ನಂಜನಗೂಡಿನ ಮೊದಲ ಕೊರೊನಾ ಸೋಂಕಿತ ಇಂದು ಡಿಸ್ಚಾರ್ಜ್
ಮೈಸೂರು, ಏಪ್ರಿಲ್ 10: ಮೈಸೂರು ಜಿಲ್ಲೆಯ ನಂಜನಗೂಡಿನ ಜ್ಯುಬಿಲಿಯಂಟ್ ಕಾರ್ಖಾನೆಯ ಮೊದಲ ಪಾಸಿಟಿವ್ ವ್ಯಕ್ತಿ ಡಿಸ್ಚಾರ್ಜ್ ಆಗಿದ್ದಾರೆ. ಸಂಪೂರ್ಣ ಗುಣಮುಖವಾದ ಹಿನ್ನೆಲೆಯಲ್ಲಿ ಬಿಡುಗಡೆ ಮಾಡಲಾಗಿದೆ.
ಮೇಟಗಳ್ಳಿಯ ಕೋವಿಡ್ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ಇದು ಮೈಸೂರು ಜಿಲ್ಲೆಗೆ ನಿಟ್ಟುಸಿರು ಬಿಡುವ ಸುದ್ದಿಯಾಗಿದೆ. ಡಿಸ್ಚಾರ್ಜ್ ಆದ ವ್ಯಕ್ತಿಗೆ ಇನ್ನು 14 ದಿನ ಹೋಮ್ ಕ್ವಾರಂಟೈನ್ ನಲ್ಲಿ ಇರಲು ವೈದ್ಯಾಧಿಕಾರಿಗಳು ಸಲಹೆ ನೀಡಿದ್ದಾರೆ.
ಅಧಿಕಾರಿಗಳಿಗೆ ಮುಚ್ಚಳಿಕೆ ಬರೆದುಕೊಟ್ಟು ವ್ಯಕ್ತಿ ಬಿಡುಗಡೆ ಹೊಂದಿದ್ದಾನೆ. ಜ್ಯುಬಿಲಿಯಂಟ್ ಕಾರ್ಖಾನೆ ಪ್ರಕರಣಗಳ ಪೈಕಿ ಈ ವ್ಯಕ್ತಿ ಮೊದಲ ಪ್ರಕರಣವಾಗಿದ್ದನು. ರಾಜ್ಯ ಸರ್ಕಾರ ಪೇಸೆಂಟ್ ನಂ. 52 ಎಂದು ಗುರುತಿಸಿತ್ತು.

ಆತನ ಪತ್ನಿ, ಮಾವ ಕೂಡ ಪಾಸಿಟಿವ್ ಆಗಿದ್ದು, ಈಗಲೂ ಐಸೋಲೇಷನ್ ಆಸ್ಪತ್ರೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದಾರೆ. ಈತನ ಸಂಪರ್ಕದಲ್ಲಿದ್ದ ಹಲವರು ಪಾಸಿಟಿವ್ ಮತ್ತು ಕ್ವಾರಂಟೈನ್ ಇದ್ದಾರೆ.












Click it and Unblock the Notifications