ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಗಜಪಡೆಗಳ ಕಾಳಗಕ್ಕೆ ಸಾಕ್ಷಿಯಾದ ಪಿರಿಯಾಪಟ್ಟಣ

|
Google Oneindia Kannada News

ಮೈಸೂರು, ಜ. 14 : ಪಿರಿಯಾಪಟ್ಟಣ ಮಂಗಳವಾರ ಆನೆಗಳ ಕಾಳಗಕ್ಕೆ ಸಾಕ್ಷಿಯಾಗಿತ್ತು. ನಾಗರಹೊಳೆ ಅರಣ್ಯದಿಂದ ಬಂದು ಪಿರಿಯಾಪಟ್ಟಣ ಸಮೀಪದ ಗ್ರಾಮಗಳಲ್ಲಿ ಓಡಾಡಿಕೊಂಡಿದ್ದ ಒಂಟಿ ಸಲಗವನ್ನು ಕಾಡಿಗಟ್ಟುವ ಕಾರ್ಯಾಚರಣೆ ಸತತ ನಾಲ್ಕು ಗಂಟೆಗಳ ಕಾಲ ನಡೆಯಿತು. ದಸರಾ ಆನೆಗಳು ಸಲಗವನ್ನು ಕಾಡಿಗೆ ಓಡಿಸಿದವು.

ಪಿರಿಯಾಪಟ್ಟಣದ ಸುತ್ತಮುತ್ತಲಿನ ಕಿರನಲ್ಲಿ, ತಾತನಹಳ್ಳಿ, ಸುಂಡವಾಳು ಮುಂತಾದ ಗ್ರಾಮಗಳಲ್ಲಿ ಬೀಡುಬಿಟ್ಟಿದ್ದ ಒಂಟಿ ಸಲಗವನ್ನು ಮಂಗಳವಾರ ಕಾಡಿಗೆ ಅಟ್ಟಲಾಯಿತು. ಸಾವಿರಾರು ಜನರಿಗೆ ಆತಂಕ ಉಂಟು ಮಾಡಿದ್ದ ಒಂಟಿ ಸಲಗದ ಆರ್ಭಟವನ್ನು ಕಂಡು ದಸರಾ ಆನೆ ಬಲರಾಮ ಸಹ ಗಾಬರಿಗೊಂಡು ಓಡಿ ಮತ್ತುಷ್ಟ ಆತಂಕ ಸೃಷ್ಟಿಸಿದ್ದ. [ಮೈಸೂರು ದಸರಾ ಆನೆಗಳ ಬಯೋಡೇಟಾ]

Piriyapatna

ನಾಗರಹೊಳೆ ಅರಣ್ಯದಿಂದ ಬಂದಿದ್ದ ಒಂಟಿ ಸಲಗ ಪಿರಿಯಾಪಟ್ಟಣ ಸಮೀಪದ ಗ್ರಾಮಗಳಲ್ಲಿ ಸುಮಾರು 12 ಗಂಟೆಗಳಿಂದ ಬೀಡು ಬಿಟ್ಟಿತ್ತು. ಈ ಆನೆಯನ್ನು ಕಾಡಿಗಟ್ಟಲು ದಸರಾ ಆನೆಗಳನ್ನು ಅರಣ್ಯ ಇಲಾಖೆ ಅಧಿಕಾರಿಗಳು ಕರೆತಂದಿದ್ದರು. ಸತತ ನಾಲ್ಕು ಗಂಟೆಯ ಕಾರ್ಯಾಚರಣೆ ಬಳಿಕ ಸಲಗ ಕಾಡಿಗೆ ಮರಳಿತು. [ಕೊಡಗಿನಲ್ಲಿ ಕಾಡಾನೆ ದಾಳಿಗೆ ಇಬ್ಬರು ಮಹಿಳೆಯರು ಬಲಿ]

