ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರಲ್ಲಿ ಇದೇನಿದು ಚೇಸಿಂಗ್ ದಿ ವೈರಸ್ ಕಾರ್ಯಾಚರಣೆ?

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ಜುಲೈ 16: ಮೈಸೂರು ಜಿಲ್ಲೆಯಲ್ಲಿ ಕೊರೊನಾ ಅಬ್ಬರ ಮುಂದುವರಿದಿದ್ದು, ಹೆಚ್ಚು ಪ್ರಕರಣಗಳು ದಾಖಲಾಗಿರುವ ಎನ್‍.ಆರ್. ಕ್ಷೇತ್ರ ವ್ಯಾಪ್ತಿಯಲ್ಲಿ ಶುಕ್ರವಾರದಿಂದ "ಚೇಸಿಂಗ್ ದಿ ವೈರಸ್ ಕಾರ್ಯಾಚರಣೆ" ಕಾರ್ಯಾಚರಣೆ ಆರಂಭಿಸಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.

Recommended Video

Plasma ದಾನ ಮಾಡಿದರೆ 5000 ಕೊಡ್ತೀವಿ - Karnataka Government | Oneindia Kannada

ಎನ್.ಆರ್.ಕ್ಷೇತ್ರ ವ್ಯಾಪ್ತಿಯಲ್ಲಿ ಕೊರೊನಾ ಸೋಂಕು ಹರಡುವಿಕೆ ಹಾಗೂ ಜಿಲ್ಲೆಯ ಸಾವಿನ ಪ್ರಮಾಣ ಸಹ ಹೆಚ್ಚಾಗಿರುವುದು ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ಈ ಹಿನ್ನೆಲೆಯಲ್ಲಿ ಎನ್.ಆರ್.ಕ್ಷೇತ್ರವನ್ನು ಲಾಕ್ ಡೌನ್ ಮಾಡಲು ಜಿಲ್ಲಾಡಳಿತ ತೀರ್ಮಾನಿಸಿದೆ. ಸೋಂಕು ಹರಡುವುದನ್ನು ತಡೆಯುವ ನಿಟ್ಟಿನಲ್ಲಿ ಮುಂಬೈನ ಧಾರಾವಿ ಮಾದರಿಯಲ್ಲಿ ಚೇಸಿಂಗ್ ದಿ ವೈರಸ್ ಶೀರ್ಷಿಕೆಯಡಿ ಕಾರ್ಯಾಚರಣೆ ನಡೆಸಲು ಚಿಂತನೆ ಮಾಡಲಾಗಿದೆ.

ಮೈಸೂರಿನಲ್ಲಿ ಮತ್ತೆ 99 ಕೊರೊನಾ ವೈರಸ್ ಕೇಸ್ ಪತ್ತೆ, 6 ಸಾವುಮೈಸೂರಿನಲ್ಲಿ ಮತ್ತೆ 99 ಕೊರೊನಾ ವೈರಸ್ ಕೇಸ್ ಪತ್ತೆ, 6 ಸಾವು

Changing The Virus Operation To Stop Coronavirus Spread In Mysuru

ಈ ಸಂಬಂಧ ಸ್ಥಳೀಯ ಮುಖಂಡರು, ಪೊಲೀಸ್ ಇಲಾಖೆ, ಆರೋಗ್ಯ ಇಲಾಖೆ, ಪಾಲಿಕೆ ಅಧಿಕಾರಿಗಳು ಹಾಗೂ ಸ್ವಯಂ ಸೇವಕರ ಜೊತೆಗೆ ಜಿಲ್ಲಾಧಿಕಾರಿಗಳು ಹಲವು ಸುತ್ತಿನ ಮಾತುಕತೆ ಮುಗಿಸಿದ್ದು, ಸಂಜೆಯಿಂದಲೇ ಎನ್.ಆರ್.ಕ್ಷೇತ್ರದ ಹಲವು ಭಾಗ ಲಾಕ್ ಡೌನ್ ಮಾಡುವ ಸಾಧ್ಯತೆ ಇದೆ.

English summary
As Coronavirus cases rising in Mysuru, the district administration Preparing to launch "Chasing the Virus Operations" from Friday,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X