• search
  • Live TV
ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಗ್ರೀನ್ ಟೀಯಾಯ್ತು, ಇನ್ಮುಂದೆ ಮಾರುಕಟ್ಟೆಗೆ ಲಗ್ಗೆ ಇಡಲಿದೆ ಗ್ರೀನ್ ಕಾಫಿ

|

ತೆಳ್ಳಗಾಗೋದಕ್ಕೆ ಹಾಗೂ ಆರೋಗ್ಯ ವೃದ್ಧಿಗೆ ಸಾಮಾನ್ಯವಾಗಿ ನೀವು ಗ್ರೀನ್ ಟೀ ಕುಡಿಯೋದನ್ನು ಕೇಳಿರುತ್ತೀರಾ. ಅದರೊಟ್ಟಿಗೆ ಗ್ರೀನ್ ಟೀ ತಂತ್ರಜ್ಞಾನವು ಒಂದು ಶುರುವಾಗಿದೆ. ಅದೇನಪ್ಪಾ ಅಂದ್ರಾ , ಹೌದು ಪ್ರತಿಷ್ಠಿತ ಕೇಂದ್ರೀಯ ಆಹಾರ ತಂತ್ರಜ್ಞಾನ ಮತ್ತು ಸಂಶೋಧನಾ ಕೇಂದ್ರ (ಸಿಎಫ್‌ಟಿಆರ್‌ಐ) ಈ ಗ್ರೀನ್ ಕಾಫಿಯನ್ನು ಕಂಡುಹಿಡಿದಿದ್ದು ಇದರಿಂದ ದೇಶದಲ್ಲಿ ಪ್ರಥಮವಾಗಿ ಗ್ರೀನ್‌ ಕಾಫಿ ವಾಣಿಜ್ಯ ಉತ್ಪಾದನೆ ಶೀಘ್ರವೇ ಶುರುವಾಗಲಿದೆ

ಕಾಫಿಯ ಘಮ ಹುಡುಕಿ ಅಧ್ಯಯನಕ್ಕೆ ಕೊಡಗಿಗೆ ಬಂದ ವಿದೇಶಿಗರು

ಸದ್ಯ ಇದನ್ನು ಬೆಂಗಳೂರಿನ ಸುಬ್ಬೂಸ್ ಕಾಫಿ ಸಂಸ್ಥೆಯು 5 ಲಕ್ಷಕ್ಕೆ ಅದನ್ನು ಖರೀದಿಸಿದೆ. ಕಳೆದೆರಡು ತಿಂಗಳ ಹಿಂದೆ ತಿಂಗಳ ಹಿಂದೆ ಸಿಎಫ್‌ಟಿಆರ್‌ಐ ಈ ತಂತ್ರಜ್ಞಾನ ಅಭಿವೃದ್ಧಿಯನ್ನು ದೃಢೀಕರಿಸಿದ್ದು, ವಾಣಿಜ್ಯ ಉತ್ಪಾದನೆಗೆ ಪ್ರಮಾಣಪತ್ರವನ್ನೂ ನೀಡಿದೆ. ಸದ್ಯ ಇದನ್ನು ಬೆಂಗಳೂರಿನ ಸುಬ್ಬೂಸ್ ಕಾಫಿ ಸಂಸ್ಥೆಯು 5 ಲಕ್ಷದ ಹಕ್ಕನ್ನು ಖರೀದಿಸಿದೆ.

ಸುರಿವ ಮಳೆ, ಬೆಚ್ಚನೆಯ ಕಾಫಿ ಮಲೆನಾಡಿಗರ ಜೀವಾಳ

ಇದರ ತಯಾರಿ ಹೇಗೆ ?