ಆತಂಕಮೂಡಿಸಿದ ಬಲರಾಮ : ಒಂಟಿ ಸಲಗವನ್ನು ಹಿಡಿಯುವ ಕಾರ್ಯಾಚರಣೆಗೆ ದಸರಾ ಆನೆಗಳಾದ ಬಲರಾಮ, ಅಭಿಮನ್ಯು, ಗೋಪಾಲಸ್ವಾಮಿ ಹಾಗೂ ಕೃಷ್ಣ ಆಗಮಿಸಿದ್ದರು. ಆದರೆ, ಒಂಟಿ ಸಲಗದ ಆರ್ಭಟ ಮತ್ತು ಜನರ ಕೂಗಾಟ ನೋಡಿ ದಸರಾ ಆನೆಗಳು ಬೆದರಿದವು.

ಬಲರಾಮ ಸಹನೆ ಕಳೆದುಕೊಂಡು ದಿಕ್ಕಾಪಾಲಾಗಿ ಓಡಿತು, ಮಾವುತನನ್ನು ಕೆಳಗೆ ಬೀಳಿಸಿ ಅಭಿಮನ್ಯು, ಕೃಷ್ಣ ಆನೆಗಳಿಗೆ ತಿವಿದು ಅವಾಂತರ ಸೃಷ್ಟಿಸಿತು. ಅರಣ್ಯ ಇಲಾಖೆ ಸಿಬ್ಬಂದಿ ಮೊದಲು ಬಲರಾಮನನ್ನು ಕಟ್ಟಿಹಾಕಿ ಪುನಃ ಕಾರ್ಯಾಚರಣೆ ಆರಂಭಿಸಿ, ಸಲಗವನ್ನು ಕಾಡಿಗಟ್ಟಿದರು. [ಪಿಟಿಐ ಚಿತ್ರ]

ಮಂಗಳವಾರ ಸಂಜೆ 7 ಗಂಟೆ ಸುಮಾರಿಗೆ ಅಭಿಮನ್ಯು, ಗೋಪಾಲಸ್ವಾಮಿ ಹಾಗೂ ಕೃಷ್ಣನ ಜತೆ ಕಾಳಗ ನಡೆಸಿದ ಒಂಟಿ ಸಲಗ 15 ನಿಮಿಷಗಳಲ್ಲಿ ಸೋಲೊಪ್ಪಿಕೊಂಡು ಕಾಡಿಗೆ ಓಡಿಹೋಯಿತು. ಆನೆಗಳನ್ನು ಹಿಡಿಯುವ ಕಾರ್ಯಾಚರಣೆಯ ಮಾಸ್ಟರ್ ಅಭಿಮನ್ಯುವಿನ ತಂತ್ರ ಫಲನೀಡಿತು.

ಅಭಿಮನ್ಯು ಪರಿಚಯ : ಸುಮಾರು 17 ವರ್ಷಗಳಿಂದ ದಸರಾ ಉತ್ಸವದಲ್ಲಿ ಪಾಲ್ಗೊಳ್ಳುತ್ತಿರುವ ಅಭಿಮನ್ಯು ಕೆ. ಗುಡಿ ಆನೆ ಶಿಬಿರದ ಗಂಡು ಆನೆ. 1987ರಲ್ಲಿ ಕೊಡಗು ಜಿಲ್ಲೆಯ ಕಟ್ಟೆಪುರ ಅರಣ್ಯ ಪ್ರದೇಶದಲ್ಲಿ ಅಭಿಮನ್ಯುವನ್ನು ಸೆರೆಹಿಡಿಯಲಾಗಿತ್ತು. ಕಾಡಾನೆಯಲ್ಲಿ ಪಳಗಿಸುವುದರಲ್ಲಿ ಅಭಿಮನ್ಯು ಬಲಿಷ್ಠವಾಗಿದೆ.

English summary
The forest department authorities and the villagers of Piriyapatna Mysuru district on Friday, heaved a sigh of relief when they captured the wild tusker. Dasara jumbos also take part in operation.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X