ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರಿನಲ್ಲಿ ಜಂಬೂ ಸವಾರಿಗೆ ಸಿದ್ಧತೆ ಹೇಗಿದೆ? ಇಲ್ಲಿದೆ ಸಂಪೂರ್ಣ ವಿವರ

|
Google Oneindia Kannada News

ಮೈಸೂರು, ಅಕ್ಟೋಬರ್‌ 04: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಅದ್ಧೂರಿ ಜಂಬೂ ಸವಾರಿಗೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. 9 ದಿನಗಳ ಕಾಲ ನಡೆದ ಸಾಂಸ್ಕೃತಿಕ ಕಾರ್ಯಕ್ರಮಗಳು ಲಕ್ಷಾಂತರ ಜನರನ್ನು ತಲುಪಿವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಟಿ ಸೋಮಶೇಖರ್ ಮಾಹಿತಿಯನ್ನು ನೀಡಿದ್ದಾರೆ.

ಸೆಪ್ಟೆಂಬರ್‌ 26ರಂದು ಚಾಮುಂಡಿ ಬೆಟ್ಟದಲ್ಲಿ ರಾಷ್ಟ್ರಪತಿಗಳಿಂದ ಉದ್ಘಾಟನೆಯಾದ ನಾಡಹಬ್ಬ ದಸರಾ ನಾಳೆ ಜಂಬೂ ಸವಾರಿಯೊಂದಿಗೆ ಮುಕ್ತಾಯ ಆಗಲಿದೆ. ನಾಳೆ ನಡೆಯುವ ಅದ್ಧೂರಿ ಜಂಬೂ ಸವಾರಿಗೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಈ ಬಾರಿಯ ಜಂಬೂ ಸವಾರಿಯಲ್ಲಿ 47 ಸ್ತಬ್ಧ ಚಿತ್ರಗಳು ಹಾಗೂ ಕಲಾ ತಂಡಗಳು ಭಾಗವಹಿಸಲಿವೆ. ಪೊಲೀಸ್ ಕಮಿಷನರ್ ಭದ್ರತೆ ಹಾಗೂ ಮೆರವಣಿಗೆ ಉಸ್ತುವಾರಿ ವಹಿಸಲಿದ್ದಾರೆ. ಕಾರ್ಪೊರೇಷನ್ ಕಮಿಷನರ್ ದಸರಾ ವಾಹನಗಳಿಗೆ ಪಾರ್ಕಿಂಗ್ ವ್ಯವಸ್ಥೆ ಹಾಗೂ ಸ್ವಚ್ಛತೆ ನೋಡಿಕೊಳ್ಳಲಿದ್ದಾರೆ ಎಂದರು.

ಆಯುಧ ಪೂಜೆ 2022: ಕರ್ನಾಟಕದ ನಗರಗಳಲ್ಲಿ ಇಂದಿನ ಹೂವು, ಹಣ್ಣಿನ ಬೆಲೆಯನ್ನು ತಿಳಿಯಿರಿಆಯುಧ ಪೂಜೆ 2022: ಕರ್ನಾಟಕದ ನಗರಗಳಲ್ಲಿ ಇಂದಿನ ಹೂವು, ಹಣ್ಣಿನ ಬೆಲೆಯನ್ನು ತಿಳಿಯಿರಿ