ಬ್ಲ್ಯಾಕ್‌ ಟೀ, ಬ್ಲ್ಯಾಕ್‌ ಕಾಫಿ ಹಾಗೆಯೇ ಗ್ರೀನ್‌ ಕಾಫಿ ಆವಿಷ್ಕಾರ. ಇದು ಸಾಮಾನ್ಯ ಕಾಫಿಯಂತೆ, ಪುಡಿ ಬೇಯಿಸಿ ಪಾನೀಯ ಮಾಡುವಂಥದ್ದಲ್ಲ. ಬದಲಿಗೆ ಇನ್ನೂ ಹಸಿರಾಗೇ ಇರುವ ಕಾಫಿ ಬೀಜದ ಸಾರ ಸಂಗ್ರಹಿಸಿ, ಅದನ್ನು ಸಂಸ್ಕರಿಸಿ ರಸ ತಯಾರಿಸಲಾಗುತ್ತದೆ. 100 ಮಿಲಿ ಲೀಟರ್‌ ನೀರಿನೊಂದಿಗೆ 1 ಮಿಲಿ ಲೀಟರ್‌ ಹಸಿರು ಕಾಫಿ ರಸವನ್ನು ಬೆರೆಸಿ ತಯಾರಾಗುವುದೇ ಗ್ರೀನ್ ಟೀ. ಈ ರೀತಿಯ ಪದ್ಧತಿ ಮಲೆನಾಡು ಪ್ರದೇಶದಲ್ಲಿ ಈಗಾಗಲೇ ಜಾರಿಯಲ್ಲಿದೆ. ಅದಕ್ಕೀಗ ವೈಜ್ಞಾನಿಕತೆಯ ಲೇಪ ನೀಡಲಾಗಿದೆ. ಸಿಎಫ್‌ಟಿಆರ್‌ಐನ ಸಾಂಬಾರು ಪದಾರ್ಥ ಹಾಗೂ ಸ್ವಾದ ವಿಭಾಗದ ಹಿರಿಯ ವಿಜ್ಞಾನಿ ಡಾ.ಪುಷ್ಪಾಮೂರ್ತಿ, ಸತತ ಮೂರು ವರ್ಷ ಅಧ್ಯಯನ ನಡೆಸಿ ಈ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿದ್ದಾರೆ.

ಮೈಸೂರಿನ ಸಿಎಫ್ ಟಿಆರ್ ಐ ನಲ್ಲಿದೆ ಊಹಿಸಲು ಸಾಧ್ಯವಾಗದ ಅತ್ಯಾಧುನಿಕ ಆಹಾರ ಉತ್ಪನ್ನಗಳು

ಕಾಫಿ ಬೀಜವನ್ನು ಒಣಗಿಸಿ, ಹುರಿದು ಪುಡಿ ಮಾಡಿದರೆ ಅದರಲ್ಲಿನ ಸಾಕಷ್ಟು ಜೀವಪೋಷಕ ಅಂಶಗಳು ನಾಶವಾಗುತ್ತವೆ. ಕೆಫೀನ್‌ಮಾತ್ರ ಉಳಿದಿರುತ್ತದೆ. ಹೀಗಾಗಿ, ಕಾಫಿಯ ಔಷಧೀಯ ಗುಣಗಳು ಕ್ಷೀಣಿಸುತ್ತವೆ. ಈ ವಿಚಾರ ತಿಳಿದಿರುವ ಸ್ಥಳೀಯರು ಕಾಫಿ ಬೀಜವನ್ನು ಒಣಗಿಸದೇ, ಅದರ ರಸವನ್ನು ತೆಗೆದು ಔಷಧಿಯಾಗಿ ಬಳಸುತ್ತಿದ್ದಾರೆ. ಹಸಿರು ಕಾಫಿಯಲ್ಲಿ ಕ್ಲೋರೊಜೆನಿಕ್ ಆ್ಯಸಿಡ್ ಎಂಬ ರಾಸಾಯನಿಕವು ದೇಹದ ಬೊಜ್ಜನ್ನು ಕರಗಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ರೋಗ ನಿರೋಧಕ ಶಕ್ತಿ ವೃದ್ಧಿಸುವಂತೆ ಮಾಡುತ್ತದೆ. ಡೊಳ್ಳು ಹೊಟ್ಟೆ ಕರಗಿಸುವಲ್ಲಿ ಇದರ ಪಾತ್ರ ಹಿರಿದು. ಹೀಗಾಗಿ, ನಾವು ಹಸಿರು ಕಾಫಿಯ ಸಾಂದ್ರೀಕೃತ ಡಿಕಾಕ್ಷನ್‌ ತಯಾರಿಸಿದ್ದೇವೆ. ಇದರಿಂದ ಕಾಫಿ ಔಷಧಿಯಾಗಿಯೂ ಬಳಕೆಯಾಗಲಿದೆ ಎನ್ನುತ್ತಾರೆ.

ಕಾಫಿ ಪ್ರಿಯರಿಂದ ಕಾಫಿ ಪ್ರಿಯರಿಗಾಗಿ ಆನ್ಲೈನ್ ಕೆಫೆ

ಒಟ್ಟಾರೆ ಈ ಗ್ರೀನ್ ಟೀ ಹೊರತಾಗಿ ಗ್ರೀನ್ ಕಾಫಿ ಇನ್ನೇನು ಮಾರುಕಟ್ಟೆಗೆ ಲಗ್ಗೆ ಇಡುವುದರಲ್ಲಿ ಯಾವುದೇ ಸಂಶಯವಿಲ್ಲ..

English summary
New green coffee technology invented by CFTRI researcher Dr.Pushpamurthy. This rights has been taken Bangaluru Subbus coffee shop has acaquired the rights to sell Green Coffee by spending amount Rs 5 Lakh.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X