ಐಟಿ ದಾಳಿ ಬಳಿಕ ಮೊದಲ ಬಾರಿಗೆ ಮಾವನ ಮನೆಗೆ ಡಿಕೆಶಿ
ಮೈಸೂರು, ಆಗಸ್ಟ್ 30 : ಐಟಿ ದಾಳಿ ಬಳಿಕ ಇಂಧನ ಸಚಿವ ಡಿ.ಕೆ ಶಿವಕುಮಾರ್ ಮೊದಲ ಬಾರಿಗೆ ಮೈಸೂರಿನ ತನ್ನ ಮಾವನ ಮನೆಗೆ ಭೇಟಿ ನೀಡಿದರು. ಮೈಸೂರಿನ ಇಟ್ಟಿಗೆಗೂಡಿನಲ್ಲಿರುವ ಮಾವ ತಿಮ್ಮಯ್ಯ ಅವರ ನಿವಾಸಕ್ಕೆ ಆಗಮಿಸಿದ ಸಚಿವ ಡಿಕೆ ಶಿವಕುಮಾರ್ ಅಲ್ಲಿ ತನ್ನ ಮಾವನ ಜತೆ ಅರ್ಧ ಗಂಟೆಗೂ ಹೆಚ್ಚು ಕಾಲ ಮಾತುಕತೆ ನಡೆಸಿದರು.
Recommended Video

IT Raid Continues DK Shivakumar Followers House | Oneindia Kannada
ಇತ್ತೀಚೆಗಷ್ಟೆ ಸಚಿವ ಡಿಕೆ ಶಿವಕುಮಾರ್, ಮಾವ ತಿಮ್ಮಯ್ಯ ಅವರ ಮೈಸೂರಿನ ನಿವಾಸ, ಆಪ್ತರ ಮನೆ ಮೇಲೆ ಐಟಿ ದಾಳಿ ನಡೆಸಿತ್ತು. ಅಪಾರ ಪ್ರಮಾಣದ ದಾಖಲೆಗಳನ್ನ ವಶಪಡಿಸಿಕೊಂಡಿದ್ದ ಐಟಿ ಅಧಿಕಾರಿಗಳು ದಾಖಲೆ ಪರಿಶೀಲನೆ ನಡೆಸಿದ್ದರು.

ನಂತರ ಬೆಂಬಲಗರು ಹಾಗೂ ಕಾಯ೯ಕತ೯ರೊಡನೆ ಮಾತನಾಡಿದ ಅವರು, ಯಾರು ಏನು ಮಾಡಿದರು ಸತ್ಯದ ಪರ ಜಯವಿದೆ. ಅವರ ಕೆಲಸ ಮಾಡಿ ಅವರು ಹೋಗಿದ್ದಾರೆ. ನಮ್ಮ ಕೆಲಸ ನಾವು ಮಾಡೋಣ. ನನ್ನ ಪರವಾಗಿ ಪ್ರಾಥಿ೯ಸಿದ ಪ್ರತಿಯೊಬ್ಬರಿಗೂ ಧನ್ಯವಾದ ಅಪಿ೯ಸುತ್ತೇನೆ ಎಂದರು.












Click it and Unblock the Notifications