9 ದಿನಗಳ ಕಾಲ ನಡೆದ ವಿವಿಧ ಕಾರ್ಯಕ್ರಮಗಳನ್ನು ಲಕ್ಷಾಂತರ ಜನ ನೋಡಿ ಸಂಭ್ರಮಿಸಿದ್ದಾರೆ. ಇಂದು ಮುಖ್ಯಮಂತ್ರಿಗಳು ಮೈಸೂರಿಗೆ ಆಗಮಿಸಲಿದ್ದು, ನಾಳಿನ ಜಂಬೂ ಸವಾರಿಯಲ್ಲಿ ಭಾಗವಹಿಸಲಿದ್ದಾರೆ. ಮಹಾರಾಣಿ ಪ್ರಮೋದಾ ದೇವಿ ಒಡೆಯರ್ ದಸರಾಗೆ ಎಲ್ಲ ರೀತಿಯ ಸಹಕಾರ ನೀಡುವುದಾಗಿ ಹೇಳಿದ್ದು, ಯಾವುದೇ ಗೊಂದಲವಿಲ್ಲ ಎಂದು ಸಚಿವರು ತಿಳಿಸಿದ್ದಾರೆ. ಪಾಸ್ ವ್ಯವಸ್ಥೆ ಸರಿಯಾಗಿದೆ. ಕೆಲವರು ಸುಮ್ಮನೆ ತೊಂದರೆ ಮಾಡುತ್ತಿದ್ದಾರೆ. ಲಕ್ಷಾಂತರ ಜನ ದಸರಾ ವೀಕ್ಷಿಸಲು ಆಗಮಿಸುತ್ತಾರೆ. ಎಲ್ಲರಿಗೂ ಪಾಸ್ ಕೊಡಲು ಸಾಧ್ಯವೇ? ಎಂದು ಸಚಿವರು ಪ್ರಶ್ನಿಸಿದ್ದಾರೆ.

ನಗರದಲ್ಲಿ ಜಂಬೂಸವಾರಿಗೆ ಸಕಲ ಸಿದ್ಧತೆ

ನಗರದಲ್ಲಿ ಜಂಬೂಸವಾರಿಗೆ ಸಕಲ ಸಿದ್ಧತೆ

ಮಾವುತರು ಮತ್ತು ಕಾವಾಡಿಗಳು ಅವರ ಕುಟುಂಬದವರಿಗೆ ಅರಮನೆ ಆವರಣದಲ್ಲಿ ಮಂಗಳವಾರ ಉಪಾಹಾರ ಬಡಿಸಿದ ಸಚಿವರು, ಅವರ ಯೋಗಕ್ಷೇಮವನ್ನು ವಿಚಾರಿಸಿದರು. ಬಳಿಕ ಮಾತನಾಡಿದ ಅವರು ಜಂಬೂಸವಾರಿ ಸಾಗುವ ರಸ್ತೆಯ ಇಕ್ಕೆಲಗಳಲ್ಲಿ ಸಾರ್ವಜನಿಕರಿಗೆ ಕುಳಿತುಕೊಳ್ಳಲು ವ್ಯವಸ್ಥೆ ಮಾಡಲಾಗಿದೆ. ಆನೆಗಳಿಗೆ ಒಂದು ತಿಂಗಳಿನಿಂದ ತರಬೇತಿ ನೀಡಲಾಗಿದೆ. ಅಕ್ಟೋಬರ್‌ 5 ಸಂಜೆಯ ವೇಳೆಗೆ ಜಂಬೂಸವಾರಿ ಸಾಗಲಿದೆ.
ಇದರ ಜೊತೆಗೆ 40 ಸ್ತಬ್ಧಚಿತ್ರಗಳು, ಕಲಾತಂಡಗಳು ಮೆರವಣಿಗೆಯಲ್ಲಿ ಸಾಗಲಿವೆ. ಬಂದೋಬಸ್ತ್‌ಗೆ ನಾಲ್ಕು ಸಾವಿರ ಪೊಲೀಸರನ್ನು ನಿಯೋಜಿಸಲಾಗಿದೆ. ವಾಹನಗಳಿಗೆ ಪ್ರತ್ಯೇಕ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಿದರು.

ಜಂಬೂಸವಾರಿಗೆ ಮುನ್ನ ಅರಮನೆಯಂಗಳದಲ್ಲಿ ವಜ್ರಮುಷ್ಠಿ ಕಾಳಗ!ಜಂಬೂಸವಾರಿಗೆ ಮುನ್ನ ಅರಮನೆಯಂಗಳದಲ್ಲಿ ವಜ್ರಮುಷ್ಠಿ ಕಾಳಗ!

