ವೈಭವದ ದಸರೆಗೆ ಮೊದಲ ಮುನ್ನುಡಿ: ಗಜಪಡೆಗೆ ಭವ್ಯ ಸ್ವಾಗತ
ಮೈಸೂರು, ಸೆಪ್ಟೆಂಬರ್.05: ನಾಡಹಬ್ಬ ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆ, ಜಂಬೂಸವಾರಿಯಲ್ಲಿ ಚಿನ್ನದ ಅಂಬಾರಿ ಹೊತ್ತು ಸಾಗುವ ಆನೆ ಅರ್ಜುನನ ನೇತೃತ್ವದ ಗಜಪಡೆಗೆ ಇಂದು ಮಂಗಳವಾರ ಅರಮನೆ ಆವರಣದಲ್ಲಿ ಭವ್ಯ ಸ್ವಾಗತ ನೀಡಲು ಜಿಲ್ಲಾಡಳಿತ ಸಿದ್ಧತೆ ಮಾಡಿಕೊಂಡಿದೆ.
ಇದರೊಂದಿಗೆ ಸಾಂಸ್ಕೃತಿಕ ನಗರಿ ನಿಧಾನವಾಗಿ ದಸರಾ ಮಹೋತ್ಸವಕ್ಕೆ ಸಜ್ಜಾಗುತ್ತಿದೆ. ಅಶೋಕಪುರಂನಲ್ಲಿರುವ ಅರಣ್ಯ ಭವನದಲ್ಲಿ ಇಂದು ಮಧ್ಯಾಹ್ನ 3 ಗಂಟೆಗೆ ಗಜಪಡೆಯನ್ನು
ಉಪಚರಿಸಿ, ಅಲಂಕರಿಸಿ, ಅರಣ್ಯ ಇಲಾಖೆಯಿಂದ ಸಾಂಪ್ರದಾಯಿಕ ಪೂಜೆ ಸಲ್ಲಿಸಿ ಬೀಳ್ಕೊಡಲಾಗುವುದು.
ಮಧ್ಯಾಹ್ನ 3.30ಕ್ಕೆ ಅರಣ್ಯ ಭವನದಿಂದ ಸಾಲಂಕೃತ ಆನೆಗಳು ವಿವಿಧ ಜಾನಪದ ಕಲಾ ತಂಡಗಳೊಂದಿಗೆ ಕೃಷ್ಣಮೂರ್ತಿ ಪುರಂ, ಬಲ್ಲಾಳ್ ವೃತ್ತ, ಆರ್‍ಟಿಒ ವೃತ್ತ, ರಾಮಸ್ವಾಮಿ ವೃತ್ತ, ಚಾಮರಾಜ ಜೋಡಿ ರಸ್ತೆ, ಬಸವೇಶ್ವರ ವೃತ್ತ, ಸಯ್ಯಾಜಿರಾವ್ ರಸ್ತೆ, ನಗರಪಾಲಿಕೆ ವೃತ್ತ, ಪುರಂದರ ದಾಸರ ರಸ್ತೆ ಮೂಲಕ ಅರಮನೆ ಪೂರ್ವ ದ್ವಾರ ತಲುಪಲಿವೆ.
ಗಜಪಡೆಯು ಸಂಜೆ 4.30ಕ್ಕೆ ಜಯಮಾರ್ತಾಂಡ ದ್ವಾರದ ಮೂಲಕ ಅರಮನೆ ಆವರಣ ಪ್ರವೇಶಿಸುತ್ತಿದ್ದು, ಪೂರ್ಣಕುಂಭ, ಪೊಲೀಸ್ ಗೌರವ ರಕ್ಷೆ ಮೂಲಕ ಸ್ವಾಗತ ಕೋರಲಾಗುವುದು.
ಇದಾದ ಬಳಿಕ ಅಂಬಾವಿಲಾಸ ಅರಮನೆ ಮುಂಭಾಗ ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ ಅವರು ಪುಷ್ಪಾರ್ಚನೆ ಮಾಡುವ ಮೂಲಕ ದಸರಾ ಗಜಪಡೆಗೆ ಗೌರವ ಸಲ್ಲಿಸುವರು.
ಯಾವ ಆನೆಗಳನ್ನು ಎಲ್ಲಿಂದ ಕರೆತರಲಾಗಿದೆ? ಫುಡ್ ಹೇಗಿದೆ? ಯಾರೆಲ್ಲಾ ಪಾಲ್ಗೊಳ್ಳುವರು ಎಂಬ ಮಾಹಿತಿಗಾಗಿ ಮುಂದೆ ಓದಿ...

2ನೇ ತಂಡದಲ್ಲಿ 6 ಆನೆಗಳು ಬರಲಿವೆ
ಗಜಪಯಣದ ಮೊದಲ ತಂಡದಲ್ಲಿ ಬಳ್ಳೆ ಆನೆ ಶಿಬಿರದ ಅರ್ಜುನ (58), ತಿತಿಮತಿ ಆನೆ ಶಿಬಿರದಿಂದ ವರಲಕ್ಷ್ಮಿ (62), ಬಂಡಿಪುರ ಆನೆ ಶಿಬಿರದ ಚೈತ್ರ (47), ದುಬಾರೆ ಆನೆ ಶಿಬಿರದ ಗೋಪಿ (37), ದುಬಾರೆ ಆನೆ ಶಿಬಿರದ ವಿಕ್ರಮ (45), ಧನಂಜಯ ಆಗಮಿಸಿವೆ.
ವೀರನಹೊಸಹಳ್ಳಿಯಿಂದ ಹೊರಟು ಮೈಸೂರು ತಲುಪಿದ ಆನೆಗಳು ಸದ್ಯ ಅಶೋಕಪುರಂನ ಅರಣ್ಯ ಭವನದ ಆವರಣದಲ್ಲಿ ವಿಶ್ರಮಿಸುತ್ತಿವೆ. ಜಿಲ್ಲಾಡಳಿತ ಹಾಗೂ ಅರಣ್ಯ ಇಲಾಖೆ ಆನೆಗಳ ಉಸ್ತುವಾರಿ ನೋಡಿಕೊಳ್ಳುತ್ತಿವೆ. ಮುಂದಿನ ದಿನಗಳಲ್ಲಿ 2ನೇ ತಂಡದಲ್ಲಿ 6 ಆನೆಗಳು ಬರಲಿವೆ.

