ಮೈಸೂರು ದಸರಾ ಜಂಬೂ ಸವಾರಿಗೆ ಪ್ರಧಾನಿ ಮೋದಿ ಕರೆತರಲು ಪ್ಲಾನ್!
ಬೆಂಗಳೂರು, ಸೆಪ್ಟೆಂಬರ್ 15: ನಾಡಹಬ್ಬ ದಸರಾ ಸಮೀಪಿಸುತ್ತಿದ್ದಂತೆ ರಾಜಕೀಯ ಲೆಕ್ಕಾಚಾರಗಳ ಜೊತೆಗೆ ಅದ್ದೂರಿ ಮೈಸೂರು ದಸರಾ ಆಚರಣೆಗೆ ರಾಜ್ಯ ಸರ್ಕಾರ ಸಜ್ಜಾಗಿದೆ. ರಾಷ್ಟ್ರಪತಿ ದ್ರೌಪತಿ ಮುರ್ಮುರಿಂದ ದಸರಾ ಉದ್ಘಾಟನೆ ನಡೆಯುತ್ತಿದ್ದರೆ. ಪ್ರಧಾನಿ ಮೋದಿಯವರನ್ನು ಜಂಬೂ ಸವಾರಿಗೆ ಕರೆಸಲು ಚಿಂತನೆ ನಡೆದಿದೆ.
ಪ್ರಧಾನಿ ಮೋದಿ ರಾಜ್ಯಕ್ಕೆ ತಿಂಗಳಿಗೊಮ್ಮೆ ಬರುವುದಾಗಿ ತಿಳಿಸಿದ್ದಾರೆ. ಈ ವಿಚಾರವನ್ನು ಗಮನದಲ್ಲಿಟ್ಟುಕೊಂಡು ಮೋದಿಯವರನ್ನು ದಸರಾದ ಜಂಬೂ ಸವಾರಿಗೆ ಕರೆತರುವ ಮೂಲಕ ಧಾರ್ಮಿಕವಾಗಿಯೂ ರಾಜಕೀಯವಾಗಿಯೂ ಲಾಭವನ್ನು ಮಾಡಿಕೊಳ್ಳಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ಲಾನ್ ಮಾಡಿದ್ದಾರೆ ಎನ್ನಲಾಗುತ್ತಿದೆ.
ಪ್ರಧಾನಿ ನರೇಂದ್ರ ಮೋದಿಯರಿಗೆ ವಿಶೇಷ ಆಹ್ವಾನವನ್ನು ನೀಡುವ ಮೂಲಕ ಮೈಸೂರಿಗೆ ಕರೆತರುವ ಯತ್ನವನ್ನು ಸಿಎಂ ಮಾಡುತ್ತಿದ್ದಾರೆ. ಮೈಸೂರು ಕೊಡಗು ಲೋಕಸಭಾ ಕ್ಷೇತ್ರದಲ್ಲಿ ಸಂಸದ ಪ್ರತಾಪ್ ಸಿಂಹ ಸದಸ್ಯರಾಗಿದ್ದು ಇವರೂ ಸಹ ಮೋದಿಯವರನ್ನು ಮೈಸೂರಿಗೆ ಕರೆತರುವ ಮೂಲಕ ಮುಂದಿನ ವಿಧಾನ ಸಭೆ ಮೈಸೂರಿನಲ್ಲಿ ಜನರನ್ನು ಸೆಳೆಯುವ ಯತ್ನವನ್ನು ಮಾಡುತ್ತಿದ್ದಾರೆ. ಬಿಜೆಪಿ ಜನಸ್ಪಂದನಕ್ಕೆ ಪ್ರಮುಖ ಹೈಕಮಾಂಡ್ ಬರಲಿಲ್ಲ ಎಂಬ ಕೊರತೆಯನ್ನು ನೀಗಿಸುವ ಯತ್ನವನ್ನು ಮೈಸೂರು ದಸರಾ ಮೂಲಕ ನೆರೆವೇರಿಸಿಕೊಳ್ಳಲು ಪ್ರಯತ್ನವನ್ನು ಮಾಡಲಾಗುತ್ತಿದೆ.