ಬಾಂಬ್ ನಿಷ್ಕ್ರಿಯ ದಳದಿಂದ ತಪಾಸಣೆ

ಬಾಂಬ್ ನಿಷ್ಕ್ರಿಯ ದಳದಿಂದ ತಪಾಸಣೆ

ಈಗಾಗಲೇ ಮೆರವಣಿಗೆ ಸಾಗುವ ರಸ್ತೆ, ಪ್ರಮುಖ ಸ್ಥಳಗಳಲ್ಲಿ ಬಾಂಬ್ ನಿಷ್ಕ್ರಿಯ ದಳದ ಸಿಬ್ಬಂದಿ ತಪಾಸಣೆ ನಡೆಸಿದರು. ಲಕ್ಷಾಂತರ ಜನರು ಸೇರಬಹುದೆಂಬ ನಿರೀಕ್ಷೆಯಿರುವ ಹಿನ್ನೆಲೆಯಲ್ಲಿ ನಗರದಾದ್ಯಂತ ಬಿಗಿ ಬಂದೋಬಸ್ತ್ ಮಾಡಲಾಗಿದೆ. ಅರಮನೆಯಿಂದ ಜಂಬೂ ಸವಾರಿ ಹೊರಬರುವ ಬಲರಾಮ ಗೇಟ್ ಬಳಿ ಬಾಂಬ್ ಸ್ಕ್ವಾಡ್, ಶ್ವಾನದಳದಿಂದ ತಪಾಸಣೆ ನಡೆಸಲಾಗಿದೆ. ಕಸದ ಬುಟ್ಟಿಗಳು ಸೇರಿದಂತೆ ಪ್ರತಿಯೊಂದು ವಸ್ತುವನ್ನು ಅರಮನೆ ಮೈದಾನದಿಂದ ಬನ್ನಿಮಂಟಪವರೆಗೂ ತಪಾಸಣೆ ನಡೆಸಲಾಯಿತು. ಆಯುಧ ಪೂಜೆಗಾಗಿ ರಾಜಪರಿವಾರಕ್ಕೆ ಸೇರಿದವರು ಕೋಡಿ ಸೋಮೆಶ್ವರ ದೇಗುಲಕ್ಕೆ ಬಂದಿದ್ದು, ವಿಶೇಷ ಪೂಜೆ ನೆರವೇರಿಸಲು ಸಿದ್ಧತೆ ಮಾಡಿಕೊಂಡಿದ್ದಾರೆ. ಪಲ್ಲಕ್ಕಿಯಲ್ಲಿ ಕತ್ತಿಯಿಟ್ಟು ಜಯಮಾರ್ತಾಂಡ ದ್ವಾರದ ಮೂಲಕ ಕೋಡಿ ಸೋಮೇಶ್ವರ ದೇಗುಲಕ್ಕೆ ಕಳುಹಿಸಿದ್ದಾರೆ. ಈ ವೇಳೆ ನಾದಸ್ವರ ತಂಡ ಹಾಗೂ ರಾಜ ಪರಿವಾರದವರು ಜೊತೆಗಿದ್ದು, ಅರಮನೆಯ ಒಂಟೆ ಹಾಗೂ ಆನೆಗಳು ಗಮನ ಸೆಳೆದವು.

