ಹಳೇ ವಿದ್ಯಾರ್ಥಿನಿ ಜೊತೆ ನಂಜನಗೂಡು ಶಿಕ್ಷಕನ ರಾಸಲೀಲೆ; ಯುವತಿ ತಾಯಿಯಿಂದ ದೂರು

ಮೈಸೂರು, ಮಾರ್ಚ್ 14: ಈಚೆಗಷ್ಟೆ ನಂಜನಗೂಡಿನ ಶಿಕ್ಷಕ ತನ್ನ ಹಳೇ ವಿದ್ಯಾರ್ಥಿನಿ ಜೊತೆ ರಾಸಲೀಲೆ ನಡೆಸಿದ್ದ ಚಿತ್ರಗಳು ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿದ್ದವು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿಕ್ಷಣ ಇಲಾಖೆಯು ಆರೋಪಿ ಶಿಕ್ಷಕ ಸಿದ್ದರಾಜುವನ್ನು ಕೆಲಸದಿಂದ ಅಮಾನತ್ತು ಮಾಡಿತ್ತು.

ಇದೀಗ ಆ ವಿದ್ಯಾರ್ಥಿನಿಯ ತಾಯಿಯಿಂದ ದೂರು ದಾಖಲಾಗಿದೆ. ಯುವತಿಯ ತಾಯಿ ನಂಜನಗೂಡು ಡಿವೈಎಸ್ಪಿಗೆ ಮಗಳನ್ನು ಹುಡುಕಿಕೊಡಿ ಎಂದು ಮನವಿ ಮಾಡಿದ್ದಾರೆ.

ಸಿದ್ದರಾಜು ಕುಟುಂಬಸ್ಥರಿಂದ ತಮಗೆ ಜೀವ ಬೆದರಿಕೆ ಕೂಡ ಇದ್ದು, ತಮಗೆ ಮತ್ತು ಕುಟುಂಬಕ್ಕೆ ಸೂಕ್ತ ರಕ್ಷಣೆ ಒದಗಿಸುವಂತೆಯೂ ಕೋರಿದ್ದಾರೆ. ತಮ್ಮ ಮಗಳ ವಿಚಾರವಾಗಿ ದೂರು ನೀಡಲು ವಿಳಂಬವಾಗಿರುವುದಕ್ಕೆ ಸಿದ್ದರಾಜು ಕುಟುಂಬಸ್ಥರೇ ಕಾರಣ ಎಂದೂ ಅವರು ದೂರಿದ್ದಾರೆ.

Complaint Against Nanjanagudu Teacher Whose Photo Viral With Old Student

"ಆ ಫೋಟೊಗಳು ಎಲ್ಲೆಲ್ಲೂ ಕಾಣಿಸಿಕೊಂಡಿದ್ದ ನಂತರ ನನ್ನ ಮಗಳು ನಾಪತ್ತೆ ಆಗಿದ್ದಾಳೆ. ಆರೋಪಿಯು ಮಗಳನ್ನು ಕರೆತರುತ್ತೇನೆ, ನೀನು ದೂರು ನೀಡಬೇಡ ಅಂದಿದ್ದರು. ಹೀಗಾಗಿ ನಾನು ದೂರು ನೀಡಲು ಹಿಂದೇಟು ಹಾಕಿದ್ದೆ. ಅವರು ಅಮಾನತ್ತು ಆಗಿರುವುದು ಮುಖ್ಯ ಅಲ್ಲ, ನನಗೆ ನನ್ನ ಮಗಳು ಬೇಕು" ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಆರೋಪಿ ಶಿಕ್ಷಕ ಸಿದ್ದರಾಜು ನಂಜನಗೂಡು ತಾಲೂಕಿನ ರಾಂಪುರ ಗ್ರಾಮದವನಾಗಿದ್ದು, ಈತ ಯುವತಿಯೊಂದಿಗಿದ್ದ ಖಾಸಗಿ ಫೋಟೊಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದವು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+