ಸೆಪ್ಟೆಂಬರ್ 26 ರಂದು ದಸರಾ ಉದ್ಘಾಟನೆ
ಜಗದ್ವಿಖ್ಯಾತ ಮೈಸೂರು ದಸರಾ ಈ ಬಾರಿ ಸೆಪ್ಟೆಂಬರ್ 26 ರಂದು ಸೋಮವಾರದಿಂದ ಆರಂಭ ಆಗಲಿದೆ. ಈ ಹಿನ್ನೆಲೆಯಲ್ಲಿ ದಸರಾ ಉದ್ಘಾಟನೆಗೆ ಸಂಬಂಧಿಸಿದಂತೆ ಯಾರನ್ನು ಆಹ್ವಾನಿಸುವುದು ಎಂಬುದರ ಬಗ್ಗೆ ಸಭೆ ನಡೆದಿತ್ತು. ಆ ಸಭೆಯ ಬಳಿಕ ರಾಷ್ಟ್ರಪತಿ ಅವರಿಗೆ ಪತ್ರ ಬರೆಯಲಾಗಿತ್ತು. ನಮ್ಮ ಪತ್ರಕ್ಕೆ ರಾಷ್ಟ್ರಪತಿಗಳು ಸಮ್ಮತಿಸಿದ್ದರು . ಈ ಬಾರಿ ರಾಷ್ಟ್ರದ ಪ್ರಥಮ ಪ್ರಜೆ ದಸರಾ ಉದ್ಘಾಟನೆ ಮಾಡಲಿದ್ದಾರೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಪ್ರಕಟಿಸಿದ್ದರು. ಇದರಿಂದಲೂ ರಾಜಕೀಯ ಲಾಭದ ಲೆಕ್ಕಾಚಾರದಲ್ಲಿ ಬಿಜೆಪಿ ಪಕ್ಷವಿದೆ. ಪ್ರಥಮ ಪ್ರಜೆಯು ಬುಡಕುಟ್ಟು ಪರಿಶಿಷ್ಟ ಜನಾಂಗ ಸೇರಿದವರಾಗಿರುವುದರಿಂದ ರಾಜಕೀಯ ಲಾಭವಾಗುವ ಸಾಧ್ಯತೆಯನ್ನು ಲೆಕ್ಕಾಚಾರ ಹಾಕಲಾಗಿದೆ.

ಮೋದಿ ಬಂದರೆ ರಾಜಕಾಯ ಲಾಭ ಗ್ಯಾರಂಟಿ
ಮೈಸೂರು ದಸರಾ ವೇಳೆಯಲ್ಲಿ ಅತ್ಯಂತ ವಿಜೃಂಭಣೆಯಿಂದ ನಡೆಯುವುದು ಜಂಭು ಸವಾರಿ. ತಾಯಿ ಚಾಮುಂಡೇಶ್ವರಿಯ ವಿಗ್ರಹವನ್ನು ಸಾಗುವ ಆನೆಗಳನ್ನು ನೋಡುವುದು ಅದ್ದೂರಿ ಮತ್ತು ಆಕರ್ಷಣೆಯ ಕ್ಷಣವಾಗಿದೆ. ಇಂಥಾ ಅದ್ದೂರಿ ಆಚರಣೆಯ ವೇಳೆಯಲ್ಲಿ ಪ್ರಧಾನಿ ಮೋದಿಯವರನ್ನು ಕರೆತಂದರೆ ಬಿಜೆಪಿಗೆ ರಾಜಕೀಯ ಲಾಭವಾಗುವುದು ಗ್ಯಾರಂಟಿ ಎನ್ನಲಾಗಿದೆ. ಇದಕ್ಕಾಗಿಯೇ ಮೋದಿಯವರನ್ನು ಜಂಭುಸವಾರಿಗೆ ಕರೆತರಲು ಸಿಎಂ ಪ್ರಯತ್ನಿಸುತ್ತಿದ್ದಾರೆ ಎನ್ನಲಾಗುತ್ತಿದೆ.

