ಚಾಲೆಂಜಿಂಗ್ ಸ್ಟಾರ್ ದರ್ಶನ್ ಗೆ ಸುತ್ತೂರು ದನಗಳ ಜಾತ್ರೆ ಅಂದ್ರೆ ಬಹಳ ಇಷ್ಟ...
ಮೈಸೂರು, ಫೆಬ್ರವರಿ 03:ನನಗೆ ಸುತ್ತೂರು ದನಗಳ ಜಾತ್ರೆ ಇಷ್ಟ. ಆದರೆ ಜನರೇ ನನ್ನನ್ನು ನೋಡಲು ಬಿಡುವುದಿಲ್ಲ ಎಂದು ಚಾಲೆಂಜಿಂಗ್ ಸ್ಟಾರ್ ದರ್ಶನ್ ತಿಳಿಸಿದರು.
ಪ್ರತಿಷ್ಠಿತ ಸುತ್ತೂರು ಜಾತ್ರಾ ಮಹೋತ್ಸವದ ಹಿನ್ನೆಲೆಯಲ್ಲಿ ಭಜನಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ದರ್ಶನ್, ಇಂದು ನಿಮ್ಮ ಒಂದು ಡಿಗ್ರಿ ಒಂದು ಕೋಟಿಗೆ ಸಮಾನ. ವಿದ್ಯೆ ಇಲ್ಲದ ಕಷ್ಟ ಏನೂ ಅಂತ ನನಗೆ ಗೊತ್ತಿದೆ. ಯಾರೂ ಎರಡು ದೋಣಿ ಮೇಲೆ ಕಾಲಿಡಬೇಡಿ ಎಂದು ಕಿವಿ ಮಾತು ಹೇಳಿದರು.
ನಾನು ಜೆಎಸ್ಎಸ್ ವಿದ್ಯಾರ್ಥಿ. ಜೆಎಸ್ಎಸ್ ಪಾಲಿಟೆಕ್ನಿಕ್ ನಲ್ಲಿ ಡಿಪ್ಲೊಮೊ ಮಾಡಿದೆ. ಆದರೆ ನನ್ನ ಯೋಗ್ಯತೆ ಇದ್ದದ್ದೆ 6 ತಿಂಗಳು. ಅಷ್ಟು ಓದಿ, ನಾನು ವಾಪಸ್ ಬಂದೆ. ನನ್ನ ತಂದೆಯ ಅನಾರೋಗ್ಯದ ಸಂದರ್ಭದಲ್ಲಿ ಜೆಎಸ್ಎಸ್ ಆಸ್ಪತ್ರೆ ನನಗೆ ತುಂಬಾ ಸಹಾಯ ಮಾಡಿದೆ. ಹೀಗಾಗಿ ಸುತ್ತೂರು ಮಠ ನನಗೆ ಅತಿ ಹತ್ತಿರದ ಮಠ ಎಂದು ತಿಳಿಸಿದರು.

ನಾನು ಸಣ್ಣಪುಟ್ಟ ಪಾತ್ರ ಮಾಡಿದಕ್ಕೆ ಇಲ್ಲಿ ತಂದು ಕೂರಿಸಿದ್ದೀರಿ. ನಿಮ್ಮ ಪ್ರೀತಿ, ಅಭಿಮಾನ ಹೀಗೆ ಇರಲಿ. ಆದರೆ ನಾನೊಬ್ಬ ಕಾಮನ್ ಮ್ಯಾನ್ ಆಗಿದ್ದರೆ ಸುತ್ತೂರು ಜಾತ್ರೆಯಲ್ಲಿ ಆರಾಮಾಗಿ ಓಡಾಡುತ್ತಿದ್ದೆ. ಸೆಲೆಬ್ರಿಟಿ ಆಗಿರುವ ಕಾರಣ ನೀವು ನನ್ನನ್ನು ಓಡಾಡಲು ಬಿಡೊಲ್ಲ ಎಂದರು.

ಇದೇ ವೇಳೆ ಕಾರ್ಯಕ್ರಮದ ವೇದಿಕೆ ಆಗಮಿಸಿದ ಮಾಜಿ ಸಿಎಂ ಸಿದ್ದರಾಮಯ್ಯ ಅವರ ಕಾಲಿಗೆ ನಮಸ್ಕರಿಸಿದ ದರ್ಶನ್ ಆಶೀರ್ವಾದ ಪಡೆದು ಸರಳತೆ ಮೆರೆದರು.












Click it and Unblock the Notifications