ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸುಳ್ವಾಡಿ ಜನರು ನರಹಂತಕ ವೀರಪ್ಪನ್ ನನ್ನು ನೆನಪಿಸಿಕೊಂಡಿದ್ದೇಕೆ?

|
Google Oneindia Kannada News

Recommended Video

Chamarajanagar : ಸುಳ್ವಾಡಿ ಜನರು ನರಹಂತಕ ವೀರಪ್ಪನ್ ನನ್ನು ನೆನಪಿಸಿಕೊಂಡಿದ್ದೇಕೆ?

ಮೈಸೂರು, ಡಿಸೆಂಬರ್ 18 : ವಿಷಪ್ರಸಾದಕ್ಕೆ ಬಲಿಯಾದ ಆಘಾತದಿಂದ ಇಡೀ ಗ್ರಾಮದ ಜನರು ಇನ್ನೂ ಹೊರಬಂದಿಲ್ಲ. ಅದರ ನಡುವೆ ಇಲ್ಲಿನ ಜನರನ್ನು ಮಾತನಾಡಿಸಲು ಸಿಕ್ಕಾಗ ಒಬ್ಬೊಬ್ಬರದು ಒಂದೊಂದು ಕಥೆ. 1997ರ ಆಗಸ್ಟ್‌ 15ರಂದು ಚಾಮರಾಜನಗರ ಜಿಲ್ಲೆ ಮೈಸೂರಿನಿಂದ ಬೇರ್ಪಟ್ಟು ಪ್ರತ್ಯೇಕ ಜಿಲ್ಲೆಯಾಯಿತು.

ನಂತರ ಜಿಲ್ಲೆಯಲ್ಲಿ ಇಷ್ಟು ದೊಡ್ಡ ಪ್ರಮಾಣದ ಸಾವು -ನೋವು ಸಂಭವಿಸಿಲ್ಲ. ಇಂತಹ ಪೈಶಾಚಿಕ ಕೃತ್ಯವೂ ನಡೆದಿಲ್ಲ.ಪ್ರಾಣಘಾತುಕ ವಿಷ ಆಹಾರವನ್ನು ಸೇವಿಸಿ, ಜನರು ಸಾಮೂಹಿಕವಾಗಿ ಪ್ರಾಣಕಳೆದುಕೊಂಡ ಅಥವಾ ತೀವ್ರ ರೀತಿಯಲ್ಲಿ ಅಸ್ವಸ್ಥಗೊಂಡು 80-90 ಜನರು ಸಾವು ಬದುಕಿನ ಮಧ್ಯೆ ಹೋರಾಟ ನಡೆಸುತ್ತಿರುವ ಪ್ರಕರಣಗಳು ನಡೆದಿಲ್ಲ ಎಂದು ಹೇಳುತ್ತಾರೆ ಜಿಲ್ಲೆಯ ಹಿರಿಯ ಪರಿಸರವಾದಿ ಪುಣಜನೂರು ದೊರೆಸ್ವಾಮಿ.

ವೀರಪ್ಪನ್ ಜೊತೆ ಸಫಾರಿ ಚಾಲಕ ಮುಖಾಮುಖಿಯಾದ ರೋಚಕ ಕಥೆ ವೀರಪ್ಪನ್ ಜೊತೆ ಸಫಾರಿ ಚಾಲಕ ಮುಖಾಮುಖಿಯಾದ ರೋಚಕ ಕಥೆ

ಜಿಲ್ಲೆ ಇನ್ನೂ ಮೈಸೂರಿನೊಂದಿಗೆ ಬೆಸೆದಿದುಕೊಂಡಿದ್ದ ಅವಧಿಯಲ್ಲಿ, 90ರ ದಶಕದ ಆರಂಭದಲ್ಲಿ ಮಲೆಮಹದೇಶ್ವರ ಅರಣ್ಯ ಹಾಗೂ ಇನ್ನಿತರ ಅರಣ್ಯ ಪ್ರದೇಶಗಳನ್ನು ತನ್ನ ಕಾರ್ಯಕ್ಷೇತ್ರವನ್ನಾಗಿ ಮಾಡಿಕೊಂಡಿದ್ದ ನರಹಂತಕ ವೀರಪ್ಪನ್ ನಾಲ್ಕೈದು ಬಾರಿ ದ್ವೇಷದ ಕ್ರೌರ್ಯ ಮೆರೆದು ಸಾಮೂಹಿಕವಾಗಿ ಹಲವರನ್ನು ಹತ್ಯೆ ಮಾಡಿದ್ದ. ಅದೇ ಕೊನೆ. ಆ ನಂತರ ಸಾಮೂಹಿಕ ನರಮೇಧ ಪ್ರಕರಣಗಳು ಈ ಭಾಗದಲ್ಲಿ ನಡೆದಿರಲಿಲ್ಲ ಎಂದು ಹೇಳುತ್ತಾರೆ ಹಿರಿಯರು. ಮುಂದೆ ಓದಿ..

ಪೊಲೀಸರ ಮೇಲೆ ದ್ವೇಷ

ಪೊಲೀಸರ ಮೇಲೆ ದ್ವೇಷ

ಸದಾ ಪೊಲೀಸರ ಮೇಲೆ ದ್ವೇಷ ಕಾರುತ್ತಲೇ ಇದ್ದ ವೀರಪ್ಪನ್ 1992ರ ಮೇ 19ರಂದು ಹನೂರು ತಾಲ್ಲೂಕಿನ ರಾಮಾಪುರ ಪೊಲೀಸ್‌ ಠಾಣೆಯ ಮೇಲೆ ಏಕಾಏಕಿ ದಾಳಿ ನಡೆಸಿ ಐವರು ಪೊಲೀಸ್‌ ಸಿಬ್ಬಂದಿಯನ್ನು ಹತ್ಯೆ ಮಾಡಿದ್ದ.

