Get Updates
Get notified of breaking news, exclusive insights, and must-see stories!

ಮೈಸೂರು ಅರಮನೆಯಲ್ಲಿ ಮಾಗಿ ಉತ್ಸವದ ಸಿದ್ಧತೆ: ಏನಿದರ ವಿಶೇಷ?

ಮೈಸೂರು, ಡಿಸೆಂಬರ್‌ 18: ಮೈಸೂರು ಅರಮನೆಯಲ್ಲಿ ಪ್ರತಿ ವರ್ಷದಂತೆ ಈ ಬಾರಿಯೂ ಮಾಗಿ ಉತ್ಸವದ ಜತೆಗೆ ಕ್ರಿಸ್ಮಸ್ ಹಾಗೂ ಹೊಸ ವರ್ಷದ ಆಚರಣೆಯನ್ನು ಸಡಗರ ಸಂಭ್ರದಿಂದ ಆಚರಿಸಲಾಗುತ್ತಿದ್ದು, ಫಲಪುಷ್ಪ ಪ್ರದರ್ಶನದ ಮೂಲಕ ದೇಶ ವಿದೇಶಗಳ ಪ್ರವಾಸಿಗರನ್ನು ಸೆಳೆಯಲಾಗುತ್ತಿದ್ದು ಅದರಂತೆ ಡಿ.21ರಿಂದ 31ರವರೆಗೆ ಅರಮನೆ ಅಂಗಳದಲ್ಲಿ ಪುಷ್ಟಲೋಕವೊಂದು ತೆರೆದುಕೊಳ್ಳಲಿದ್ದು, ಈ ಪುಷ್ಟಲೋಕದಲ್ಲಿ ವಿಹರಿಸಲು ಬರುವವರಿಗಾಗಿ ಭವ್ಯ ಸ್ವಾಗತವನ್ನು ನೀಡಲಾಗುತ್ತಿದೆ.

ಹೊಸವರ್ಷವನ್ನು ಸಡಗರ, ಸಂಭ್ರಮದೊಂದಿಗೆ ಮೈಸೂರಿನಲ್ಲಿ ಬರಮಾಡಿಕೊಳ್ಳಬೇಕನ್ನುವುದು ದೇಶ ವಿದೇಶದ ಪ್ರವಾಸಿಗರ ಬಯಕೆಯಾಗಿದ್ದು ಅದರಂತೆ ಮೈಸೂರಿನಲ್ಲಿ ಬಂದು ವಾಸ್ತವ್ಯ ಹೂಡುತ್ತಾರೆ. ಹೀಗೆ ಬರುವ ಪ್ರವಾಸಿಗರನ್ನು ಆಕರ್ಷಿಸಿ ಅವರ ಮನಮುದಗೊಳಿಸಿ ಮೈಸೂರು ಪ್ರವಾಸ ಮನದಲ್ಲಿ ಅಚ್ಚಳಿಯದಂತೆ ಮಾಡುವ ನಿಟ್ಟಿನಲ್ಲಿ ನಗರದಲ್ಲಿ ಬೇರೆ, ಬೇರೆ ಕಡೆ ವಿವಿಧ ಸಿದ್ಧತೆಗಳು ನಡೆಯುತ್ತಿವೆ. ಈ ನಡುವೆ ಅರಮನೆಯಲ್ಲಿ ಪ್ರತಿವರ್ಷವೂ ಮಾಗಿ ಕಾಲದಲ್ಲಿ ಫಲಪುಷ್ಪ ಪ್ರದರ್ಶನ ಮಾತ್ರವಲ್ಲದೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸುವುದು ವಿಶೇಷವಾಗಿದೆ.

