರಯತ್ನಮಾಡುತ್ತಿದೆ.
ಹೀಗಾಗಿ ಸರ್ಕಾರ 1995ರ ಮೀಸಲಾತಿ ಅನುಪಾತದ ಪಾಲನೆಯನ್ನು ಮುಂದುವರೆಸಬೇಕು ಎಂದು ಸರ್ಕಾರಕ್ಕೆ ಒತ್ತಾಯಿಸಿದರು.












Click it and Unblock the Notifications