ಅದೇ ವರ್ಷ ಆಗಸ್ಟ್‌ 14ರಂದು ಮೀಣ್ಯಂ ಬಳಿ ಹೊಂಚು ಹಾಕಿ ಕುಳಿತು, ಅಂಬಾಸಿಡರ್ ಕಾರಿನಲ್ಲಿ ಬರುತ್ತಿದ್ದ ಎಸ್‌ಪಿ ಹರಿಕೃಷ್ಣ, ಪೊಲೀಸ್ ಅಧಿಕಾರಿ ಶಕೀಲ್ ಅಹಮದ್‌ ಹಾಗೂ ಇತರ ಪೊಲೀಸ್‌ ಸಿಬ್ಬಂದಿ ಮೇಲೆ ಗುಂಡಿನ ಮಳೆಗೆರದು, ಏಳು ಜನರನ್ನು ಹತ್ಯೆ ಮಾಡಿ ಕ್ರೌರ್ಯ ಮೆರೆದಿದ್ದ.

ನೆಲಬಾಂಬ್ ಸ್ಫೋಟ

ನೆಲಬಾಂಬ್ ಸ್ಫೋಟ

1993ರ ಏಪ್ರಿಲ್‌ 9ರಂದು ಪೊಲೀಸ್‌ ಹಾಗೂ ಅರಣ್ಯ ಇಲಾಖೆಯ ಸಿಬ್ಬಂದಿ ಪ್ರಯಾಣಿಸುತ್ತಿದ್ದ ಎರಡು ವಾಹನಗಳನ್ನು ಮಹದೇಶ್ವರ ಬೆಟ್ಟದ ವ್ಯಾಪ್ತಿಯ ಪಾಲಾರ್ ರಸ್ತೆಯಲ್ಲಿ ನೆಲಬಾಂಬ್ ಹುದಗಿಸಿಟ್ಟು ಸ್ಫೋಟಿಸಿದ್ದ ವೀರಪ್ಪನ್. ಈ ಭೀಕರ ದುರಂತದಲ್ಲಿ 22 ಮಂದಿ ಜೀವ ತೆತ್ತಿದ್ದರು.

ಸುಳ್ವಾಡಿ ವಿಷಪ್ರಸಾದ ಸೇವನೆ ಪ್ರಕರಣ:ತನಿಖೆ ವಿಳಂಬ ಸಾಧ್ಯತೆಸುಳ್ವಾಡಿ ವಿಷಪ್ರಸಾದ ಸೇವನೆ ಪ್ರಕರಣ:ತನಿಖೆ ವಿಳಂಬ ಸಾಧ್ಯತೆ

ಐವರು ಸಾವು

ಐವರು ಸಾವು

1991-93ರ ನಡುವಿನ ಅವಧಿಯಲ್ಲಿ, ತನ್ನ ಪತ್ನಿಯನ್ನು ತಮಿಳುನಾಡು ಪೊಲೀಸರಿಗೆ ಒಪ್ಪಿಸಿದ ಕಾರಣಕ್ಕೆ ಚಾಮರಾಜನಗರ ತಾಲ್ಲೂಕಿನ ಪುಣಜನೂರಿನಲ್ಲಿ ಐವರು ನಾಗರಿಕರನ್ನು ದಾರುಣವಾಗಿ ಕೊಂದು ರಣಕೇಕೆ ಹಾಕಿದ್ದ.

ನೆನೆಯುತ್ತಿರುವುದು ವಿಪರ್ಯಾಸವೇ!

ನೆನೆಯುತ್ತಿರುವುದು ವಿಪರ್ಯಾಸವೇ!

ನಮ್ಮ ರಾಜ್ಯದವರು ಹಾಗೂ ತಮಿಳುನಾಡಿನವರು ಸೇರಿದಂತೆ ವೀರಪ್ಪನ್ ಒಟ್ಟು 114 ಜನರನ್ನು ಹತ್ಯೆ ಮಾಡಿದ್ದ. ಪೊಲೀಸರು, ಅರಣ್ಯ ಅಧಿಕಾರಿಗಳು ಹಾಗೂ ತನ್ನ ಬಗ್ಗೆ ಮಾಹಿತಿ ನೀಡುತ್ತಿರುವವರ ಮೇಲೆ ಸದಾ ಹಗೆ ಸಾಧಿಸುತ್ತಿದ್ದ ವೀರಪ್ಪನ್ ಅವರನ್ನು ನಿರ್ದಾಕ್ಷಿಣ್ಯವಾಗಿ ಹತ್ಯೆ ಮಾಡುವ ಮೂಲಕ ಸ್ಥಳೀಯರಲ್ಲಿ ಭಯ ಬಿತ್ತಿದ್ದರು ಎನ್ನುತ್ತಾರೆ. ಒಟ್ಟಾರೆ ಈ ದುರಂತದ ನಡುವೆ ಇಲ್ಲಿನ ಜನರು ನರಹಂತಕನನ್ನು ನೆನೆಯುತ್ತಿರುವುದು ವಿಪರ್ಯಾಸವೇ ಸರಿ.

ವಿಷಪ್ರಸಾದ ಸೇವನೆ : ದಾರಿತಪ್ಪಿದ ಚಾಲಕನಿಂದ 35 ಜೀವ ಉಳಿಯಿತುವಿಷಪ್ರಸಾದ ಸೇವನೆ : ದಾರಿತಪ್ಪಿದ ಚಾಲಕನಿಂದ 35 ಜೀವ ಉಳಿಯಿತು

English summary
After Veerappan cruelty this sulvadi poison food incident taken so many peoples as death remark.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X