ವಿವಾದಿತ 'ನಾನು ಕನ್ನಂಬಾಡಿ ಕಟ್ಟೆ' ಆತ್ಮಕಥೆ ಪುಸ್ತಕ ಬಿಡುಗಡೆ
ಮೈಸೂರು, ಜೂನ್ 04 : ವಿವಾದದ ನಡುವೆಯೂ ಇತಿಹಾಸ ತಜ್ಞ ಪ್ರೊ. ಪಿ.ವಿ. ನಂಜರಾಜ ಅರಸ್ ಬರೆದ 'ನಾನು ಕನ್ನಂಬಾಡಿ ಕಟ್ಟೆ' ಹೀಗೊಂದು ಆತ್ಮಕಥೆ ಪುಸ್ತಕವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭಾನುವಾರ ಮೈಸೂರಿನ ರಾಣಿ ಬಹದ್ದೂರು ಸಭಾಂಗಣದಲ್ಲಿ ಬಿಡುಗಡೆ ಮಾಡಿದರು.
ಬಳಿಕ ಮಾತನಾಡಿದ ಸಿದ್ದರಾಮಯ್ಯ ಅವರು, "ಅಣೆಕಟ್ಟು ಕಟ್ಟಲು ವಿಳಂಬಕ್ಕೆ ಕಾರಣ, ನಾಲ್ವಡಿ ಅವರ ಜನಪರ ತೀರ್ಮಾನ, ಎಂಜಿನಿಯರ್ಗಳ ಕಾರ್ಯ ಇತ್ಯಾದಿ ಪುಸ್ತಕದಲ್ಲಿ ಮಾಹಿತಿಯಿ ಇದೆ ನಾನು ಪುಸ್ತಕವನ್ನ ಪೂರ್ಣ ಓದಿಲ್ಲ. ಗ್ಲಾನ್ಸ್ ಮಾಡಿದ್ದೇನೆ" ಎಂದರು.[ಜೂ. 4ರಂದು ನಾನು ಕನ್ನಂಬಾಡಿ ಕಟ್ಟೆ-ಹೀಗೊಂದು ಆತ್ಮಕಥೆ ಪುಸ್ತಕ ಬಿಡುಗಡೆ]
ಆದರೆ, ನಾನು ಸಂಪೂರ್ಣ ಓದುತ್ತೇನೆ. ಪುಸ್ತಕ ಬರೆಯಲು ಕಾರಣ ಕಾರ್ಯಕ್ರಮದಲ್ಲಿ ನಡೆದ ಘಟನೆ. ಆ ದಿನ ಸರಿಯಾಗಿ ಮಾಹಿತಿ ನೀಡಿರಲಿಲ್ಲ. ಆ ಕಾರಣದಿಂದ ಪುಸ್ತಕ ಬರೆಯಲು ಪ್ರೇರಣೆ ಬಂತು.

ಒಂದು ಅಣೆಕಟ್ಟಿನ ಇತಿಹಾಸ, ಸತ್ಯ ಗೊತ್ತಾಗಬೇಕು. ಅದಕ್ಕೆ ಅವರು ಬಹಳ ಶ್ರಮಪಟ್ಟು, ಸಂಗ್ರಹಿಸಿ ಬರೆದಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
1911 ರಿಂದ 1931 ರವರೆಗೆ ಕನ್ನಂಬಾಡಿ ಕಟ್ಟೆ ಕಟ್ಟಲಾಗಿದೆ. ಅಂದೆಯೇ ಮದ್ರಾಸ್ ರಾಜ್ಯ ಇದಕ್ಕೆ ಕ್ಯಾತೆ ತೆಗೆದಿತ್ತು. ಅದರ ಸಮಗ್ರ ವಿವಾರ ಈ ಕೃತಿಯಲ್ಲಿದೆ.