ಮೋದಿಯನ್ನು ದಸರಾಗೆ ಕರೆತರುವ ಮೂಲಕ ಸಂದೇಶ
ಬಿಜೆಪಿ ಮುಂದಿನ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಸೆ.10ಕ್ಕೆ ದೊಡ್ಡಬಳ್ಳಾಪುರದಲ್ಲಿ ಸಾಧನೆಯನ್ನು ಬಿಂಬಿಸಲು ಜನಸ್ಪಂದನ ಕಾರ್ಯಕ್ರಮವನ್ನು ಮಾಡಿದ್ದರು. ಆದರೆ ಮೂರು ಸಲ ಮುಂದೂಡಿಕೆಯಾಗಿದ್ದ ಕಾರ್ಯಕ್ರಮಕ್ಕೆ ಪ್ರಧಾನಿ ನರೇಂದ್ರ ಮೋದಿಯಾಗಲಿ ಗೃಹ ಸಚಿವ ಅಮಿತ್ ಶಾ ಅವರಾಗಲಿ , ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾರಾಗಲಿ ಬಂದಿರಲಿಲ್ಲ. ಹೈಕಮಾಂಡ್ ಕಡೆಯಿಂದ ಎಂಬಂತೆ ಕೇಂದ್ರ ಸಚಿವೆ ಸ್ಮೃತಿ ಇರಾನಿ ಮಾತ್ರ ಬಂದಿದ್ದರು. ಪ್ರಬಲ ಹೈಕಮಾಂಡ್‌ರ ಗೈರು ವೇದಿಕೆ ಮೇಲೆ ಎದ್ದು ಕಾಣಿಸುತ್ತಿತ್ತು. ಈ ಸಮಯದಲ್ಲಿ ಬಾರದ ಮೋದಿಯವರನ್ನು ದಸರಾಗೆ ಕರೆಸುವ ಮೂಲಕ ರಾಜ್ಯಕ್ಕೆ ಸಂದೇಶವನ್ನು ಸಾರುವ ಕೆಲಸವನ್ನು ಮಾಡಲು ಬಿಜೆಪಿ ನಿರ್ಧರಿಸಿದೆ.

ಮೋದಿ ಮಾತಿನಂತೆ ದಸರಾಗೆ ಆಹ್ವಾನ?
ರಾಜ್ಯಕ್ಕೆ ಆಗಮಿಸಿದ್ದ ಪ್ರಧಾನಿ ನರೇಂದ್ರ ಮೋದಿಯವರು ಅಭಿವೃದ್ಧಿ ಮತ್ತು ಮುಂಬರುವ ಚುನಾವಣೆಯಲ್ಲಿ ದೃಷ್ಟಿಕೋನದಲ್ಲಿಟ್ಟುಕೊಂಡು ತಿಂಗಳಿಗೊಮ್ಮೆ ರಾಜ್ಯಕ್ಕೆ ಬರುವುದಾಗಿ ಹೇಳಿದ್ದರು. ಇದರ ಲಾಭವನ್ನು ಪಡೆಯಲು ಸಿಎಂ ಬೊಮ್ಮಾಯಿ ಸನ್ನದ್ದರಾಗಿದ್ದು ಮೋದಿಯವರನ್ನು ದಸರಾ ಜಂಭು ಸವಾರಿಗೆ ಆಹ್ವಾನವನ್ನು ನೀಡಲು ಸಿಎಂ ಬಸವರಾಜ ಬೊಮ್ಮಾಯಿ ಪ್ಲಾನ್ ಮಾಡಿದ್ದಾರೆ ಎಂದು ತಿಳಿದುಬರುತ್ತಿದೆ.
ಅದ್ದೂರಿ ಆಚರಣೆಯ ವೇಳೆಯಲ್ಲಿ ಪ್ರಧಾನಿ ಮೋದಿಯವರನ್ನು ಕರೆತಂದರೆ ಬಿಜೆಪಿಗೆ ರಾಜಕೀಯ ಲಾಭವಾಗುವುದು ಗ್ಯಾರಂಟಿ ಎನ್ನಲಾಗಿದೆ. ಇದಕ್ಕಾಗಿಯೇ ಮೋದಿಯವರನ್ನು ಜಂಬೂಸವಾರಿಗೆ ಕರೆತರಲು ಸಿಎಂ ಪ್ರಯತ್ನಿಸುತ್ತಿದ್ದಾರೆ ಎನ್ನಲಾಗುತ್ತಿದೆ.












Click it and Unblock the Notifications