ವಾಸ್ತವ್ಯಕ್ಕೆ ಸಿದ್ಧತೆ
ಅರಮನೆಯಲ್ಲಿ ಆನೆಗಳಿಗೆ ಶೆಡ್ ನಿರ್ಮಿಸಲಾಗಿದ್ದು, 6 ಆನೆಗಳ ವಾಸ್ತವ್ಯಕ್ಕೆ ಎಲ್ಲಾ ಸಿದ್ಧತೆಗಳಾಗಿವೆ. ಮಾವುತರು, ಕಾವಾಡಿಗಳು, ಅವರ ಕುಟುಂಬ ವರ್ಗದವರಿಗಾಗಿ ತಾತ್ಕಾಲಿಕ ಶೆಡ್ ಗಳನ್ನೂ ನಿರ್ಮಿಸಲಾಗಿದೆ. 2ನೇ ತಂಡದಲ್ಲಿ ಬರುವ 6 ಆನೆಗಳನ್ನು ನೇರವಾಗಿ ಅರಮನೆಗೆ ಕರೆತರಲು ನಿರ್ಧರಿಸಲಾಗಿದೆ.

ಆನೆಗಳನ್ನು ಬರಮಾಡಿಕೊಳ್ಳುವ ಗಣ್ಯರು
ದಸರಾ ಆನೆಗಳನ್ನು ಆರಮನೆ ಅಂಗಳಕ್ಕೆ ಬರಮಾಡಿಕೊಳ್ಳುವ ಸಮಾರಂಭದಲ್ಲಿ ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್, ಜಿಪಂ ಅಧ್ಯಕ್ಷೆ ನಯೀಮಾ ಸುಲ್ತಾನ, ಉಪಾಧ್ಯಕ್ಷ ನಟರಾಜು, ಶಾಸಕರಾದ ಅಡಗೂರು ಎಚ್.ವಿಶ್ವನಾಥ್, ಎಸ್.ಎ.ರಾಮದಾಸ್
ತನ್ವೀರ್ ಸೇಠ್, ಎಲ್.ನಾಗೇಂದ್ರ, ಹರ್ಷವರ್ಧನ, ಅನಿಲ್ ಚಿಕ್ಕಮಾದು, ಅಶ್ವಿನ್ ಕುಮಾರ್, ಮಹದೇವ್, ಡಾ.ಯತೀಂದ್ರ ಸಿದ್ದರಾಮಯ್ಯ, ವಿಧಾನಪರಿಷತ್ ಸದಸ್ಯರಾದ ಸಂದೇಶ್ ನಾಗರಾಜ್, ಆರ್.ಧರ್ಮಸೇನ ಸೇರಿದಂತೆ ವಿವಿಧ ಜನಪ್ರತಿನಿಧಿಗಳು, ಅಧಿಕಾರಿಗಳು ಉಪಸ್ಥಿತರಿರುವರು.

ವೆರೈಟಿ ಫುಡ್
ಆನೆಗಳ ವಿಶೇಷ ಆಹಾರ ತಯಾರಿಕೆ ಅಡುಗೆ ಮನೆ ಸಹ ಅರಮನೆ ಅಂಗಳದಲ್ಲಿ ಸಿದ್ಧವಾಗಿದೆ. ಮಳೆಯಿಂದ ರಕ್ಷಣೆ ನೀಡಲು ಶೆಡ್ ಗಳನ್ನು ವಿಶೇಷವಾಗಿ ನಿರ್ಮಿಸಲಾಗಿದೆ. ಆನೆಗಳಿಗೆ ವೆರೈಟಿ ಫುಡ್ ಗಳನ್ನು ನೀಡಲು ತಯಾರಿ ಮಾಡಲಾಗಿದೆ.
-
Train Delay: ರೈಲು ಪ್ರಯಾಣಿಕರೇ ಎಚ್ಚರ! ನಾಳೆ ಬೆಂಗಳೂರು-ಚೆನ್ನೈ ನಡುವಿನ ಸಂಚಾರದಲ್ಲಿ ಭಾರಿ ವ್ಯತ್ಯಯ -
Karnataka Weather: ಮಾ.23ರಿಂದ 28ರವರೆಗೆ 10ಕ್ಕೂ ಅಧಿಕ ಜಿಲ್ಲೆಗಳಿಗೆ ಮಳೆ ಮುನ್ಸೂಚನೆ -
'ಬೆಂಗಳೂರಿನ ಬಸವನಗುಡಿಯಿಂದ ಬೆಳ್ಳಂದೂರಿಗೆ ಹೋಗಿ ದೊಡ್ಡ ತಪ್ಪು ಮಾಡಿಬಿಟ್ಟೆ': ಅಳಲು ತೋಡಿಕೊಂಡ ಕನ್ನಡಿಗ, ಭಾರೀ ವೈರಲ್ -
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD












Click it and Unblock the Notifications