December Special Event Celebration Preparation In Mysore Palace

ಮೈಸೂರು ಅರಮನೆಯಲ್ಲಿ ಈ ಬಾರಿಯ ಮಾಗಿ ಉತ್ಸವದ ಅಂಗವಾಗಿ ಅರಮನೆ ಅಂಗಳದಲ್ಲಿ ಹತ್ತು ದಿನಗಳ ಕಾಲ ಪುಷ್ಪಲೋಕ ಧರೆಗಿಳಿದು ಬರಲಿದ್ದು, ಅದಕ್ಕಾಗಿ ಸಿದ್ಧತೆಗಳು ಭರದಿಂದ ಸಾಗುತ್ತಿವೆ. ಈ ಬಾರಿ ಫಲಪುಷ್ಪ ಪ್ರದರ್ಶನದಲ್ಲಿ ಏನೆಲ್ಲ ಇರಲಿದೆ ಎನ್ನುವುದನ್ನು ನೋಡುತ್ತಾ ಹೋದರೆ ಹಲವು ವಿಶೇಷತೆಗಳು ಇರಲಿವೆ ಎಂಬ ಉತ್ತರ ನಮಗೆ ಸಿಗಲಿದೆ. ಈ ಬಾರಿಯ ವಿಶೇಷತೆಯಾಗಿ ಪುಷ್ಪಗಳಿಂದ ನವದೆಹಲಿಯ ಅಕ್ಷರಧಾಮ ನಿರ್ಮಾಣವಾಗಲಿದೆ.

ಪ್ರವಾಸಿಗರ ಸೆಳೆಯಲಿರುವ ಅಕ್ಷರಧಾಮ

ಈ ಬಾರಿಯ ಫಲಪುಷ್ಪ ಪ್ರದರ್ಶನದಲ್ಲಿ ನವದೆಹಲಿಯ ಅಕ್ಷರಧಾಮ ಪ್ರವಾಸಿಗರನ್ನು ಆಕರ್ಷಿಸಲಿದೆ. 50 ಅಡಿ ಅಗಲ, 16 ಅಡಿ ಉದ್ದ, 25 ಅಡಿ ಎತ್ತರದಲ್ಲಿ ಲಕ್ಷಾಂತರ ಹೂಗಳಿಂದ ಅಕ್ಷರಧಾಮ ಮಾದರಿಯನ್ನು ನಿರ್ಮಿಸಲಾಗುತ್ತಿದೆ. ಇದು ಫಲಪುಷ್ಪ ಪ್ರದರ್ಶನದ ಕೇಂದ್ರಬಿಂದುವಾಗಲಿದೆ. ಇದರ ಜತೆಗೆ ಮುಮ್ಮಡಿ ಕೃಷ್ಣರಾಜ ಒಡೆಯರ್, ನಂಜನಗೂಡಿನ ನಂಜುಡೇಶ್ವರ ದೇವಸ್ಥಾನ ಪ್ರಮುಖ ಆಕರ್ಷಣೆಯಾಗಿರಲಿದೆ. ಇಷ್ಟೇ ಅಲ್ಲದೆ ಫಲಪುಷ್ಪ ಪ್ರದರ್ಶನದಲ್ಲಿ ಪಂಚಗ್ಯಾರಂಟಿಗಳು ಆಕರ್ಷಿಸಲಿವೆ.