ಕನ್ನಂಬಾಡಿ ಕಟ್ಟೆ ಬಗ್ಗೆ ನನಗೂ ತಿಳಿಯುವ ಆಸಕ್ತಿ ಇದೆ . ಇತಿಹಾಸದ ಕುರಿತಾದ ನಿಜವಾದ ಸತ್ಯ ಜನರಿಗೆ ತಿಳಿಯಬೇಕಿದೆ. ಕಾವೇರಿ ನದಿ ವಿವಾದದ ಬಗ್ಗೆ ಕೂಡ ಪುಸ್ತಕದಲ್ಲಿ ಉಲ್ಲೇಖ ಮಾಡಲಾಗಿದೆ.

ರಾಜ್ಯಕ್ಕೆ ಮಾರಕವಾದ 2 ಒಪ್ಪಂದದ ಕುರಿತು ಪುಸ್ತಕದಲ್ಲಿ ತಿಳಿಸಿದೆ. ಕನ್ನಂಬಾಡಿ ಕಟ್ಟೆ ಕುರಿತಾಗಿ ವ್ಯಾಜ್ಯ ಹುಟ್ಟಿ ಹಾಕಿದ್ದೇ ಬ್ರಿಟಿಷ್ ಸರಕಾರ.
1892, 1934 ರಲ್ಲಿ ಬ್ರಿಟಿಷ್ ಸರಕಾರ ತಂದ ಕಟ್ಟಳೆಗಳು ರಾಜ್ಯ ಸರಕಾರಕ್ಕೆ ಮೋಸವಾಗಿದೆ. ಅಂದು ಆದ ಅನ್ಯಾಯ ಇಂದಿಗೂ ಸರಿಹೋಗಿಲ್ಲ ಎಂದರು.
ಇತ್ತ ಪುಸ್ತಕ ವಿರೋಧಿಸಿ ಪ್ರತಿಭಟನೆ :ಕನ್ನಂಬಾಡಿ ಕಟ್ಟಿದವರಲ್ಲಿ ವಿಶ್ವೇಶ್ವರಯ್ಯ ಅವರ ಶ್ರಮ ಕಡಿಮೆ. ಅದರ ಹಿಂದೆ ಹಲವರ ಶ್ರಮವಿದೆ. ಅದನ್ನ ಇತಿಹಾಸದ ಪುಟದಲ್ಲಿ ಮುಚ್ಚಿ ಹಾಕಲಾಗಿದೆ ಎಂಬ ಉಲ್ಲೇಖ ಪುಸ್ತಕದಲ್ಲಿದೆ. ಹೀಗಾಗಿ ಈ ಪುಸ್ತಕ ಬಿಡುಗಡೆಗೆ ಮುನ್ನವೇ ವಿವಾದ ಎಬ್ಬಿಸಿತ್ತು.
ಈ ನಡುವೆ ಮೈಸೂರಿನ ಜಿಲ್ಲಾಧಿಕಾರಿ ಕಚೇರಿ ಎದುರು ವಿಶ್ವೇಶ್ವರಯ್ಯ ಅಭಿಮಾನಿಗಳಿಂದ ಪ್ರತಿಭಟನೆಗೆ ಸಿದ್ಧತೆ ನಡೆಸಲಾಗಿತ್ತು. ಆದರೆ, ಪೊಲೀಸರ ಅನುಮತಿ ಇಲ್ಲದ ಕಾರಣ ಪ್ರತಿಭಟನೆ ಮೊಟಕುಗೊಳಿಸಲಾಯಿತು.
