• search
  • Live TV
ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಸಾಹಿತ್ಯ ಪರಿಷತ್ತಿಗೆ ದೇವನೂರ ಮಹಾದೇವ ಸಲಹೆ ಏನು?

|

ಮೈಸೂರು, ಡಿ. 19 : ಮಾತೃಭಾಷೆಯೇ ಶಿಕ್ಷಣ ಮಾಧ್ಯಮವಾಗಬೇಕು ಎಂಬ ಹಕ್ಕೊತ್ತಾಯ ಮುಂದಿಟ್ಟುಕೊಂಡು 81ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಲು ನಿರಾಕರಿಸಿರುವ ಸಾಹಿತಿ ದೇವನೂರ ಮಹಾದೇವ ಅವರು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪುಂಡಲೀಕ ಹಾಲಂಬಿ ಅವರಿಗೆ ಪತ್ರ ಬರೆದಿದ್ದಾರೆ.

ಭಾಷಾಮಾಧ್ಯಮದ ಕುರಿತು ಸುಪ್ರೀಂಕೋರ್ಟ್ ನೀಡಿರುವ ತೀರ್ಪಿನ ಹಿನ್ನಲೆಯಲ್ಲಿ ಮಾತೃಭಾಷೆಯ ಕತ್ತು ಹಿಸುಕಿದಂತಾಗಿರುವ ಸನ್ನಿವೇಶದಲ್ಲಿ ಯಾಂತ್ರಿಕ ಸಾಹಿತ್ಯ ಸಮ್ಮೇಳನದಲ್ಲಿ ತಾವು ಭಾಗವಹಿಸುವುದಿಲ್ಲ ಎಂದು ಪತ್ರದಲ್ಲಿ ದೇವನೂರು ಮಹಾದೇವ ಅವರು ಸ್ಪಷ್ಟಪಡಿಸಿದ್ದಾರೆ. [ಕನ್ನಡ ಮಾಧ್ಯಮ ಕಡ್ಡಾಯವಲ್ಲ ಎಂದ ಸುಪ್ರೀಂಕೋರ್ಟ್]

ಪುಂಡಲೀಕ ಹಾಲಂಬಿ ಅವರಿಗೆ ಬರೆದಿರುವ ಪತ್ರದಲ್ಲಿ ಮಹಾದೇವ ಅವರು, ಇಂದಿನ ಭಾಷಾ ಸನ್ನಿವೇಶದಲ್ಲಿ ಸಾಹಿತ್ಯ ಪರಿಷತ್ತು ಪೊರೆ ಕಳಚಿಕೊಂಡು ಎಲ್ಲರನ್ನೂ ಒಡಗೂಡಿ ಹೋರಾಡುವ ಅಗತ್ಯವಿದೆ. ಪರಿಷತ್ ಪೊರೆ ಕಳಚಿ ನಿಂತರೆ ನಾನು ಜೊತೆಗೂಡುತ್ತೇನೆ ಎಂದೂ ಹೇಳಿದ್ದಾರೆ. [ಏನಿದು ಮಾತೃಭಾಷೆ ವಿವಾದ]

ಪತ್ರದ ಸಾರಾಂಶ : ಭಾಷಾಮಾಧ್ಯಮದ ಕುರಿತು ಸುಪ್ರೀಂಕೋರ್ಟ್ ನೀಡಿರುವ ತೀರ್ಪಿನ ಹಿನ್ನಲೆಯಲ್ಲಿ ಮಾತೃಭಾಷೆಯ ಕತ್ತು ಹಿಸುಕಿದಂತಾಗಿರುವ ಸನ್ನಿವೇಶದಲ್ಲಿ ಯಾಂತ್ರಿಕ ಸಾಹಿತ್ಯ ಸಮ್ಮೇಳನದಲ್ಲಿ ತಾವು ಭಾಗವಹಿಸುವುದಿಲ್ಲ. [ಶ್ರವಣಬೆಳಗೊಳದಲ್ಲಿ 81ನೇ ಕನ್ನಡ ಸಾಹಿತ್ಯ ಸಮ್ಮೇಳನ]

ಭಾರತದ ಸಂವಿಧಾನವು ಅಂಗೀಕರಿಸಲ್ಪಟ್ಟ 22 ದೇಶೀ ಭಾಷೆಗಳು ಹಾಗೂ ದೇಶದಾದ್ಯಂತ ಇರುವ ಅನೇಕಾನೇಕ ಅಲ್ಪಸಂಖ್ಯಾತ ಭಾಷೆಗಳು ಇತ್ತೀಚಿನ ಸುಪ್ರಿಂಕೋರ್ಟ್ ತೀರ್ಪಿನಿಂದಾಗಿ ಕಾಲು ಕತ್ತರಿಸಿಕೊಂಡು ಚಲನೆ ಇಲ್ಲದ ಸ್ಥಿತಿಗೆ ತಲುಪಿರುವ ಈ ಸಂದರ್ಭದಲ್ಲಿ ಏನು ಹೇಳುವುದು?.

