ದರ್ಶನ್ ಸೆರೆ ಹಿಡಿದ ಫೋಟೋಗಳಿಗೆ ಭರ್ಜರಿ ರೆಸ್ಪಾನ್ಸ್: 3.75 ಲಕ್ಷ ರೂ .ಸಂಗ್ರಹ

ಮೈಸೂರು, ಮಾರ್ಚ್ 4: ಕಳೆದ 2 ದಿನಗಳಿಂದ ಮೈಸೂರಿನಲ್ಲಿ ನಡೆಯುತ್ತಿದ್ದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಫೋಟೋ ಎಕ್ಸಿಬಿಷನ್ ಗೆ ಅಭಿಮಾನಿಗಳಿಂದ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ.

ದರ್ಶನ್ ಕ್ಲಿಕ್ಕಿಸಿದ 75 ಅರಣ್ಯ ಸಂಪತ್ತು ಹಾಗೂ ಪ್ರಾಣಿಗಳ ಫೋಟೋಗಳು ಅಂದುಕೊಂಡದ್ದಿಕ್ಕಿಂತ ಹೆಚ್ಚು ಮಾರಾಟವಾಗಿವೆ. ಮೂರು ದಿನಗಳಲ್ಲಿ 3,75,000ರೂ ಹಣ ಸಂಗ್ರಹವಾಗಿದೆ. ಅರಣ್ಯ ಸಂರಕ್ಷಣಾ ನಿಧಿಗಾಗಿ ದರ್ಶನ್ ತಮ್ಮ ಫೋಟೋಗಳನ್ನು ಮಾರಾಟಕ್ಕೆ ಇಟ್ಟಿದ್ದರು.

ಮೈಸೂರಿನ ಸಂದೇಶ್ ದಿ ಪ್ರಿನ್ಸ್ ಹೋಟೆಲ್ ನಲ್ಲಿ ಮೂರು ದಿನಗಳ ಕಾಲ ದರ್ಶನ್ ಫೋಟೋಗಳ ಎಕ್ಸಿಬಿಷನ್ ಕಾರ್ಯಕ್ರಮ ಆಯೋಜಿಸಲಾಗಿತ್ತು. ವಿಶ್ವ ವನ್ಯಜೀವಿ ದಿನದ ಅಂಗವಾಗಿ ಈ ಎಕ್ಸಿಬಿಷನ್ ಆಯೋಜಿಸಲಾಗಿತ್ತು.

Darshans Photo Exhibition has received a huge response from fans

'ಲೈಫ್ ಆನ್ ದಿ ವೈಲ್ಡ್ ಸೈಡ್' ಹೆಸರಿನಲ್ಲಿ ದರ್ಶನ್ ಅರಣ್ಯದಲ್ಲಿ ಸೆರೆ ಹಿಡಿದಿರುವ ಛಾಯಾಚಿತ್ರಗಳ ಪ್ರದರ್ಶನ ಆಯೋಜನೆಗೊಂಡಿತ್ತು. ಎಕ್ಸಿಬಿಷನ್ ನಲ್ಲಿ ದರ್ಶನ್ ಕಾಡಿನಲ್ಲಿ ಸೆರೆಹಿಡಿದಿದ್ದ 75 ಛಾಯಾಚಿತ್ರಗಳ ಪ್ರದರ್ಶನ ಮಾರಾಟ ನಡೆದಿತ್ತು.

ದರ್ಶನ್ ಅವರು ಪ್ರದರ್ಶನದ ಬಳಿಕ ಖುದ್ದು ಅಲ್ಲಿಯೇ ಉಳಿದುಕೊಂಡು ಅಲ್ಲಿ ಬರುವ ಅಭಿಮಾನಿಗಳಿಗೆ ತಮ್ಮ ಫೋಟೋಗಳಿಗೆ ಆಟೋಗ್ರಾಫ್ ನೀಡುತ್ತಿದ್ದದ್ದು ವಿಶೇಷವಾಗಿತ್ತು. ಛಾಯಾಚಿತ್ರಗಳ ಮಾರಾಟದಿಂದ ಬಂದ ಹಣ ವನ್ಯಜೀವಿ ಸಂರಕ್ಷಣಾ ನಿಧಿಗೆ ಬಳಕೆಯಾಗಲಿದೆ. ಅಂದಹಾಗೆ ಅರಣ್ಯ ಇಲಾಖೆ ಸಹಯೋಗದಲ್ಲಿ ಛಾಯಾಚಿತ್ರ ಪ್ರದರ್ಶನ ಆಯೋಜನೆಗೊಂಡಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+