ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರಿನಲ್ಲಿ ಪುನೀತ್ ರಾಜಕುಮಾರ್ ಜೊತೆಗಿನ ಗಣಪ, ಪರಿಸರಸ್ನೇಹಿ ಗಣಪನಿಗೆ ಬೇಡಿಕೆ

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ಆಗಸ್ಟ್‌ 28: ಕೊರೊನಾದಿಂದ ಕಳೆದ ಎರಡು ವರ್ಷ ನಗರದಲ್ಲಿ ಸಾರ್ವಜನಿಕ ಗಣೇಶ ಉತ್ಸವಕ್ಕೆ ಕಳೆ ಇಲ್ಲದಂತಾಗಿತ್ತು. ಆದರೆ ಈ ಬಾರಿ ವಿಜೃಂಭಣೆಯಿಂದ ಗಣೇಶೋತ್ಸವ ಆಚರಿಸಲು ಸಿದ್ಧತೆಗಳು ನಡೆಯುತ್ತಿವೆ. ಈಗಾಗಲೇ ನಾನಾ ವೇಷದ ಗಣೇಶ ಮೂರ್ತಿಗಳು ಮಾರುಕಟ್ಟೆಗೆ ಲಗ್ಗೆಯಿಟ್ಟು, ಕಣ್ಮನ ಸೆಳೆಯುತ್ತಿವೆ. ಹೊರ ರಾಜ್ಯದ ಕಲಾವಿದರು ಇಲ್ಲಿಗೆ ಆಗಮಿಸಿ ಒಂದು ತಿಂಗಳಿಂದ ಮೂರ್ತಿಗಳ ತಯಾರಿಕೆಯಲ್ಲಿ ನಿರತರಾಗಿದ್ದಾರೆ. ಅದರಲ್ಲೂ ಈ ವರ್ಷ ಪರಿಸರ ಸ್ನೇಹಿ ಗಣಪತಿಗೆ ಭಾರಿ ಬೇಡಿಕೆ ಸೃಷ್ಟಿ ಆಗಿದೆ.

ಸಾರ್ವಜನಿಕ ಉತ್ಸವವಾಗಿ ಜನತೆ ವಿಜೃಂಭಣೆಯಿಂದ ಆಚರಿಸುವ ಗೌರಿ-ಗಣೇಶ ಹಬ್ಬ ಸಮೀಪಿಸುತ್ತಿದೆ. ಗೌರಿ ಪುತ್ರ ಮನೆ ಮನೆಗೆ ಆಗಮಿಸಲು ಇನ್ನು 2 ದಿನ ಬಾಕಿಯಿದೆ. ಕಳೆದ ಎರಡು ವರ್ಷ ಕೊರೊನಾ ನಿರ್ಬಂಧದ ಕಾರಣಕ್ಕೆ ಈ ಹಬ್ಬಕ್ಕೆ ಕರಿನೆರಳು ಬಿದಿತ್ತು. ಈ ಬಾರಿ ಯುವಕ ಸಂಘಗಳು, ಗಣೇಶೋತ್ಸವ ಸಮಿತಿಗಳು ಕೊರೊನಾ ಪೂರ್ವದಂತೆ ವಿಜೃಂಭಣೆಯಿಂದ ಗಣೇಶೋತ್ಸವ ಆಚರಿಸಲು ಸಿದ್ಧತೆ ನಡೆಸಿವೆ. ಈಗಾಗಲೇ ನಗರದ ಪ್ರಮುಖ ವೃತ್ತ ಸೇರಿದಂತೆ ರಸ್ತೆ ಬದಿಗಳಲ್ಲಿ ಮೂರ್ತಿ ಮಾರಾಟ ಜೋರಾಗಿದೆ. ಕುಂಬಾರರು ಗಣೇಶ ಮೂರ್ತಿಯ ತಯಾರಿಕೆಯಲ್ಲಿ ನಿರತರಾಗಿದ್ದಾರೆ.

ಅಪ್ಪು ಜೊತೆಗಿನ ಗಣೇಶ ಮೂರ್ತಿಗೆ ಡಿಮ್ಯಾಂಡ್
"ಕೊರೊನಾ ಆರ್ಭಟದಿಂದ ಎರಡು ವರ್ಷ ಗಣಪತಿ ಹಬ್ಬದ ಸಂದರ್ಭದಲ್ಲಿ 500 ಅಥವಾ 600 ಮೂರ್ತಿಗಳು ಮಾರಾಟವಾಗಿದ್ದೆ ಹೆಚ್ಚಾಗಿತ್ತು. ಆದರೆ ಈ ಬಾರಿ 3 ಸಾವಿರಕ್ಕೂ ವಿಗ್ರಹಳಿಗೆ ಬೇಡಿಕೆ ಬಂದಿದೆ. ಎಲ್ಲ ಮೂರ್ತಿ ತಯಾರಕರಿಗೂ ಕೈತುಂಬಾ ಕೆಲಸ ಸಿಕ್ಕಿದೆ," ಎಂದು ಗಣಪತಿ ತಯಾರಕ ಮಂಜುನಾಥ್ ಹರ್ಷ ವ್ಯಕ್ತಪಡಿಸಿದರು.