December Special Event Celebration Preparation In Mysore Palace

ವಿವಿಧ ಬಗೆಯ ಹೂಗಳಲ್ಲಿ ರಾಜ್ಯ ಸರ್ಕಾರದ ಪಂಚ ಗ್ಯಾರಂಟಿಗಳ ಮಾದರಿ ನಿರ್ಮಿಸಲಾಗುತ್ತದೆ. ಜತೆಗೆ ಹದ್ದು, ಮರಿಯಾನೆ, ಸೆಲ್ಪೀ ಪಾಯಿಂಟ್, ರಾಜವಂಶದ ಲಾಂಛನವಾದ ಗಂಡಭೇರುಂಡ, ಆಮೆ, ಮಕ್ಕಳ ಆಷರ್ಕಣೆಗೆ ಬಂಡೀಪುರ ಅಭಯಾರಣ್ಯದ 6 ಪ್ರಾಣಿ, 4 ಪಕ್ಷಿಗಳ ಮಾದರಿ, ಮಾವಿನ ಹಣ್ಣಿನ ಮಾದರಿ, ಕಾರ್ಗಿಲ್ ಯುದ್ಧ ಸ್ಮಾರಕ, ಸಂವಿಧಾನದ ಪೀಠಿಕೆಯ ಮಾದರಿಯನ್ನು ಹೂಗಳಿಂದ ನಿರ್ಮಿಸಲಾಗುತ್ತದೆ. ಜತೆಗೆ ಪ್ರವೇಶ ದ್ವಾರಗಳಲ್ಲಿ ಎರಡು ನವಿಲಿನ ಮಾದರಿ ನಿರ್ಮಿಸಿ ಬೊಂಬೆ ಮನೆಯ ಪ್ರವೇಶ ದ್ವಾರವನ್ನು ವಿವಿಧ ಹೂಗಳಿಂದ ಅಲಂಕರಿಸಲಾಗುತ್ತದೆ.

6 ಲಕ್ಷ ಹೂಗಳಿಂದ ವೈವಿಧ್ಯದ ಅಲಂಕಾರ

ಫಲಪುಷ್ಪ ಪ್ರದರ್ಶನ ವೀಕ್ಷಿಸಲು ಬರುವ 500 ಜನ ಗಣ್ಯರಿಗೆ, ಸಾರ್ವಜನಿಕರಿಗೆ ಸಾಂಕೇತಿಕವಾಗಿ ಔಷಧಿಯುಕ್ತ ಗಿಡಗಳಾದ ಅಲೋವೆರ, ತುಳಸಿ, ಮಲ್ಲಿಗೆ, ವೀಳ್ಯೆದೆಲೆ ಹಾಗೂ ಚಕ್ರಮುನಿ ಗಿಡಗಳನ ವಿತರಿಸಲಾಗುತ್ತದೆ. ವೀಕ್ಷಣೆ ಸಮಯದಲ್ಲಿ ಜಯ ಚಾಮರಾಜ ಒಡೆಯರ್ ರಚಿಸಿರುವ ಕೀರ್ತನೆಗಳು ಸೇರಿದಂತೆ ಶಾಸ್ತ್ರೀಯ ವಾದನಗಳ ಸಂಗೀತ ಆಲಿಸಬಹುದಾಗಿದೆ. ಫಲಪುಷ್ಪ ಪ್ರದರ್ಶನವನ್ನು ಆಕರ್ಷಕವಾಗಿಸಲು ವಿವಿಧ ಆಕೃತಿಗಳ ತಾಜಾತನ ಕಾಪಾಡಲು ಒಂದು ಬಾರಿ ಹೂವು, ತರಕಾರಿಗಳನ್ನು ಬದಲಾಯಿಸಲಾಗುತ್ತದೆ.

ಅರಮನೆ ವರಹಾ ಉದ್ಯಾನದಲ್ಲಿರುವ ವರ್ಟಿಕಲ್ ಗಾರ್ಡನ್ ನಲ್ಲಿ ಸುಮಾರು 25ಸಾವಿರ ವಿಭಿನ್ನ ರೀತಿಯ ಅಲಂಕಾರಿಕ ಹೂವಿನ ಕುಂಡಗಳನ್ನು ಜೋಡಣೆ ಮಾಡಲಾಗುತ್ತದೆ. ಮಾರಿಗೋಲ್ಡ್, ಸಾಲ್ವಿಯ, ಡೇಲಿಯ, ಪಿಟೋನಿಯ, ಕೋಲಿಯಸ್, ಸಿಲೋಷಿಯ, ಕಾಶಿಗೊಂಡೆ, ಆಸ್ಟರ್ ಸೇರಿದಂತೆ 35ಜಾತಿಯ ಹೂವಿನ ಗಿಡಗಳು, ಗುಲಾಬಿ, ಕ್ರೈಸಾಂಥಿಮಂ, ಪಿಂಗ್ ಪಾಂಗ್, ಕಾರ್ನೆಷಲ್, ಅಸ್ಟ್ರಮೇರಿಯ, ಜರ್ಬೆರಾ ಸೇರಿದಂತೆ ಅಂದಾಜು 6ಲಕ್ಷ ಹೂಗಳಿಂದ ವೈವಿಧ್ಯಮಯ ಅಲಂಕಾರ ಮಾಡಲಾಗುತ್ತಿದೆ.