-
Karnataka Weather Mar 12: ಬಿಸಿಲು ಹೆಚ್ಚಳದ ನಡುವೆ ಮಾರ್ಚ್ 15ರಿಂದ ಕರ್ನಾಟಕದಲ್ಲಿ ಮಳೆ, ಹೇಗಿದೆ ಇಂದಿನ ವೆದರ್ -
Gold Rate March 12: ಚಿನ್ನದ ಬೆಲೆ 10,900 ರೂ., ಬೆಳ್ಳಿ ಬೆಲೆ 10,000 ರೂ. ಭರ್ಜರಿ ಇಳಿಕೆ, ಬಂಗಾರ ಪ್ರಿಯರು ಫಿದಾ -
ಇರಾನ್ ಪರಮಾಣು ವಿಜ್ಞಾನಿ ಕಥೆ ಮುಗಿಸಿದ ಇಸ್ರೇಲ್, ಮತ್ತಷ್ಟು ತಿಕ್ಕಾಟ ಶುರು | Operation Roaring Lion -
ಹೊಸೂರು ವಿಮಾನ ನಿಲ್ದಾಣ: ಬೆಂಗಳೂರು ಸಮೀಪ 2,979 ಎಕರೆ ಭೂಮಿ ಸ್ವಾಧೀನ; ಕನ್ನಡದಲ್ಲೇ ಮಾತನಾಡಿದ ತಮಿಳುನಾಡು ಶಾಸಕ -
Bengaluru Property Sale: ಬೆಂಗಳೂರಲ್ಲಿ 50 ಆಸ್ತಿದಾರರಿಗೆ ತಮ್ಮ ಆಸ್ತಿಯನ್ನೇ ಕಳೆದುಕೊಳ್ಳುವ ಆತಂಕ: ಜಿಬಿಎ ಹೇಳಿದ್ದೇನು -
ಭಾರತೀಯ ಸೇನೆಯನ್ನ ಅಪಹಾಸ್ಯ ಮಾಡಿದ್ದ ಪಾಕ್ ಆಟಗಾರನಿಗೆ 2.34 ಕೋಟಿ ಆಫರ್; ಕಾವ್ಯಾ ಮಾರನ್ ವಿರುದ್ಧ ಭುಗಿಲೆದ್ದ ಆಕ್ರೋಶ -
ಒಣ ಮೆಣಸಿನಕಾಯಿ ಬಳಸುವ ಮುನ್ನ ಈ ಕೆಲಸ ಮಾಡಿದ್ದೀರಾ? ಆರೋಗ್ಯ ಕಾಪಾಡಲು ಇಲ್ಲಿದೆ ಸೂಪರ್ ಐಡಿಯಾ -
Rashmika Mandanna: ಆ ಆಡಿಯೋ, ವಿಷಯವನ್ನ 24 ಗಂಟೆಯೊಳಗೆ ಡಿಲೀಟ್ ಮಾಡದಿದ್ದರೆ ಕಾನೂನು ಕ್ರಮ ಎಂದ ರಶ್ಮಿಕಾ ಮಂದಣ್ಣ -
Bengaluru: ಬೆಂಗಳೂರಿನ ಹೋಟೆಲ್ಗಳಲ್ಲಿ ಗ್ರಾಹಕರಿಗೆ ಶಾಕ್: ಸಾಂಬಾರ್ ಬದಲು ಬೇರೆ ಆಯ್ಕೆ - ಪೋಸ್ಟ್ ವೈರಲ್, ಡಿಸಿ ಹೇಳಿದ್ದೇನು -
Sulekere: ಮಂಡ್ಯದಲ್ಲಿ ಸೂಳೇಕೆರೆ ಮರುನಾಮಕರಣ ಚರ್ಚೆ: ಇತಿಹಾಸಕ್ಕೆ ಮಸಿ ಬಳಿಯಬೇಡಿ ಎಂದ ಜಗದೀಶ್ ಕೊಪ್ಪ -
ವಿಶ್ವಗುರು ಬಸವಣ್ಣ ಮತ್ತು ಅಕ್ಕಮಹಾದೇವಿ ಬಗ್ಗೆ ಅವಹೇಳನಕಾರಿ ಪೋಸ್ಟ್: ಆರೋಪಿ ಬಂಧನಕ್ಕೆ ಆಗ್ರಹ -
Horoscope March 12: ಗುರುವಾರ ದ್ವಾದಶ ರಾಶಿಗಳ ಫಲಾಫಲ ಹೇಗಿದೆ, ಇಲ್ಲಿದೆ ದಿನ ಭವಿಷ್ಯ












Click it and Unblock the Notifications