ಈಗ ಪಾರ್ಲಿಮೆಂಟ್‌ಗೇ ಚಾಟಿ ಬೀಸಬೇಕಾಗಿದೆ. ಜನಾಂದೋಲನ, ರಾಜಕೀಯದ ಮೇಲೆ ಒತ್ತಡ ವ್ಯಾಪಕವಾಗಬೇಕಾಗಿದೆ. ಸಾಹಿತ್ಯ ಪರಿಷತ್ತಿನಿಂದಲೂ ಈ ನಡೆಯನ್ನೇ ನಿರೀಕ್ಷಿಸುತ್ತೇನೆ. ಪರಿಷತ್ತಿಗೆ ನೂರು ವರ್ಷಗಳ ಹಿರಿಮೆ ಜತೆ ನೂರು ವರ್ಷದ ಜಡ್ಡೂ ಇರಬಹುದು. ಆದರೆ ಜೀವವಿದೆ. ಪೊರೆ ಕಳಚಬೇಕಾಗಿದೆ ಅಷ್ಟೇ.

ಸಾಹಿತ್ಯ ಪರಿಷತ್ ಹೊಸ ಹುಟ್ಟು ಪಡೆದರೆ ಅದಕ್ಕೆ ಪೂರಕ ವಾತಾವರಣ ಈಗ ಕರ್ನಾಟಕ ರಾಜ್ಯದಲ್ಲಿ ಇದೆ. ಯಾಕೆಂದರೆ ನನ್ನಷ್ಟೇ ಅಥವಾ ನಿಮ್ಮಷ್ಟೆ, ಮಾತೃಭಾಷೆ ಪ್ರಾಥಮಿಕ ನೆರೆಹೊರೆ ಸಮಾನಶಿಕ್ಷಣದ ಕಳಕಳಿ ಇರುವ ಮುಖ್ಯಮಂತ್ರಿಗಳನ್ನು ಈ ರಾಜ್ಯ ಈಗ ಪಡೆದಿದೆ. ಬಹುಶಃ ಹಿಂದೆ ಇಂಥ ಸಂದರ್ಭ ಇರಲಿಲ್ಲ ಎನ್ನಬಹುದು.

ಶ್ರೀ ಸಿದ್ದರಾಮಯ್ಯ, ಶ್ರೀ ನಿತೀಶ್‌ಕುಮಾರ್‌ರಂಥ ಮುಖ್ಯಮಂತ್ರಿಗಳು ಮುಖವಾಡ ಇಲ್ಲದವರು, ಹೃತ್ಪೂರ್ವಕತೆ ಇರುವವರು ಜೊತೆಗೆ ಧೈರ್ಯವಂತರೂ ಕೂಡ. ಹಾಗಾಗಿ ಈ ರಾಜಕಾರಣದೊಳಗೂ ಇಂಥವರಿಂದ ಒಂದಿಷ್ಟು ನಿರೀಕ್ಷಿಸಬಹುದು.

ತಳಸಮುದಾಯದ ಮಕ್ಕಳು ಶಿಕ್ಷಣದಿಂದಲೇ ಉದುರಿಹೋಗುತ್ತಿರುವುದೂ ಗೊತ್ತು. ಈ ಸಂದರ್ಭದಲ್ಲಿ ಈಗ ಸಾಹಿತ್ಯಪರಿಷತ್ ಧೈರ್ಯ ಮಾಡಿ ಹೊಸ ಹುಟ್ಟು ಪಡೆದು ಸರ್ಕಾರಕ್ಕೆ ಸವಾಲೆಸೆದರೆ ಒಂದಿಷ್ಟು ಬದಲಾವಣೆ ಆಗಲೂಬಹುದು. ಹೊಸ ಸಾಧ್ಯತೆಗಳು ಗೋಚರಿಸಲೂಬಹುದು.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Litterateur Devanur Mahadeva who has declined to chair the Akhila Bharata Kannada Sahitya Sammelan on Thursday writes letter to Kannada Sahitya Parishat president Pundalika Halambi and said, Kannada body should take lead in gathering a movement seeking primacy of education in mother tongue rather than focusing on the literary meet.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more