ಅರಮನೆ ವಿದ್ಯುತ್ ದೀಪಾಲಂಕಾರ ವಿಸ್ತರಣೆ

ಫಲಪುಷ್ಪ ಪ್ರದರ್ಶನದ ಅಂಗವಾಗಿ ಅರಮನೆಯಲ್ಲಿ ಡಿ.21ರಿಂದ 25ರವರೆಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ. ಪ್ರಮುಖವಾಗಿ ಸಂಗೀತ ರಸಸಂಜೆ, ಗೀತಗಾಯನ, ನೃತ್ಯರೂಪಕ, ಶಾಸ್ತ್ರೀಯ ಸಂಗೀತ, ಲಯ-ಲಾವಣ್ಯ, ಫ್ಯೂಷನ್ ಸಂಗೀತ, ನೃತ್ಯ ನಾಟಕ ಸೇರಿದಂತೆ ಇನ್ನಿತರ ಆಕರ್ಷಕ ಕಾರ್ಯಕ್ರಮಗಳು ನಡೆಯಲಿದೆ. ಇದರೊಂದಿಗೆ ಬೊಂಬೆಗಳ ಪ್ರದರ್ಶನ, ಛಾಯಾಚಿತ್ರ ಪ್ರದರ್ಶನ ಸಹ ಆಯೋಜಿಸಲಾಗಿದೆ. ಹೊಸ ವರ್ಷದ ಅಂಗವಾಗಿ ಡಿ.31ರಂದು ರಾತ್ರಿ 11ರಿಂದ 12ರವರೆಗೆ ಪೊಲೀಸ್ ಇಲಾಖೆ ವತಿಯಿಂದ ಕರ್ನಾಟಕ ಮತ್ತು ಆಂಗ್ಲ ಬ್ಯಾಂಡ್ ಕಾರ್ಯಕ್ರಮ ನಡೆಯಲಿದೆ.

ಇದಾದ ನಂತರ ರಾತ್ರಿ 12ರಿಂದ 12.15ರ ವರೆಗೆ ಅರಮನೆ ಮಂಡಳಿ ವತಿಯಿಂದ ಶಬ್ದರಹಿತ ಹಸಿರು ಪಟಾಕಿ ಸಿಡಿಸುವ ಮೂಲಕ ಹೊಸ ವರ್ಷದ ಸಂಭ್ರಮಾಚರಣೆ ನಡೆಸಲಾಗುವುದು. ಅರಮನೆಯ ಸೊಬಗನ್ನು ಮತ್ತಷ್ಟು ಹೆಚ್ಚಿಸಲು ಅರಮನೆಯ ವಿದ್ಯುತ್ ದೀಪಾಲಂಕಾರವನ್ನು ಸಂಜೆ 7ರಿಂದ 9 ರವರೆಗೆ ವಿಸ್ತರಣೆ ಮಾಡಲಾಗಿದೆ. ಪ್ರದರ್ಶನ ವೀಕ್ಷಣೆಗೆ ವಿದೇಶಿಯರು, ವಯಸ್ಕರಿಗೆ 30ರೂ, 10ರಿಂದ 18 ವರ್ಷದೊಳಗಿನ ಮಕ್ಕಳಿಗೆ 20 ರೂ. ದರ ನಿಗದಿ ಮಾಡಲಾಗಿದೆ. 10 ವರ್ಷದೊಳಗಿನ ಮಕ್ಕಳಿಗೆ ಪ್ರವೇಶ ಉಚಿತ ಇರಲಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+