Demand for Eco-friendly Ganapati Idols in Mysuru

ಪುನೀತ್ ರಾಜ್‌ಕುಮಾರ್ ಅವರ ನಿಧನದ ಆಘಾತದಿಂದ ಅಭಿಮಾನಿಗಳು ಇಂದಿಗೂ ಹೊರಬಂದಿಲ್ಲ. ಅವರ ಅಭಿಮಾನಿಗಳು ಗಣಪತಿ ಮೂರ್ತಿ ತಯಾರು ಮಾಡುವವರಿಗೆ ಅಪ್ಪು ಜೊತೆಗೆ ಗಣಪ ಇರುವ ಮೂರ್ತಿಗಳನ್ನು ಮಾಡಿಕೊಡುವಂತೆ ಬೇಡಿಕೆ ಇಡುತ್ತಿದ್ದಾರೆ.

ಬೆಂಗಳೂರು, ತಮಿಳುನಾಡಿನಿಂದಲೂ ಬೇಡಿಕೆ ಹೆಚ್ಚಾಗುತ್ತಲೇ ಇದೆ. ಈಗಾಗಲೇ ಮೈಸೂರಿನ ಹಲವು ತಾಲೂಕುಗಳು, ಬೆಂಗಳೂರು, ತಮಿಳುನಾಡಿನ ಕೆಲ ಜಿಲ್ಲೆಗಳಿಂದ ಗೌರಿ-ಗಣಪತಿ ಮೂರ್ತಿಗಳನ್ನು ಕಳುಹಿಸಿಕೊಡುವಂತೆ ಬೇಡಿಕೆ ಬಂದಿದೆ. ನಾಲ್ಕು ಇಂಚಿನಿಂದ 6 ಅಡಿ ಮೂರ್ತಿಗಳನ್ನು ತಯಾರಿಸಲಾಗಿದೆ. ನಗರದ ಕುಂಬಾರಗೇರಿ, ಕೆ.ಟಿ.ಸ್ಟ್ರೀಟ್ ಸೇರಿದಂತೆ ಹಲವು ಕಡೆಗಳಲ್ಲಿ ಸಾಕಷ್ಟು ವಿಶೇಷವಾದ ಗೌರಿ-ಗಣೇಶ ಮೂರ್ತಿಗಳನ್ನು ತಯಾರು ಮಾಡಲಾಗುತ್ತಿದೆ. ಯುವಕರ ಗುಂಪುಗಳು ಸಾಲು ಸಾಲಾಗಿ ಬಂದು ಆರ್ಡರ್ ಕೊಡುತ್ತಿದ್ದಾರೆ ಎಂದು ಹರ್ಷ ವ್ಯಕ್ತಪಡಿಸಿದರು.

ವಿವಿಧ ಅವತಾರದಲ್ಲಿ ಗಣಪತಿ ಮೂರ್ತಿಗಳು
ಅಂಬಾರಿಯಲ್ಲಿ ಆಸೀನ, ಛತ್ರಪತಿ ಶಿವಾಜಿ, ಹಸುವಿನ ಮೇಲೆ ಈಶ್ವರ ಗಣಪ, ಡಮರು, ಶಂಕು, ತಬಲ, ಕಾಳಿಂಗ ಸರ್ಪದ ಮೇಲೆ ನೃತ್ಯ ಮಾಡುವ ಗಣಪ, ಪರಶುರಾಮನ ಗಣಪ, ಜಟಾಧಾರಿ, ತಿರುಪತಿ ತಿಮ್ಮಪ್ಪ ಸೇರಿದಂತೆ ನಾನಾ ಅವತಾರದ ಮೂರ್ತಿಗಳ ಜೊತೆಯಲ್ಲಿ ಸಾಮಾನ್ಯ ಶೈಲಿಯ ಗಣಪಗಳು ಕೂಡ ಅರಳಿ ನಿಂತಿವೆ. ಜೇಡಿ ಮಣ್ಣು, ಭತ್ತದ ಹುಲ್ಲು, ಬಿದಿರು ಬಳಸಿ ಮಾಡುತ್ತಿರುವ ಪರಿಸರ ಸ್ನೇಹಿ ಗಣಪಗಳಾಗಿವೆ. ಕನಿಷ್ಟ 3 ರಿಂದ ಗರಿಷ್ಟ 14 ಅಡಿ ಎತ್ತರದ ಗಣೇಶ ಮೂರ್ತಿಗಳನ್ನು ಇಲ್ಲಿ ತಯಾರಿಸುತ್ತಿದ್ದು, ಸದ್ಯ 10 ರಿಂದ 30 ಸಾವಿರ ರೂಪಾಯಿವರೆಗೂ ಬೆಲೆಯನ್ನು ನಿಗಧಿಪಡಿಸಲಾಗಿದೆ.

English summary
As the Ganesha festival arriving shortly, demand for eco friendly Ganapati idols is increasing everywhere, especially the Mysoreans.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X