ರಾಜ ಪುರೋಹಿತರಿಂದ ವಿಶೇಷ ಪೂಜೆ

ರಾಜ ಪುರೋಹಿತರಿಂದ ವಿಶೇಷ ಪೂಜೆ

ಮೈಸೂರು ಅರಮನೆಯಲ್ಲಿ ಈಗಾಗಲೇ ಆಯುಧ ಪೂಜೆಯ ಪೂಜಾ ಕೈಂಕರ್ಯ ನಡೆದಿದೆ. ಆನೆ ಬಾಗಿಲು ಮೂಲಕ ಪಟ್ಟದ ಆನೆ, ಕುದುರೆ, ಹಸುಗಳು ಆಗಮಿಸಿವೆ. ಪಾರಂಪರಿಕ ಆಯುಧ ಪಲ್ಲಕ್ಕಿಯನ್ನು ರಾಜವಂಶಸ್ಥರು, ಅರಮನೆ ಸಿಬ್ಬಂದಿ ನೇತೃತ್ವದಲ್ಲಿ ತರಲಾಯಿತು. ಕೋಡಿ ಸೋಮೇಶ್ವರ ದೇಗುಲದಲ್ಲಿ ಪಾರಂಪರಿಕ ಆಯುಧಗಳನ್ನು ಅಲಂಕರಿಸಿದ ರಾಜ ಪುರೋಹಿತರು ವಿಶೇಷ ಪೂಜೆ ನೆರವೇರಿಸಿದ್ದಾರೆ. ಹೀಗೆ ಸಾಂಸ್ಕೃತಿಕ ನಗರಿಯಲ್ಲಿ ಆಯುಧ ಪೂಜೆಯ ಸಂಭ್ರಮ ಕಳೆಗಟ್ಟಿದೆ. ಬೆಳಗ್ಗೆ 6 ಗಂಟೆಯಿಂದಲೇ ಚಂಡಿ ಹೋಮದ ಕಾರ್ಯಗಳು ಆರಂಭವಾಗಿದ್ದವು. 9 ಗಂಟೆಗೆ ಚಂಡಿಹೋಮ ಪೂರ್ಣಾಹುತಿ ನಡೆಯಿತು. ಶುಭ ಮುಹೂರ್ತದಲ್ಲಿ ಯದುವೀರ ಕೃಷದತ್ತ ಚಾಮರಾಜ ಒಡೆಯರ್‌ ಅವರ ಆಯುಧಗಳಿಗೆ ಪೂಜೆ ಸಲ್ಲಿಸಲಾಯಿತು. ರಾತ್ರಿ ಈ ವರ್ಷದ ಖಾಸಗಿ ದರ್ಬಾರ್​ನ ಕೊನೆಯ ದಿನ ಆಗಿದೆ. ರಾತ್ರಿ ದೇವರ ಮನೆಯಲ್ಲಿ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಕಂಕಣ ವಿಸರ್ಜನೆ ಮಾಡಲಿದ್ದಾರೆ.

ಗಮನ ಸೆಳೆಯಲಿರುವ ಪಟ್ಟದ ಆನೆಗಳು

ಗಮನ ಸೆಳೆಯಲಿರುವ ಪಟ್ಟದ ಆನೆಗಳು

ಮೈಸೂರು ಅರಮನೆಯ ಪಟ್ಟದ ಆನೆಗಳಾದ ಭೀಮ ಮತ್ತು ಧನಂಜಯ್​ಗೆ ಭರ್ಜರಿ ಅಲಂಕಾರ ಮಾಡಲಾಗಿದೆ. ಅರಮನೆಯ ಎರಡು ಹೆಣ್ಣು ಆನೆಗಳೂ ಕೋಡಿ ಸೋಮೇಶ್ವರ ದೇವಸ್ಥಾನಕ್ಕೆ ಆಗಮಿಸಿದ್ದವು. ಪಟ್ಟದ ಆನೆಗಳ ಮೇಲೆ ಮೈಸೂರು ರಾಜಮನೆತನದ ಲಾಂಛನವಾದ ಗಂಡಬೇರುಂಡ, ಕಾಲುಗಳಿಗೆ ಎಲೆ ಬಳ್ಳಿ, ಕಿವಿಗಳಿಗೆ ಶಂಕು-ಚಕ್ರ, ಸೊಂಡಿಲಿಗೆ ಹೂ ಬಳ್ಳಿ ಚಿತ್ರಗಳನ್ನು ಮೈಸೂರು ಮೂಲದ ಕಲಾವಿದ ರಾಜು ಅವರು ಬಿಡಿಸಿದ್ದಾರೆ. ಜಂಬೂ ಸವಾರಿ ವೀಕ್ಷಣೆಗಾಗಿ ವಿದೇಶಿಯರು ಹಾಗೂ ವಿಶೇಷ ಚೇತನರಿಗೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ. ಮೈಸೂರು ಆಯುರ್ವೇದ ಕಾಲೇಜು ಬಳಿ ಹಾಕಿರುವ ಪೆಂಡಾಲ್‌ನಲ್ಲಿ ಕುಳಿತು ಇವರು ದಸರಾ ವೀಕ್ಷಿಸಲು ವ್ಯವಸ್ಥೆ ಮಾಡಲಾಗಿದೆ.

English summary
Jambu savari will be held in Mysuru tomorrow, grand preparations to Jambu savari, Know more,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X